More

    ಜಿಲ್ಲೆಯಲ್ಲಿ ಮುಂಗಾರು ಮಳೆ ಜೋರು

    ಶಿರಸಿ: ತಾಲೂಕಿನೆಲ್ಲೆಡೆ ಮುಂಗಾರು ಮಳೆ ನಿರಂತರವಾಗಿ ಸುರಿಯುತ್ತಿದ್ದು, ಜಲಮೂಲಗಳು ಜೀವಕಳೆ ಪಡೆದಿವೆ. ಇಲ್ಲಿನ ಅಘನಾಶಿನಿ, ಶಾಲ್ಮಲಾ ನದಿಗಳು ನಿಧಾನವಾಗಿ ತುಂಬುತ್ತಿವೆ. ಬನವಾಸಿ ಹೋಬಳಿಯ ಜೀವನದಿಯಾಗಿರುವ ವರದಾ ನದಿಯ ಒಳ ಹರಿವು ಹೆಚ್ಚಾಗುತ್ತಿದೆ. ರೈತರು ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದು, ಹೊಲಗಳಲ್ಲಿ ಬಿತ್ತನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

    ಮಂಗಳವಾರ ಸುರಿದ ಮಳೆಗೆ ಬನವಾಸಿಯ ದಾಸನಕೊಪ್ಪ ವೃತ್ತದಲ್ಲಿ ಬೃಹತ್ ಮಾವಿನ ಮರ ಧರೆಗುರುಳಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಅರಣ್ಯ ಇಲಾಖೆಯ ಸಿಬ್ಬಂದಿ ಮರವನ್ನು ತೆರವುಗೊಳಿಸಿದ್ದಾರೆ.

    ಕರಾವಳಿಯಲ್ಲಿ ಭಾರಿ ಮಳೆ: ಕಾರವಾರ: ಜಿಲ್ಲೆಯ ಕರಾವಳಿಯಲ್ಲಿ ಭಾರಿ ಹಾಗೂ ಮಲೆನಾಡಿನ ಭಾಗದಲ್ಲಿ ಹದವಾಗಿ ಮಳೆಯಾಗುತ್ತಿದೆ. ವಿವಿಧೆಡೆ ಹಾನಿ ಸಂಭವಿಸಿದೆ. ಮಂಗಳವಾರದ ವರದಿಯಂತೆ ಜಿಲ್ಲೆಯಲ್ಲಿ ಸರಾಸರಿ 62.2 ಮಿಮೀ ಮಳೆಯಾಗಿದೆ. ಅಂಕೋಲಾದಲ್ಲಿ 115.4 ಮಿಮೀ, ಭಟ್ಕಳ-72.2, ಹಳಿಯಾಳ-7.6, ಹೊನ್ನಾವರ-102.2, ಕಾರವಾರ-70.6, ಕುಮಟಾ-115.7, ಮುಂಡಗೋಡ-11.6, ಸಿದ್ದಾಪುರ-68.6, ಶಿರಸಿ-72.5, ಜೊಯಿಡಾ-18.4, ಯಲ್ಲಾಪುರ-29.4 ಮಿಮೀ ಮಳೆಯಾಗಿದೆ. ಇನ್ನೂ ಎರಡು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts