More

    ವಾಲ್ಮೀಕಿ ಭವನಕ್ಕೆ ಬೇಕಿದೆ ಅನುದಾನ

    ಕೆ.ಕೆಂಚಪ್ಪ ಮೊಳಕಾಲ್ಮೂರು: ರಾಜ್ಯದಲ್ಲೇ ಅತಿ ಹೆಚ್ಚು ನಾಯಕ ಸಮುದಾಯದ ಜನರನ್ನು ಹೊಂದಿರುವ ಮೊಳಕಾಲ್ಮೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ವಾಲ್ಮೀಕಿ ಭವನದ ಅಗತ್ಯ ಸೌಕರ್ಯ ಕಲ್ಪಿಸಲು 2 ಕೋಟಿ ರೂ. ಹೆಚ್ಚುವರಿ ಅನುದಾನ ಬಿಡುಗಡೆಗೆ ಸರ್ಕಾರ ಸೂಕ್ತ ಕ್ರಮವಹಿಸಬೇಕಾಗಿದೆ.

    ವಾಲ್ಮೀಕಿ ಸಮುದಾಯ ಶುಭ ಸಮಾರಂಭಗಳಿಗಾಗಿ ಇಷ್ಟು ದಿನ ದೇವಸ್ಥಾನ, ಮಠ ಆಶ್ರಯಿಸುತ್ತಿದ್ದರು. ಆ ಸಮುದಾಯದ ಬಹುದಿನಗಳ ಬೇಡಿಕೆಯಾಗಿದ್ದ ಸಮುದಾಯ ಭವನ ನಿರ್ಮಾಣಕ್ಕೆ 2016-17ನೇ ಸಾಲಿನಲ್ಲಿ ಅಂದಿನ ಸರ್ಕಾರ 3.96 ಕೋಟಿ ರೂ. ಮೀಸಲಿಟ್ಟಿತು. ಈಗ ಇದು ಮೂರ‌್ನಾಲ್ಕು ತಿಂಗಳಲ್ಲಿ ಪೂರ್ಣಗೊಂಡರೂ ಸಮುದಾಯದವರಲ್ಲಿ ಖುಷಿ ತರಿಸಿಲ್ಲ. ಅಗತ್ಯ ಸೌಕರ್ಯಗಳ ಕೊರತೆ ಕಾಡುತ್ತಿದೆ.

    ಭವನಕ್ಕೆ ಅಗತ್ಯವಾದ ಪೀಠೋಪಕರಣಗಳು, ಕಾಂಪೌಂಡ್, ದೇವರ ಗುಡಿ, ವಾಲ್ಮೀಕಿ ಪ್ರತಿಮೆ, ಮೈದಾನದ ಅಭಿವೃದ್ಧಿ, ಮಹಾದ್ವಾರ ತುರ್ತಾಗಿ ಆಗಬೇಕಿದೆ. ಇದಕ್ಕಾಗಿ ಸಚಿವ ಶ್ರೀರಾಮುಲು ಅವರು ಇತ್ತ ಗಮನ ಹರಿಸಿ 2 ಕೋಟಿ ರೂ. ಹೆಚ್ಚುವರಿ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಲು ಕಾಳಜಿ ತೋರಬೇಕು. ಜತೆಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕೆಂಬುದು ಜನರ ಹಕ್ಕೊತ್ತಾಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts