More

    ವೈದ್ಯಕೀಯ ವೃತ್ತಿಯಲ್ಲಿ ದುಡ್ಡು ಮುಖ್ಯವಲ್ಲ : ಸಂಗಮೇಶ ನಿರಾಣಿ ಅಭಿಮತ

    ಜಮಖಂಡಿ : ಕಣ್ಣಿನ ಆಸ್ಪತ್ರೆ ಎಂದರೆ ಜೋಶಿ ಕಣ್ಣಿನ ಆಸ್ಪತ್ರೆ ಎಂಬ ಮಾತಿದೆ ಎಂದು ಉದ್ಯಮಿ ಸಂಗಮೇಶ ನಿರಾಣಿ ಹೇಳಿದರು.
    ನಗರದ ದಾನಮ್ಮ ದೇವಿ ದೇವಸ್ಥಾನ ಬಳಿ ನಿರ್ಮಿಸಿದ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ನೂತನ ಸೂಪರ್ ಸ್ಪೇಷಾಲಿಟಿ ಕಣ್ಣಿನ ಆಸ್ಪತ್ರೆಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
    ಶಿಕ್ಷಣ ಮತ್ತು ಆರೋಗ್ಯ ಸಮಾಜದ ಎರಡು ಆಧಾರ ಸ್ತಂಭಗಳು. ಸಮಾಜಮುಖಿ ಕಾರ್ಯ ಮಾಡಿದರೆ ಸಮಾಜ ಮತ್ತು ಸರ್ಕಾರ ಅವರನ್ನು ಗುರುತಿಸಿ ಗೌರವಿಸುತ್ತವೆ ಎಂಬುದಕ್ಕೆ ಡಾ.ಎಂ.ಎಂ. ಜೋಶಿ ಅವರೇ ನಿದರ್ಶನ ಎಂದರು.
    ಈ ಭಾಗದ ಜನರ ಇಚ್ಛೆಯಂತೆ ನಗರದಲ್ಲಿ ಜೋಶಿ ಆಸ್ಪತ್ರೆಯ 6ನೇ ಶಾಖೆ ಪ್ರಾರಂಭಿಸಿದ್ದು ಸ್ವಾಗತಾರ್ಹ. ಎಂ.ಎಂ. ಜೋಶಿ 6 ದಶಕಗಳಿಂದ ನೇತ್ರ ಚಿಕಿತ್ಸೆ ನೀಡುವ ಜತೆಗೆ ಉಚಿತ ನೇತ್ರ ಚಿಕಿತ್ಸೆ ಆರಂಭಿಸಿದ್ದಾರೆ. ನಮ್ಮ ಜಿಲ್ಲೆಯವರಾದ ಇವರ ಸೇವೆ ಗುರುತಿಸಿ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿರುವುದು ಹೆಮ್ಮೆಯ ಸಂಗತಿ ಎಂದರು.
    ಮಾನವೀಯ ಸಂಬಂಧಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಮಾಜಮುಖಿಯಾಗಿ ಕಾರ್ಯ ಮಾಡಬೇಕು. ನಿರಾಣಿ ಸಮೂಹ ಸಂಸ್ಥೆಯಿಂದ ಆರೋಗ್ಯ ಕಾರ್ಡ್ ನೀಡಿ ಅಂದಾಜು 1.20 ಲಕ್ಷ ಕುಟುಂಬಗಳಿಗೆ ನೇತ್ರ ಹಾಗೂ ವಿವಿಧ ಶಸ ಚಿಕಿತ್ಸೆ ಮಾಡಿಸಲಾಗಿದೆ. ಅಖಂಡ ಜಿಲ್ಲೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಜಮಖಂಡಿಯಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪಿಸಬೇಕು. ನಿರಾಣಿ ಸಮೂಹ ಸಂಸ್ಥೆಯಿಂದ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಪ್ರಾರಂಭಿಸಿ ಉಚಿತ ಚಿಕಿತ್ಸೆ ನೀಡುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.
    ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಚೇರ್ಮನ್ ಪದ್ಮಶ್ರೀ ಡಾ.ಎಂ.ಎಂ. ಜೋಶಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ ಜತೆಗೆ ಸಮಾಜ ದೇವೋಭವವನ್ನು ನನ್ನ ವೃತ್ತಿಯಲ್ಲಿ ರೂಢಿಸಿಕೊಂಡು ಸೇವೆಯಲ್ಲಿ ತೊಡಗಿರುವುದು ತೃಪ್ತಿ ತಂದಿದೆ. ವೈದ್ಯಕೀಯ ವೃತ್ತಿಯಲ್ಲಿ ದುಡ್ಡೇ ಮುಖ್ಯವಲ್ಲ. ಜತೆಗೆ ಸೇವಾ ಮನೋಭಾವ ರೂಢಿಸಿಕೊಳ್ಳಬೇಕು ಎಂದರು.
    ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿ, ಕಣ್ಣು ಇಲ್ಲದೆ ಮನುಷ್ಯನ ಬದುಕು ನಶ್ವರ. ಕಣ್ಣು ಮುಖ್ಯ ಅಂಗ. ಕಣ್ಣು ಶಸ ಚಿಕಿತ್ಸೆಗೆ ದೂರದ ಊರಿಗೆ ಹೋಗುವ ಅನಿವಾರ್ಯತೆ ಇತ್ತು. ಆದರೆ, ಎಂ.ಎಂ. ಜೋಶಿ ಆಸ್ಪತ್ರೆ ನಿರ್ಮಿಸಿದ್ದರಿಂದ ಈ ಭಾಗದವರಿಗೆ ಬಹಳಷ್ಟು ಅನುಕೂಲವಾಗಿದೆ ಎಂದು ತಿಳಿಸಿದರು.
    ಶಾಸಕ ಆನಂದ ನ್ಯಾಮಗೌಡ, ಡಾ.ಎ.ಎಸ್. ಗುರುಪ್ರಸಾದ ಮಾತನಾಡಿದರು.
    ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಬಣಜಿಗ ದೈವ ಮಂಡಳ ಅಧ್ಯಕ್ಷ ನಾಗೇಂದ್ರ ಶಿರಗಣ್ಣವರ, ಡಾ. ಎಚ್.ಜಿ. ದಡ್ಡಿ, ಡಾ. ಮಯಾಂಕ ಅಗರವಾಲ್, ಡಾ. ರಾಜಶ್ರೀ, ಡಾ. ವಿಮಲಾ, ಡಾ. ಮಾನಸಿ ಇತರರಿದ್ದರು.
    ಶ್ರೀಶೈಲ ಹೊಸಮನಿ ಪ್ರಾರ್ಥಿಸಿದರು. ಎಂ.ಎಂ. ಜೋಶಿ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ. ಶ್ರೀನಿವಾಸ ಜೋಶಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೆಂಕಟೇಶ ಜಂಬಗಿ, ರಾಜಶೇಖರ ಅಕ್ಕಿ ನಿರೂಪಿಸಿದರು. ಡಾ.ಕೆ.ವಿ. ಸತ್ಯಮೂರ್ತಿ ವಂದಿಸಿದರು.

    ರೋಟರಿ ಸಂಸ್ಥೆಗಳ ಆಶ್ರಯದಲ್ಲಿ 20 ವರ್ಷಗಳ ಹಿಂದೆ 22 ಶಿಬಿರ ಆಯೋಜಿಸಲಾಗಿದೆ. ನಾನು ಪಕ್ಕದ ಕಾಖಂಡಕಿ ಗ್ರಾಮದ ಮಹಿಪತಿರಾಯರ ವಂಶಸ್ಥ. ಕನ್ನಡ ಶಾಲೆಯಲ್ಲೇ ಕಲಿತು ಮುಂಬಯಿಯಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ಹುಬ್ಬಳ್ಳಿಯಲ್ಲಿ ಸೇವಾ ಕಾರ್ಯ ಆರಂಭಿಸಿ ಈ ಭಾಗದ ಜನರಿಗೆ ಅಂತಾರಾಷ್ಟ್ರೀಯ ಮಟ್ಟದ ಚಿಕಿತ್ಸೆ ನೀಡಲು ಮುಂದಾಗಿರುವೆ.
    ಪದ್ಮಶ್ರೀ ಡಾ.ಎಂ.ಎಂ. ಜೋಶಿ ಚೇರ್ಮನ್,

    ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts