More

    ರೇಷ್ಮೆ ನಾಡಿನಲ್ಲಿ ಅಳಿವಿನಂಚಿಗೆ ಸರಿದ ಕೈಮಗ್ಗಗಳು

    ಕೆ.ಕೆಂಚಪ್ಪ ಮೊಳಕಾಲ್ಮೂರು: ತಾಲೂಕಿಗೆ ರೇಷ್ಮೆ ನಾಡು ಎಂಬ ಖ್ಯಾತಿ ಬರಲು ಕಾರಣವಾಗಿದ್ದ ರೇಷ್ಮೆ ಕೈಮಗ್ಗಗಳ ಸಂಖ್ಯೆ ಗಣನೀಯವಾಗಿ ಕುಸಿದಿದ್ದು, ಬೆರೆಣಿಕೆಯ ಕುಟುಂಬಗಳು ಮೂಲ ಕಸುಬು ಉಳಿಸಿಕೊಂಡಿವೆ.

    ಒಂದು ಕಾಲದಲ್ಲಿ ಪಟ್ಟಣದಲ್ಲಿ ಎರಡು ಸಾವಿರಕ್ಕೂ ಹೆಚ್ಚಿದ್ದ ಮಗ್ಗಗಳ ಸಂಖ್ಯೆ ಈಗ ಕೇವಲ 150ಕ್ಕೆ ಬಂದು ನಿಂತಿದೆ. ರಾಜ, ಮಹಾರಾಜರ ಕಾಲದಿಂದ ಮೊಳಕಾಲ್ಮೂರು ರೇಷ್ಮೆ ಸೀರೆಗಳಿಗೆ ರಾಜ್ಯ, ಹೊರ ರಾಜ್ಯಗಳಲ್ಲಿ ಬೇಡಿಕೆ ಹೆಚ್ಚಿತ್ತು. ಆದರೆ, ಸರ್ಕಾರದಿಂದ ಸೂಕ್ತ ಪ್ರೋತ್ಸಾಹ ಸಿಗದ ಕಾರಣ ಕೈಮಗ್ಗಗಳು ಅಳಿವಿನಂಚಿಗೆ ಬಂದು ನಿಂತಿವೆ.

    ಕೈಮಗ್ಗ, ಜವಳಿ ಇಲಾಖೆ ನಿರ್ದೇಶನದಡಿ ನಡೆಸುವ ಹ್ಯಾಂಡ್ ಲೂಮ್ ಸೊಸೈಟಿಗಳ ನಿರ್ಲಕ್ಷ್ಯ ಧೋರಣೆಯಿಂದ ಕುಲ ಕಸಬಿಗೆ ದೊಡ್ಡ ಹೊಡೆತ ಬಿದ್ದಿದೆ. ರೇಷ್ಮೆ ಸೀರೆ ನೇಯ್ಗೆ ಮಾಡುವ ನೇಕಾರರಿಗೆ ಸಮರ್ಪಕ ರೀತಿಯಲ್ಲಿ ಸಾಲ ಮತ್ತು ಪ್ರೋತ್ಸಾಹ ಧನದ ಸೌಲಭ್ಯ ಸಿಗುತ್ತಿಲ್ಲ ಎಂಬ ದೂರು ಕೇಳಿಬರುತ್ತಿವೆ.

    ಮೊಳಕಾಲ್ಮೂರಿನ ರೇಷ್ಮೆ ಸೀರೆ ನೆಪದಲ್ಲಿ ಆಂಧ್ರದ ಧರ್ಮಾವರಂ, ಸೇಲಂ, ಹಿಂದೂಪುರದ ಪವರ್‌ಲೂಮ್ ಸೀರೆಗಳ ಮಾರಾಟ ನಿಲ್ಲಬೇಕು. ಸ್ಥಳೀಯ ಹ್ಯಾಂಡ್‌ಲೂಮ್ ಸೊಸೈಟಿಗಳ ಆಡಳಿತ ಮಂಡಳಿಯವರು ತಾರತಮ್ಯ ನೀತಿ ಕೈಬಿಟ್ಟು, ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮದಿಂದ ಸಬ್ಸಿಡಿ ಹಣ ಮತ್ತು ಸಾಲ ಸೌಲಭ್ಯ ನೀಡಬೇಕು ಎನ್ನುತ್ತಾರೆ ಸ್ಥಳೀಯರು.

    ಕೈಮಗ್ಗ ಮತ್ತು ಜವಳಿ ಇಲಾಖೆ ಜಿಲ್ಲಾ ನಿರ್ದೇಶಕ ನೇಗಲೂರು ಹೇಳಿಕೆ: ನೇಕಾರರ ಹಿತಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಮುದ್ರಾ ಯೋಜನೆಯಡಿ 50 ಸಾವಿರದಿಂದ 2 ಲಕ್ಷ ರೂ. ವರೆಗೆ ಸಾಲ ಸೌಲಭ್ಯ ಕೊಡಿಸಲು ಇಲಾಖೆ ಬದ್ಧ್ದವಾಗಿದೆ. ಆದರೆ, ಇದಕ್ಕೆ ರಾಷ್ಟ್ರೀಕೃತ ಬ್ಯಾಂಕಿನವರು ಸಹಕಾರ ಕೊಡಬೇಕು.

    ಬೆಂಗಳೂರಿನ ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮದ ಮುಖ್ಯಸ್ಥ ವಿಜಯನಾರಾಯಣ ಹೇಳಿಕೆ: ಹ್ಯಾಂಡ್ ಲೂಮ್ಸ್ ಸ್ಥಳೀಯ ಸೋಸೈಟಿಗಳಲ್ಲಿ ರೇಷ್ಮೆ ಕಚ್ಚಾ ಸಾಮಗ್ರಿ ಖರೀದಿಸಿದ ನೇಕಾರರಿಗೆ ಶೇ.10ರಷ್ಟು ವಿನಾಯ್ತಿ ನೀಡಲಾಗುತ್ತಿದೆ. ಅರ್ಹರು ಸದುಪಯೋಗ ಮಾಡಿಕೊಳ್ಳಬಹುದು.28 )

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts