More

    ಬಸವಸಾಗರಕ್ಕೆ ಹರಿದು ಬಂದ ಮುಂಗಾರು ನೀರು

    ಯಾದಗಿರಿ: ಕೃಷ್ಣಾ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಜೀವ ಕಳೆ ಬರುವ ಲಕ್ಷಣ ಗೋಚರಿಸಿದೆ. ಮುಂಗಾರಿನಲ್ಲಿ ಮೊದಲ ಬಾರಿಗೆ 5081 ಕ್ಯೂಸೆಕ್ ಪ್ರಮಾಣದ ನೀರಿನ ಒಳಹರಿವು ಉಂಟಾಗಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

    ಬರಗಾಲದ ಹೊತರಾಗಿಯೂ ಇನ್ನುಳಿದ ವರ್ಷಗಳ ಜೂನ್ ತಿಂಗಳಿನಲ್ಲಿ ತುಂಬಿ ತುಳುಕುತಿದ್ದ ಬಸವಸಾಗರ ಮುಂಗಾರು ಅಭಾವದಿಂದ ಡೆಡ್ ಸ್ಟೋರೆಜ್ ಹಂತಕ್ಕೆ ತಲುಪಿತ್ತು. ಒಂದು ಕಡೆ ಮಳೆಯಾಗದೆ ಬೆಳೆಗಳು ಒಣಗುತ್ತಾ ಸಾಗಿದ್ದು , ಇನ್ನೊಂದೆಡೆ ಜಲಾಶಯ ಬರಿದಾಗುತ್ತಿರುವುದನ್ನು ಕಂಡು ಅನ್ನದಾತರ ಮುಖಗಳು ಬಾಡಿ ಹೋಗಿದ್ದವು. ಸದ್ಯ ಜಲಾಶಯಕ್ಕೆ ಸ್ವಲ್ಪ ಪ್ರಮಾಣದಲ್ಲಾದರೂ ನೀರಿನ ಒಳಹರಿವಿನಿಂದ ರೈತರ ಮುಖ ಹೂವಿನಂತೆ ಅರಳುತ್ತಿದೆ.

    ಮಹಾರಾಷ್ಟ್ರ ರಾಜ್ಯದ ಕೃಷ್ಣಾ ಕಣಿವೆ ಪ್ರದೇಶಗಳಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ಕೃಷ್ಣಾ ನದಿಗೆ ನೀರು ಹರಿದು ಬರುತ್ತಿದ್ದು, ಭಾನುವಾರ ಆಲಮಟ್ಟಿ ಜಲಾಶಯಕ್ಕೆ 107769 ಕ್ಯೂಸೆಕ್ ನೀರಿನ ಒಳಹರಿವು ಬರುತ್ತಿದ್ದು, ನದಿಗೆ 6 ಸಾವಿರ ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಇದರಿಂದ ಬಸವಸಾಗರ ಜಲಾಶಯಕ್ಕೆ 5081 ಕ್ಯೂಸೆಕ್ ನೀರಿನ ಒಳಹರಿವು ಬರುತ್ತಿದ್ದರಿಂದ ಸಮಾಧಾನ ತಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts