More

    ಭಾರತದಲ್ಲಿ ಕರೊನಾ ಮಹಾಸ್ಫೋಟ! ಒಂದೇ ದಿನ 4 ಲಕ್ಷಕ್ಕೂ ಅಧಿಕ ಪ್ರಕರಣ ದೃಢ

    ನವದೆಹಲಿ: ದೇಶದಲ್ಲಿ ಕರೊನಾ ಸೋಂಕಿನ ತೀವ್ರತೆ ದಿನೇದಿನೆ ಹೆಚ್ಚಾಗಲಾರಂಭಿಸಿದೆ. ಮೊದ ಮೊದಲು ಲಕ್ಷದವರೆಗೆ ಸಾಗುತ್ತಿದ್ದ ಏಕದಿನ ಏರಿಕೆ ಇದೀಗ ದಾಖಲೆಯ ಪ್ರಮಾಣದಲ್ಲಿ ಹೆಚ್ಚಿದೆ. ಶುಕ್ರವಾರ ಒಂದೇ ದಿನ 4 ಲಕ್ಷಕ್ಕೂ ಅಧಿಕ ಪ್ರಕರಣಗಳು ದೃಢವಾಗಿವೆ. 24 ಗಂಟೆಗಳಲ್ಲಿ 3500ಕ್ಕೂ ಅಧಿಕ ಸೋಂಕಿತರು ಸಾವನ್ನಪ್ಪಿದ್ದಾರೆ.

    ಈವರೆಗೆ ದೇಶದಲ್ಲಿ ಒಟ್ಟು 1.91 ಕೋಟಿ ಪ್ರಕರಣಗಳು ದೃಢವಾಗಿವೆ. ಅದರಲ್ಲಿ 1.56 ಕೋಟಿ ಸೋಂಕಿತರು ಗುಣಮುಖವಾಗಿದ್ದರೆ, 32.63 ಲಕ್ಷ ಸಕ್ರಿಯ ಪ್ರಕರಣಗಳು ಬಾಕಿಯಿವೆ. ಸೋಂಕಿನಿಂದಾಗಿ ಸಾವನ್ನಪ್ಪಿದ್ದವರ ಸಂಖ್ಯೆ 2.11 ಲಕ್ಷಕ್ಕೆ ತಲುಪಿದೆ.

    ಎಂದಿನಂತೆ ಶುಕ್ರವಾರವೂ ಮಹಾರಾಷ್ಟ್ರದಲ್ಲೇ ಅತ್ಯಧಿಕ ಪ್ರಕರಣಗಳು ದೃಢವಾಗಿವೆ. ಏಕದಿನ ಏರಿಕೆಯಲ್ಲಿ ಮೊದಲನೇ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 62,919 ನೂತನ ಪ್ರಕರಣಗಳು ಕಾಣಿಸಿಕೊಂಡಿದ್ದರೆ, ಎರಡನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 48,296 ಪ್ರಕರಣ ಮತ್ತು ಮೂರನೇ ಸ್ಥಾನದಲ್ಲಿರುವ ಕೇರಳದಲ್ಲಿ 37,199 ಪ್ರಕರಣಗಳು ದೃಢವಾಗಿವೆ. ಒಟ್ಟು ಸೋಂಕಿತರ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲನೇ ಸ್ಥಾನ, ಕೇರಳ ಎರಡನೇ ಸ್ಥಾನ ಮತ್ತು ಕರ್ನಾಟಕ ಮೂರನೇ ಸ್ಥಾನದಲ್ಲಿದೆ.

    ಶುಕ್ರವಾರ ಒಂದೇ ದಿನ 3524 ಮಂದಿ ಕರೊನಾಕ್ಕೆ ಬಲಿಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ 828, ದೆಹಲಿಯಲ್ಲಿ 375, ಉತ್ತರ ಪ್ರದೇಶದಲ್ಲಿ 332 ಮಂದಿ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. (ಏಜೆನ್ಸೀಸ್)

    ವಧು ಪಾರ್ಲರ್​ನಲ್ಲಿದ್ದಾಗ ಬಂದ ಆ ಒಂದು ಮೆಸೇಜ್​ನಿಂದಾಗಿ ಮದುವೆಯೇ ಕ್ಯಾನ್ಸಲ್​!

    ಆ್ಯಂಕರ್ ಅರುಣ ಬಡಿಗೇರ ತಂದೆ-ತಾಯಿಯನ್ನು ಬಲಿ ತೆಗೆದುಕೊಂಡ ಕರೊನಾ

    ಕಣ್ಣೆದುರೇ ಸೋಂಕಿತರು ಸಾವನ್ನಪ್ಪುತ್ತಿರುವುದನ್ನು ಕಂಡು ಕೈ ಮುಗಿದು ಕಣ್ಣೀರಿಟ್ಟ ವೈದ್ಯಕೀಯ ಅಧಿಕಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts