More

    ಕರೊನಾ ಬೆನ್ನಲ್ಲೇ ಅಮೆರಿಕಾಕ್ಕೆ ಮತ್ತೊಂದು ಶಾಕ್! 18 ವರ್ಷಗಳ ನಂತರ ಮರುಕಳಿಸಿದ ಮಂಕಿಫಾಕ್ಸ್​!

    ವಾಷಿಂಗ್ಟನ್: ಅಮೆರಿಕ ಈಗಾಗಲೇ ಕರೊನಾ ದಾಳಿಯಿಂದಾಗಿ ತತ್ತರಿಸಿದೆ. ಪ್ರತಿದಿನ 2.5 ಲಕ್ಷದಷ್ಟು ಪ್ರಕರಣ ಪತ್ತೆಯಾಗಿದ್ದ ರಾಷ್ಟ್ರದಲ್ಲಿ ಇದೀಗ ಏಕದಿನ ಏರಿಕೆ 30ರಿಂದ 40 ಸಾವಿರಕ್ಕೆ ಇಳಿದಿದೆ. ಕರೊನಾ ಕಡಿಮೆಯಾಗಬಹುದು ಎನ್ನುವ ನಿರೀಕ್ಷೆಯಲ್ಲಿರುವ ದೇಶಕ್ಕೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಬರೋಬ್ಬರಿ 17 ವರ್ಷಗಳ ನಂತರ ಮಂಕಿಫಾಕ್ಸ್​ ರಾಷ್ಟ್ರಕ್ಕೆ ಮರಳಿದೆ.

    ಅಮೆರಿಕದ ಟೆಕ್ಸಾಸ್​ನಲ್ಲಿ ವ್ಯಕ್ತಿಯೊಬ್ಬನಲ್ಲಿ ಮಂಕಿಫಾಕ್ಸ್ ದೃಢವಾಗಿದೆ. ಆತ ಕೆಲ ದಿನಗಳ ಹಿಂದೆ ನೈಜೀರಿಯಾದಿಂದ ದೇಶಕ್ಕೆ ಮರಳಿದ್ದಾಗಿ ಹೇಳಲಾಗಿದೆ. ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರವು (ಸಿಡಿಸಿ) ಆ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದವರಿಗಾಗಿ ಹುಡುಕಾಟ ಆರಂಭಿಸಿದ್ದು, ಸೋಂಕನ್ನು ನಿಯಂತ್ರಿಸುವುದಾಗಿ ಹೇಳಿಕೊಂಡಿದೆ.

    ಈ ಹಿಂದೆ 2003ರಲ್ಲಿ ಅಮೆರಿಕದಲ್ಲಿ ಮಂಕಿಫಾಕ್ಸ್ ಕಾಣಿಸಿಕೊಂಡಿತ್ತು. ಆಗ 47 ಮಂದಿಗೆ ಸೋಂಕು ದೃಢವಾಗಿತ್ತು. ಅದಾದ ನಂತರ ಸೋಂಕನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿತ್ತು.

    ಮಂಕಿಫಾಕ್ಸ್​ ಪ್ರಾಣಿಗಳಿಂದ ಮನುಷ್ಯನಿಗೆ ಹರಡುವ ಸೋಂಕಾಗಿದೆ. ಮನುಷ್ಯನಲ್ಲಿ ಕಾಣುವ ಸಿಡುಬು (ಸ್ಮಾಲ್​ಫಾಕ್ಸ್​)ನ ರೋಗ ಲಕ್ಷಣಗಳನ್ನೇ ಈ ಸೋಂಕು ಹೊಂದಿದೆ. ಆದರೆ ಸಿಡುಬಿನಷ್ಟು ಅಪಾಯಕಾರಿ ಅಲ್ಲ ಹಾಗೂ ಅದನ್ನು ಆದಷ್ಟು ಬೇಗ ನಿಯಂತ್ರಿಸಬಲ್ಲದು ಎಂದು ಹೇಳಲಾಗಿದೆ. ಆಫ್ರಿಕಾದಲ್ಲಿ ಈ ಸೋಂಕು ಹೆಚ್ಚಾಗಿದೆ. ನೈಜೀರಿಯಾದಲ್ಲಿ 2017ರಲ್ಲಿ ಮಂಕಿಫಾಕ್ಸ್​ನ ಮೊದಲ ಪ್ರಕರಣ ಕಾಣಿಸಿಕೊಂಡಿದ್ದು, ಅದರ ನಂತರ ಅಲ್ಲಲ್ಲಿ ಸೋಂಕು ಕಾಣಿಸಿಕೊಳ್ಳುತ್ತಲೇ ಇದೆ. (ಏಜೆನ್ಸೀಸ್)

    ಕಣ್ಣಿನಲ್ಲಿ ಟ್ಯಾಟೂ, ನಾಲಿಗೆಯಲ್ಲಿ ಸೀಳು, ಮೆಟಲ್ ಹಲ್ಲು! ಮೈ ತುಂಬ ಹಚ್ಚೆ ಹಾಕಿಸಿಕೊಂಡವನ ವಿಚಿತ್ರ ಜೀವನ!

    ದಾಖಲೆ ಬರೆದ ಓಲಾ ಎಲೆಕ್ಟ್ರಿಕ್ ಸ್ಕೂಟರ್! ಒಂದೇ ದಿನದಲ್ಲಿ ಲಕ್ಷಕ್ಕೂ ಅಧಿಕ ಬುಕ್ಕಿಂಗ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts