More

    ಸಿಕ್ಕಿಬಿದ್ದ ತಬ್ಲಿಘಿ ಜಮಾತ್ ನಾಯಕ ಮೌಲಾನಾ ಸಾದ್ ವಿರುದ್ಧ ಇ.ಡಿ. ದಾಖಲಿಸಿದ ಕೇಸ್ ಯಾವುದು?

    ನವದೆಹಲಿ: ದೇಶದಲ್ಲಿ ಕರೊನಾ ಹಾವಳಿ ಹೆಚ್ಚಳವಾಗುವುದಕ್ಕೆ ಕಾರಣಗಳಲ್ಲಿ ಒಂದಾದ ತಬ್ಲಿಘಿ ಜಮಾತ್‌ನ ಮುಖ್ಯಸ್ಥ ಮೌಲಾನಾ ಸಾದ್ ಮತ್ತು ಜಮಾತ್‌ಗೆ ಸಂಬಂಧಿಸಿದ ಟ್ರಸ್ಟ್ ವಿರುದ್ಧ ಜಾರಿ ನಿರ್ದೇಶನಾಲಯ ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಿದೆ.

    ತಬ್ಲಿಘಿ ಜಮಾತ್ ಸಮಾವೇಶ ತೀವ್ರ ವಿವಾದಕ್ಕೊಳಗಾದ ನಂತರ ಹಲವು ದಿನಗಳ ಕಾಲ ಸಾದ್ ತಲೆಮರೆಸಿಕೊಂಡಿದ್ದ. ಕರೊನಾ ಲಾಕ್‌ಡೌನ್ ಮಧ್ಯೆಯೂ ದೊಡ್ಡ ಸಮಾವೇಶ ಸಂಘಟಿಸಿದ್ದಕ್ಕೆ ಆತ ಮತ್ತು ಇತರರ ವಿರುದ್ಧ ನಿಜಾಮುದ್ದೀನ್ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.

    ಮಾರ್ಚ್ 31ರಂದು ಸಾದ್ ದೆಹಲಿ ಹೊರವಲಯದಲ್ಲಿಯೇ ಪತ್ತೆಯಾಗಿದ್ದ. ಆಗ ಆತನ ವಿರುದ್ಧ ಮಾತ್ರವಲ್ಲದೆ ಇತರ ಆರು ಮಂದಿಯ ವಿರುದ್ಧ ದೆಹಲಿ ಅಪರಾಧ ವಿಭಾಗದ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಅದರ ಆಧಾರದ ಮೇಲೆಯೇ ಜಾರಿ ನಿರ್ದೇಶನಾಲಯ ಕೂಡ ಮನಿ ಲಾಂಡರಿಂಗ್‌ಗೆ ಸಂಬಂಧಿಸಿದ ಕೇಸು ಹಾಕಿದೆ.

    ಚೀನಾ ಗುಟ್ಟಾಗಿ ನಡೆಸಿತೇ ಭೂಗತ ಅಣ್ವಸ್ತ್ರ ಪರೀಕ್ಷೆ? ಅಮೆರಿಕದ ಆರೋಪಕ್ಕೆ ಏನು ಉತ್ತರ ನೀಡುತ್ತಿದೆ ಚೀನಾ…

    108 ರಾಷ್ಟ್ರಗಳಿಗೆ ಸುಮಾರು 60 ಕೋಟಿಯಷ್ಟು ಮಾತ್ರೆಗಳನ್ನು ಪೂರೈಸಿ ದೊಡ್ಡಣ್ಣ ಎನ್ನಿಸಿಕೊಂಡ ಭಾರತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts