More

    ಕೇರಳ ಪ್ರವೇಶಿಸಿದ ಮುಂಗಾರು ಮಳೆ

    ತಿರುವನಂತಪುರ: ನೈರುತ್ಯ ಮುಂಗಾರು ಮಳೆ ನಿರೀಕ್ಷೆಯಂತೆ ಕೇರಳ ಪ್ರವೇಶ ಮಾಡಿದೆ. ನೈರುತ್ಯ ಮುಂಗಾರು ಮಳೆ ಮಾರುತಗಳು ಕೇರಳಕ್ಕೆ ಜೂ. 1ರಂದು ಪ್ರವೇಶ ಮಾಡಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಅಂದುಕೊಂಡಂತೆ ಕೇರಳಕ್ಕೆ ಮುಂಗಾರು ಮಳೆ ಪ್ರವೇಶವಾಗಿದೆ.

    ಈ ಬಾರಿ ಉತ್ತರ ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆ ಸುರಿಯಲಿದೆ. ಮಧ್ಯ ಹಾಗೂ ದಕ್ಷಿಣ ಭಾರತದಲ್ಲಿ ಸಾಮಾನ್ಯ ಮಳೆಯಾಗಲಿದೆ. ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಕಡಿಮೆ ಮಳೆ ಬೀಳಲಿದೆ ಎಂದು ಭಾರತೀಯ ಹವಮಾನ ಇಲಾಖೆ ತಿಳಿಸಿದೆ.

    ಇದನ್ನೂ ಓದಿ   ಕರೊನಾ, ಅಂಫಾನ್​ ನಡುವೆಯೇ ಈಗ ಅಬ್ಬರಿಸಲಿದೆ ‘ನಿಸರ್ಗ’! ರಾಜ್ಯದ ಮೇಲೂ ಪರಿಣಾಮ

    ಈ ಬಾರಿಯ ಮುಂಗಾರು ಋತು ಜೂನ್​ನಿಂದ ಸೆಪ್ಟಂಬರ್​ವರೆಗೆ ಇರಲಿದೆ. ದೇಶದಲ್ಲಿ ಶೇ.75ರಷ್ಟು ಮಳೆಯಾಗಲಿದೆ. ಕೇರಳದಲ್ಲಿ ಅಧಿಕ ಮಳೆಯಾಗಲಿದೆ ಎಂದು ಭಾರತೀಯ ಹವಮಾನ ಇಲಾಖೆಯ ಮಹಾ ನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ತಿಳಿಸಿದ್ದಾರೆ.

    ಮುಂಗಾರು ಪ್ರವೇಶವಾಗಿರುವ ಹಿನ್ನೆಲೆಯಲ್ಲಿ ಮೀನುಗಾರರಿಗೆಗೆ ಎಚ್ಚರಿಕೆ ನೀಡಲಾಗಿದೆ. ಸರ್ಕಾರ ಕೂಡ ಮಳೆಯಿಂದ ಸಂಭವಿಸುವ ನೈಸರ್ಗಿಕ ವಿಕೋಪ ನಿಭಾಯಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದೆ. (ಏಜೆನ್ಸೀಸ್​)

    PHOTOS: ಪ್ರಿಯಕರನ ಮೋಸಕ್ಕೆ ಬಲಿಯಾದ ನಟಿ ಚಂದನಾರ ಸಂತೋಷದ ಕ್ಷಣಗಳು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts