More

    ಫೇಸ್‌ಬುಕ್ ಸ್ನೇಹಿತನಿಂದ 1.15 ಲಕ್ಷ ರೂ. ವಂಚನೆ

    ಮಂಗಳೂರು: ಫೇಸ್‌ಬುಕ್ ಖಾತೆ ಮೂಲಕ ಹಣ ವಂಚಿಸಿದ ಬಗ್ಗೆ ಮಂಗಳೂರು ಸೈಬರ್ ಕ್ರೈಂ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ವಂಚನೆಗೊಳಗಾದವರು 1.15 ಲಕ್ಷ ರೂ. ಕಳೆದುಕೊಂಡಿದ್ದಾರೆ. ಇವರಿಗೆ ನೆಲ್ಸನ್ ಮಾರ್ಕ್ ಎಂಬಾತನ ಫೇಸ್‌ಬುಕ್ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಅದನ್ನು ಅಕ್ಸೆಪ್ಟ್ೃ ಮಾಡಿದ್ದರು.

    ನಂತರ ಆತನ ಜತೆ ಫೇಸ್‌ಬುಕ್ ಮೂಲಕ ಸಂದೇಶ ವಿನಿಮಯ ಮಾಡುತ್ತಿದ್ದರು. ಕೆಲವು ಸಮಯದ ಬಳಿಕ ವಾಟ್ಸ್ಯಾಪ್ ನಂಬರ್ ಪಡೆದು +44751737590 ನಂಬರ್‌ನಿಂದ ಸಂದೇಶ ಕಳುಹಿಸಿ ತಾನು ಒಂದಷ್ಟು ಹಣ ಕಳುಹಿಸುವುದಾಗಿ ತಿಳಿಸಿದ್ದಾನೆ. ಬ್ಯಾಂಕ್ ಖಾತೆ ವಿವರ ಪಡೆದು ಖಾತೆಗೆ ಹಣ ಜಮಾ ಮಾಡಿರುವುದಾಗಿ ತಿಳಿಸಿ ಒಂದು ಡೆಪಾಸಿಟ್ ಸ್ಲಿಪ್ ಕಳುಹಿಸಿಕೊಟ್ಟಿದ್ದ. ಆ ಹಣ ಪಡೆಯಬೇಕಾದಲ್ಲಿ ಆದಾಯ ತೆರಿಗೆ ಪಾವತಿಸಬೇಕೆಂದು ತಿಳಿಸಿದ್ದು, ಅದನ್ನು ನಂಬಿ ಆತ ಕಳುಹಿಸಿಕೊಟ್ಟ ಇಂಡಿಯನ್ ಬ್ಯಾಂಕ್ ದೆಹಲಿ ಖಾತೆ ಸಂಖ್ಯೆ: 6997492562ಕ್ಕೆ ಏ.21ರಂದು ತನ್ನ ಕೆನರಾ ಬ್ಯಾಂಕ್ ಖಾತೆಯಿಂದ ದೂರುದಾರರು ಹಂತಹಂತವಾಗಿ 1.15 ಲಕ್ಷ ರೂ. ಪಾವತಿಸಿದ್ದರು. ಹಣ ಪಡೆದ ಬಳಿಕ ಆರೋಪಿ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts