More

    ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡಿ

    ಅಳವಂಡಿ: ಮಕ್ಕಳ ಶಿಕ್ಷಣಕ್ಕಾಗಿ ಶಾಲೆಗಳಿಗೆ ಸರ್ಕಾರ ಎಲ್ಲ ಸೌಲಭ್ಯಗಳನ್ನು ಕಲ್ಪಿಸುತ್ತಿದೆ ಅವುಗಳ ಸದ್ಭಳಕೆ ಮಾಡಿಕೊಳ್ಳಿ ಎಂದು ಕವಲೂರು ಸಿಆರ್‌ಪಿ ವೀರೇಶ ಕೌಟಿ ಹೇಳಿದರು.

    ಇದನ್ನೂ ಓದಿ: ವಿಶೇಷ ಚೇತನ ಮಕ್ಕಳ ಸಾಮೂಹಿಕ ವಿವಾಹ

    ಸಮೀಪದ ಘಟ್ಟಿರಡ್ಡಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.

    ಶಿಕ್ಷಣ ಇಲ್ಲದ ಜೀವನ, ಬರುಡು ಭೂಮಿ ಇದ್ದಾಗೇ. ಶಿಕ್ಷಣದಿಂದ ಮಾತ್ರ ಜೀವನದ ಗುರಿ ಮುಟ್ಟಬಹುದು. ಮಕ್ಕಳ ಅಸಕ್ತಿ ಅನುಗುಣವಾಗಿ ಭೋಧನೆ ಮಾಡಿ. ಮಕ್ಕಳ ಕಲಿಕೆಗೆ ಪ್ರೋತ್ಸಾಹಿಸಿ ಎಂದರು.

    ಎಸ್ಡಿಎಂಸಿ ಅಧ್ಯಕ್ಷೆ ಶಕುಂತಲಾ ಡಂಬಳ, ಗ್ರಾಪಂ ಸದಸ್ಯರಾದ ಮಹೇಶ ಡಂಬಳ, ಪುಷ್ಪಾ ಸಂಗರಡ್ಡಿ, ಕೆಂಚವ್ವ, ಮುಖ್ಯ ಶಿಕ್ಷಕ ಮಹಮದ್‌ರಪೀ, ಶಿಕ್ಷಕರಾದ ಕಾವ್ಯಾ, ವೆಂಕರಡ್ಡಿ, ಬಾರತಿ, ಗಂಗಮ್ಮ, ನೇತ್ರಾ, ಮಹಾಂತೇಶ ಇದ್ದರು.

    ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗೆ, ನಿವೃತ್ತ ಶಿಕ್ಷಕರಿಗೆ ಸನ್ಮಾನ, ವಿವಿಧ ಸ್ಪರ್ದೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ಹಾಗೂ ಪ್ರಶಸ್ತಿ ವಿತರಣೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts