ವಿಶೇಷ ಚೇತನ ಮಕ್ಕಳ ಸಾಮೂಹಿಕ ವಿವಾಹ

18GDG03
Published on

ಗದಗ: ವಿಶ್ವ ಕಲ್ಯಾಣ ಸಂಸ್ಥೆ ಮತ್ತು ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆ ಸಹಯೋಗದಲ್ಲಿ ವಿಶೇಷ ಚೇತನರ ಸಾಮೂಹಿಕ ವಿವಾಹ, ಸಮ್ಮೇಳನ, ಸನ್ಮಾನ ಕಾರ್ಯವನ್ನು ಫೆ.26 ರಂದು ನಗರದ ಶ್ರೀನಿವಾಸ ಭವನದಲ್ಲಿ ಹಮ್ಮಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಂಜುನಾಥ ಹದ್ದಣ್ಣವರ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ಕಾರ್ಯಕ್ರಮಕ್ಕೆ ಯಾವುದೇ ಸರ್ಕಾರದ ಅನುದಾನ ಪಡೆದಿಲ್ಲ. ಎಲ್ಲ ದಾನಿಗಳಿಂದ ಈ ಕಾರ್ಯಕ್ರಮ ನಡೆಯುತ್ತಿದೆ. ಫೆ. 25 ರ ವರೆಗೂ ಜೋಡಿಗಳು ನೋಂದಣಿ ಮಾಡಿಸಿಕೊಂಡರು ಫೆ. 26 ರಂದು ಮದುವೆ ಮಾಡಿಕೊಡಲಾಗುವುದು ಎಂದರು.

ಅಡ್ನೂರು ಬೃಹನ್ಮಠದ ಪಂಚಾಚಾರ್ಯ ಶ್ರೀಗಳು ಸಾನ್ನಿಧ್ಯ ವಹಿಸುವರು. ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಎಚ್.ಕೆ. ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತಿ ಇರುವರು ಎಂದು ತಿಳಿಸಿದರು.‌

ಅರ್ಜುನ ಗೊಳಸಂಗಿ, ಈರಣ್ಣ ಕಾಂಬಳೆ, ಶಂಕರಗೌಡ ಪಾಟೀಲ, ಪ್ರಕಾಶ ಬನ್ನಿಗಿಡದ ಸೇರಿದಂತೆ ಇತರರು ಸುದ್ದಿಗೋಷ್ಟಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net