More

    ಹಣ ಗಳಿಕೆಗೆ ವಕೀಲ ವೃತ್ತಿ ಮಾರ್ಗವಲ್ಲ

    ಬೆಳಗಾವಿ: ವಕೀಲರು ನ್ಯಾಯದಾನ ಪ್ರಕ್ರಿಯೆಯ ಪ್ರಮುಖ ಅಂಗವಾಗಿದ್ದಾರೆ. ನ್ಯಾಯಾಲಯಗಳಲ್ಲಿ ವಾದ ಮಾಡುವುದು ವಕೀಲರಿಗೆ ಕೇವಲ ಹಣ ಗಳಿಕೆಯ ಅಥವಾ ಯಶಸ್ಸು ಗಳಿಸುವ ಮಾರ್ಗವಲ್ಲ ಎನ್ನುವುದನ್ನು ಎಲ್ಲರೂ ಅರಿಯಬೇಕು ಎಂದು ಕೇರಳ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಾಧೀಶ ಎಸ್.ಆರ್. ಬನ್ನೂರಮಠ ಹೇಳಿದರು.

    ಕರ್ನಾಟಕ ಕಾನೂನು ಸಮಿತಿ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಆಯೋಜಿಸಿಸದ್ದ ಎಂ.ಕೆ. ನಂಬಿಯಾರ ರಾಷ್ಟ್ರೀಯ ಅಣಕು ನ್ಯಾಯಾಲಯದ ಸ್ಪರ್ಧೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
    ಯುವ ಜನರು ಸಾಮಾಜಿಕ ಮಾಧ್ಯಮಗಳನ್ನು ಅಗತ್ಯವಿದ್ದಷ್ಟೇ ಬಳಸಬೇಕು.

    ಅತಿಯಾದ ಬಳಕೆಯಿಂದ ಮನುಷ್ಯರ ನಡುವೆ ಅಂತರ ಜಾಸ್ತಿಯಾಗುತ್ತಿದೆ. ಓದುವ- ಬರೆಯುವ ಕಲೆಯನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಕಾನೂನು ವಿದ್ಯಾರ್ಥಿಗಳು ಜ್ಞಾನಾರ್ಜನೆ ಜತೆಗೆ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳುವುದರತ್ತವೂ ಗಮನ ಹರಿಸಬೇಕು ಎಂದರು.

    ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಬಿ.ಎ. ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು.
    ರಾಜ್ಯ ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ಎ.ಎಸ್. ಪಾಶ್ಚಾಪುರೆ ಮಾತನಾಡಿದರು. ಅಣಕು ನ್ಯಾಯಾಲಯದ ಸ್ಪರ್ಧೆ ವಿಜೇತ ತಂಡಗಳಿಗೆ ಅತಿಥಿಗಳು ಪಾರಿತೋಷಕ ವಿತರಿಸಿದರು.

    ಭೋಪಾಲ್ ತಂಡ ಪ್ರಥಮ: ಭೋಪಾಲ್‌ದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ತಂಡ ಪ್ರಥಮ ಸ್ಥಾನ, ಚೆನ್ನೈನ ಡಾ. ಅಂಬೇಡ್ಕರ್ ಕಾನೂನು ವಿಶ್ವವಿದ್ಯಾಲಯದ ತಂಡ ದ್ವಿತೀಯ ಸ್ಥಾನ ಪಡೆಯಿತು. ತಮಿಳುನಾಡಿನ ಶಾಸ್ತ್ರ ವಿಶ್ವವಿದ್ಯಾಲಯದ ಪಿ.ಪ್ರಜೀತ ಹಾಗೂ ಡಾ. ಅಂಬೇಡ್ಕರ್ ವಿಶ್ವವಿದ್ಯಾಲಯದ ದಿವ್ಯಾ ಮಲೈಸ್ವಾಮಿ ಅವರಿಗೆ ಅತ್ಯುತ್ತಮ ಭಾಷಣಕಾರ ಪ್ರಶಸ್ತಿ ನೀಡಲಾಯಿತು.

    ಕರ್ನಾಟಕ ಕಾನೂನು ಸಮಿತಿಯ ಆಡಳಿತ ಮಂಡಳಿ ಅಧ್ಯಕ್ಷ ಪಿ.ಎಸ್. ಸಾಹುಕಾರ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎಸ್.ವಿ ಗಣಾಚಾರಿ, ಪ್ರಾಂಶುಪಾಲ ಡಾ. ಅನಿಲ ಹವಾಲ್ದಾರ, ಶಿಕ್ಷಕ ಸಂಚಾಲಕ ಸತೀಶ ಅನಿಖಿಂಡಿ, ಅಣಕು ನ್ಯಾಯಾಲಯ ಸಮಿತಿ ಕಾರ್ಯದರ್ಶಿ ಮೇಘಾ ಸೋಮಣ್ಣನವರ, ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ರೋಹಿತ ಲಾತೂರ ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts