More

    ಮುಂದಿನ ವಾರದಲ್ಲೇ ಬರುತ್ತಿದೆ ಮಾನ್ಸೂನ್​: ಕಾದಿದೆಯಾ ಮತ್ತಷ್ಟು ಅಪಾಯ, ಹವಾಮಾನ ಇಲಾಖೆ ಹೇಳಿದ್ದೇನು?

    ಕೊಚ್ಚಿನ್​: ಈಗಾಗಲೇ ಎಡಬಿಡದೇ ಸುರಿಯುತ್ತಿರುವ ಅಕಾಲಿಕ ಮಳೆ ಭಾರೀ ಅನಾಹುತವನ್ನೇ ಸೃಷ್ಟಿ ಮಾಡಿದ್ದು, ಇದರ ಬೆನ್ನಲ್ಲೇ ಮುಂಗಾರು ಪ್ರವೇಶಿಸಲಿದ್ದು, ಮುಂದಿನ ವಾರದಿಂದ ಮತ್ತಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಮಾನ್ಸೂನ್​ ಪ್ರವೇಶಕ್ಕೂ ಮುನ್ನ ಸುರಿಯುತ್ತಿರುವ ಮಳೆಯಿಂದಾಗಿ ಈಗಾಗಲೇ ಜನರು ಸಂಕಷ್ಟಕ್ಕೀಡಾಗಿದ್ದು, ಈ ಬಾರಿ ಅವಧಿಗೂ ಮುನ್ನ ಪ್ರವೇಶಿಸುತ್ತಿರುವ ಮಾನ್ಸೂನ್​ ಮಾರುತಗಳು ಭಾರೀ ಮಳೆ ಸುರಿಸುವ ಸಾಧ್ಯತೆ ಇದೆ.

    ಇನ್ನು ಕರಾವಳಿ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿಯನ್ನೇ ತಂದೊಡ್ಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಾರಿ ಮೂರು ದಿನ ಮೊದಲೇ ಮಾನ್ಸೂನ್​ ಮಳೆಯಾಗಲಿದ್ದು, ಪ್ರತಿ ವರ್ಷ ಜೂನ್​ 1 ರಂದು ಪ್ರವೇಶಿಸುತ್ತಿದ್ದ ಮಾರುತಗಳು ಈ ಬಾರಿ ಮೇ 27ರಂದೇ ಪ್ರವೇಶಿಸುತ್ತಿವೆ.

    ಕೇರಳಕ್ಕೆ ತಲುಪುತ್ತಿದ್ದಂತೆ ಭಾರೀ ಮಳೆ ಸುರಿಸಲಿರುವ ಮಾನ್ಸೂನ್​ ಮಳೆ ಕರ್ನಾಟಕಕ್ಕೆ ಬರುತ್ತಿದ್ದಂತೆ ಮಳೆ ಪ್ರಮಾಣ ತಗ್ಗಿಸುವ ಸಾಧ್ಯತೆ ಇದೆ. ಹಾಗಾಗಿ ಭಾರೀ ಮಳೆಯಾಗುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳಿದೆ.

    ಮಾನ್ಸೂನ್​​ ಮಳೆ ಈ ಬಾರಿಯೂ ಉತ್ತಮ ಮಳೆಯಾಗಲಿದ್ದು, ದೇಶಾದ್ಯಂತ ಮಳೆ ಕೊರತೆ ಕಾಡುವುದಿಲ್ಲ. ಸದ್ಯ ರಾಷ್ಟ್ರ ರಾಜದಾನಿ ದೆಹಲಿಯಲ್ಲಿ ಮಾತ್ರ ಬಿಸಿಗಾಳಿ ಬೀಸುತ್ತಿದ್ದು, ಗರಿಷ್ಠ 45 ಡಿಗ್ರಿ ತಾಪಮಾನವಿದೆ. ಮುಂದಿನ ವಾರದಿಂದ ಇದು ತಗ್ಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. (ಏಜೆನ್ಸೀಸ್​)

    ಕೆನಡಾ ಸಂಸತ್​​ನಲ್ಲಿ ಕನ್ನಡದ ಕಂಪು: ಕುವೆಂಪು ಅವರ ಗೀತೆ ಹಾಡಿದ ಸಂಸದನ ವಿಡಿಯೋ ವೈರಲ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts