More

    ಮಳೆ ತಂದ ಹರ್ಷ; ತವರಿನತ್ತ ಮುಖ ಮಾಡಿದ ಕುರಿಗಳು

    ಮೊಳಕಾಲ್ಮೂರು: ಸತತ ಬರದ ಕಾರಣ ಮೇವು ಹುಡುಕಿಕೊಂಡು ಆಂಧ್ರಕ್ಕೆ ತೆರಳಿದ್ದ ತಾಲೂಕಿನ ಕುರಿಗಳ ಹಿಂಡು ಮತ್ತೆ ತವರಿನತ್ತ ಮುಖ ಮಾಡಿವೆ.
    ಚಳ್ಳಕೆರೆ, ಮೊಳಕಾಲ್ಮೂರು ಹಾಗೂ ಜಗಳೂರು, ಕೂಡ್ಲಿಗಿ ತಾಲೂಕಿನ ಅರಣ್ಯ ಪ್ರದೇಶ ಕುರಿಗಳ ಮೇವಿಗೆ ಆಸರೆಯಾಗಿತ್ತು. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಬರಗಾಲ ಆವರಿಸಿದ್ದರಿಂದ ದೂರ ಆಂಧ್ರದ ನೀರಾವರಿ ಪ್ರದೇಶಗಳಿಗೆ ಮೇವು ಹುಡುಕಿಕೊಂಡು ತೆರಳುವ ಸಂದರ್ಭ ಸೃಷ್ಟಿಯಾಗಿತ್ತು.

    ಕಳೆದ ಏಪ್ರಿಲ್‌ನಲ್ಲಿ ಆಂಧ್ರದ ಕಲ್ಯಾಣದುರ್ಗ, ಕಣೇಕಲ್, ಯರಗುಂಟೆ, ತೆಕ್ಕಲಕೋಟೆ ನೀರಾವರಿ ಪ್ರದೇಶಕ್ಕೆ ನೂರಾರು ಕುರಿ ಹಿಂಡುಗಳು ತೆರಳಿದ್ದವು. ಈ ವರ್ಷ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಅರಣ್ಯ ಪ್ರದೇಶದಲ್ಲಿ ಹಸಿರು ಸಮೃದ್ಧವಾಗಿದೆ.

    ತಾಲೂಕಿನಲ್ಲಿ ಹಲವು ಕುಟುಂಬಗಳಿಗೆ ಕುರಿ ಸಾಕಣೆಯೇ ಮೂಲ ವೃತ್ತಿಯಾಗಿದೆ. ನೂರಾರು ಕುಟುಂಬಗಳು ಕನಿಷ್ಠ 50 ರಿಂದ ಗರಿಷ್ಠ 500 ಕ್ಕೂ ಹೆಚ್ಚು ಕುರಿಗಳ ಸಾಕಣೆ ಮಾಡುತ್ತಿವೆ. ಬೇಸಿಗೆ ಸಂದರ್ಭದಲ್ಲಿ ಕುರಿಗಳಿಗೆ ಮೇವಿನ ಸಮಸ್ಯೆ ಎದುರಾದಾಗ ಅನಿವಾರ್ಯವಾಗಿ ದೂರ ಪ್ರದೇಶಗಳಿಗೆ ತೆರಳಬೇಕಿದೆ. ಈ ವರ್ಷ ಆ ಸಮಸ್ಯೆ ತಪ್ಪಿದೆ ಎಂದು ಕುರಿಗಾಹಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts