More

    ಇನ್ನೂ ಒಂದು ವಾರ ಮಾರುಕಟ್ಟೆಗಳು ಬಂದ್​!

    ಬೆಂಗಳೂರು: ಕೋವಿಡ್​ ಸೋಂಕು ರಾಜ್ಯ ರಾಜಧಾನಿಯಲ್ಲಿ ತೀವ್ರಗತಿಯಲ್ಲಿ ಹರಡುತ್ತಿದ್ದು, ನಗರ ನಿವಾಸಿಗಳಾದಿಯಾಗಿ ಸಣ್ಣಪುಟ್ಟ ವ್ಯಾಪಾರಿಗಳೂ ಬೆಚ್ಚಿಬಿದ್ದಿದ್ದಾರೆ. ಮಹಾಮಾರಿ ಸೋಂಕು ಹರಡುವಿಕೆ ನಿಯಂತ್ರಣದ ನಿಟ್ಟಿನಲ್ಲಿ ನಗರದ ಬಹುತೇಕ ಮಾರುಕಟ್ಟೆಗಳು ಜು. 6ರವರೆಗೆ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿವೆ.

    ಇನ್ನೂ ಒಂದು ವಾರ ಬಹುತೇಕ ಮಾರುಕಟ್ಟೆಗಳು ಬಂದ್​ ಆಗಲಿದ್ದು, ಪರ್ಯಾಯ ಕ್ರಮಕ್ಕೆ ವ್ಯಾಪಾರಸ್ಥರು ಚಿಂತನೆ ನಡೆಸಿದ್ದಾರೆ. ಈಗಾಗಲೇ ಸಿಂಗೇನ ಅಗ್ರಹಾರ ಹಣ್ಣಿನ ಮಾರುಕಟ್ಟೆ, ಮಲ್ಲೆಶ್ವರ ಆಸುಪಾಸಿನ ಪ್ರದೇಶಗಳ ವಾಣಿಜ್ಯ ವಹಿವಾಟು, ಡಿವಿಜಿ ರಸ್ತೆ, ಗಾಂಧಿ ಬಜಾರ್​ನ ಮಳಿಗೆಗಳು ಬಂದ್​ ಆಗಿದೆ. ಜೂ.6ರ ನಂತರ ಕೆಲ ಪ್ರದೇಶಗಳಲ್ಲಿ ದಿನ ಬಿಟ್ಟು ದಿನ ವಹಿವಾಟು ನಡೆಸಲು ವ್ಯಾಪಾರಿಗಳು ನಿರ್ಧರಿಸಿದ್ದಾರೆ. ಇದನ್ನೂ ಓದಿರಿ video/ ಶವವನ್ನು ದರದರನೆ ಎಳೆತಂದು ಗುಂಡಿಗೆ ಎಸೆಯುತ್ತಾರೆ… ಕರ್ನಾಟಕದಲ್ಲಿ ಮಣ್ಣಾಯ್ತಾ ಮಾನವೀಯತೆ?

    ಚಿಕ್ಕಪೇಟೆ, ಕೆ.ಆರ್​. ಮಾರುಕಟ್ಟೆ ಸುತ್ತಲಿನ ಪ್ರದೇಶ, ಅವೆನ್ಯೂ ರಸ್ತೆ ಅಕ್ಕಪಕ್ಕದ ರಸ್ತೆಗಳನ್ನು ಸೀಲ್​ಡೌನ್​ ಮಾಡಲಾಗಿದೆ. ಜು.6ರ ನಂತರ ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ನೋಡಬೇಕಿದೆ ಎಂದು ಕರ್ನಾಟಕ ಪ್ರಕಾಶಕರ ಮತ್ತು ಪುಸ್ತಕ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎ. ರಮೇಶ್​ ತಿಳಿಸಿದ್ದಾರೆ.

    ಚಿಕ್ಕಪೇಟೆ ಸುತ್ತಲಿನ ಜ್ಯುವೆಲ್ಲರಿ, ಬಟ್ಟೆ ವ್ಯಾಪಾರಿಗಳು ಹಾಗೂ ಹಲವು ವರ್ತಕರ ಸಂಘಟನೆಗಳು ಸ್ವಯಂಪ್ರೇರಿತ ಬಂದ್​ಗೆ ಸಹಕಾರ ನೀಡಿವೆ. ಹೊಸ ತರಗುಪೇಟೆ ವರ್ತಕರ ಸಂಘ ಜು.6 ನಂತರ ಸೋಮವಾರ, ಮಂಗಳವಾರ, ಗುರುವಾರ, ಶನಿವಾರ ಹೊರತು ಪಡಿಸಿ, ಉಳಿದ ದಿನ ಮಾರುಕಟ್ಟೆ ಬಂದ್​ ಮಾಡಲು ನಿರ್ಧರಿಸಿದೆ. ಸಂಘದಿಂದ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸಿ ವಹಿವಾಟು ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಎನ್​.ಟಿ. ಪೇಟೆ ವರ್ತಕರ ಅಧ್ಯಕ್ಷ ದಿನೇಶ್​ ತಿಳಿಸಿದ್ದಾರೆ.

    ಯಶವಂತಪುರ ಎಪಿಎಂಸಿ ಪ್ರಾಂಗಣದಲ್ಲಿನ ಮಳಿಗೆ ವರ್ತಕರಿಗೆ ಕರೊನಾ ಪಾಸಿಟಿವ್​ ಬಂದಿರುವ ಹಿನ್ನೆಲೆ ಕೆಲ ಮಳಿಗೆಗಳನ್ನು ಸೀಲ್​ಡೌನ್​ ಮಾಡಲಾಗಿದೆ. ಜು.6ರ ನಂತರ ವಾರದಲ್ಲಿ 3 ದಿನ (ಮಂಗಳವಾರ, ಗುರುವಾರ, ಶನಿವಾರ) ವಹಿವಾಟು ನಡೆಸಲು ಬೇಳೆ ಕಾಳು ಹಾಗೂ ದಿನಸಿ ಪದಾರ್ಥಗಳ ವರ್ತಕರ ಸಂಘ ನಿರ್ಧರಿಸಿದೆ.

    ಸಪ್ತಪದಿ ತುಳಿದ ಐದೇ ದಿನಕ್ಕೆ ಮದುಮಗ ಸಾವು, 20 ಜನರಿಗೆ ಕೋವಿಡ್​ ಸೋಂಕು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts