More

    ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿ ವಂಚನೆ

    ಬ್ಯಾಡಗಿ: 11 ದಿನದಲ್ಲಿ ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿ ಅಂದಾಜು 85 ಲಕ್ಷ ರೂಪಾಯಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.

    ವಿಜಯಪುರ ಮೂಲದ ಸೈಯದ್ ಸೋಹೆಲ್ ಶೇಖ್ ಹಾಗೂ ಮಹಬೂಬ್ ಇಸ್ಮಾಯಿಲ್ ತಿಕೋಟಿಕರ್ ಎಂಬುವವರು ಜನರಿಗೆ ವಂಚಿಸಿದ ಆರೋಪಿಗಳು.

    ಪಟ್ಟಣದ ಸ್ಟೇಷನ್ ರಸ್ತೆಯ ಕಟ್ಟಡವೊಂದರಲ್ಲಿ ಕಳೆದ ಜನವರಿಯಲ್ಲಿ ಮಾಡರ್ನ್ ಮಾರ್ಕೆಟಿಂಗ್ ಗೋಲ್ಡ್ ಟ್ರೇಡರ್ಸ್ ಎಂಬ ಹೆಸರಿನಲ್ಲಿ ಕಚೇರಿಯೊಂದನ್ನು ಆರೋಪಿಗಳು ತೆರೆದಿದ್ದರು. ಒಂದು ಸ್ಕೀಂನಲ್ಲಿ ಜನರಿಂದ 21 ಸಾವಿರ ರೂಪಾಯಿ ತುಂಬಿಸಿಕೊಂಡು 11 ದಿನಗಳ ಬಳಿಕ ಪ್ರತಿ ವಾರ 6 ಸಾವಿರ ರೂಪಾಯಿಯಂತೆ ಒಟ್ಟು 36 ಸಾವಿರ ರೂಪಾಯಿ ಮೌಲ್ಯದ ಬಂಗಾರ, ಬಟ್ಟೆ, ಗೃಹೋಪಯೋಗಿ ವಸ್ತು ಇತ್ಯಾದಿ ನೀಡುವುದಾಗಿ ನಂಬಿಸಿದ್ದಾರೆ. ಇನ್ನೊಂದು ಸ್ಕೀಂನಲ್ಲಿ ಬಂಗಾರ ನೀಡುವುದಾಗಿ ತಿಳಿಸಿದ್ದು, ಬಂಗಾರ ಮೌಲ್ಯದ ಶೇ.60ರಷ್ಟು ಹಣ ತುಂಬಿಸಿಕೊಂಡಿದ್ದರು. ಬಂಗಾರ ಪಡೆದ ನಂತರ ಉಳಿದ ಶೇ. 40ರಷ್ಟು ಹಣವನ್ನು ಕಂತು ಪ್ರಕಾರ ಭರಿಸಬೇಕು ಎಂದು ನಂಬಿಸಿ ಸಾಕಷ್ಟು ಜನರಿಂದ ಹಣ ತುಂಬಿಸಿಕೊಂಡು ಬಂಗಾರ ನೀಡದೇ ವಂಚಿಸಿದ್ದಾರೆ. ಅಂದಾಜು 200ಕ್ಕೂ ಹೆಚ್ಚು ಜನರಿಂದ 85 ಲಕ್ಷ ರೂಪಾಯಿ ಪಡೆದು ಇಬ್ಬರೂ ಪರಾರಿಯಾಗಿದ್ದಾರೆ.

    ಮಾಡರ್ನ್ ಮಾರ್ಕೆಟಿಂಗ್ ಗೋಲ್ಡ್ ಟ್ರೇಡರ್ಸ್ ಕಚೇರಿ ಬಾಗಿಲು ಹಾಕಿದ್ದು, ಆರೋಪಿಗಳ ಮೊಬೈಲ್ ಆಫ್ ಆಗಿದೆ. ಈ ಕುರಿತು ಹಣ ಕಳೆದುಕೊಂಡ ಗ್ರಾಹಕ ಮಹಮದ್ ಇಕ್ಬಾಲ್​ಸಾಬ ಕಳಗೊಂಡ ಎಂಬುವವರು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts