More

    ಮದ್ಯ ಮಾರಾಟಕ್ಕೆ ಆಸ್ಪದ ಬೇಸರ

    ಮೊಳಕಾಲ್ಮೂರು: ಕರೊನಾ ಸೋಂಕು ಹೆಚ್ಚುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಸರ್ಕಾರ ಮದ್ಯ ಮಾರಾಟಕ್ಕೆ ಆಸ್ಪದ ಕೊಡಬಾರದಿತ್ತು ಎಂದು ಬಿಜೆಪಿ ಸಂಸದ ಎ.ನಾರಾಯಣಸ್ವಾಮಿ ಹೇಳಿದರು.

    ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಕರೊನಾ ಕುರಿತು ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

    ಕರೊನಾ ವಾರಿಯರ್ಸ್ ಕರ್ತವ್ಯ ನಿಷ್ಠೆಯಿಂದ ಚಿತ್ರದುರ್ಗ ಜಿಲ್ಲೆ ಹಸಿರು ವಲಯವೆಂದು ಘೋಷಣೆಯಾದೆ. ಪಕ್ಕದ ತುಮಕೂರು, ದಾವಣಗೆರೆ, ಆಂಧ್ರ ಮತ್ತು ತಮಿಳುನಾಡಿನಲ್ಲಿ ವೈರಸ್ ತಾಂಡವಾಡುತ್ತಿದೆ.

    ಅಲ್ಲಿ ಮದ್ಯ ಮಾರಾಟಕ್ಕೆ ಆಸ್ಪದ ಕೊಟ್ಟಿಲ್ಲ. ಹೀಗಾಗಿ ಅಲ್ಲಿನವರು ನಮ್ಮ ಗಡಿಗ್ರಾಮಗಳಿಗೆ ಬಂದು ಮದ್ಯ ಖರೀದಿಸುವ ಸಾಧ್ಯತೆ ಹೆಚ್ಚಿದ್ದು, ಇದರಿಂದ ಸೋಂಕು ಹೆಚ್ಚುವ ಸಂಭವ ಇದೆ. ಮದ್ಯ ಮಾರಾಟ ವಿಚಾರದಲ್ಲಿ ಸರ್ಕಾರ ಎಡವಿತೇನೋ ಎಂದು ಭಾಸವಾಗುತ್ತಿದೆ ಎಂದರು.

    ಸರ್ಕಾರದ ನಿರ್ದೇಶನಗಳು ಕೇವಲ ಸಿಟಿಗಳಿಗೆ ಮಾತ್ರ ಸೀಮಿತವಾಗಿವೆ. ಗ್ರಾಮೀಣರು ಅಷ್ಟಾಗಿ ಕಾಳಜಿ ತೋರುತ್ತಿಲ್ಲ. ಈ ಬಗ್ಗೆ ತಾಲೂಕು ಆಡಳಿತ ಜಾಗೃತಿ ವಹಿಸಬೇಕು. ಯಾವುದಾದರು ಮೂಲದಿಂದ ಮಾಸ್ಕ್ ಖರೀದಿಸಿ ಹಳ್ಳಿಗರಿಗೆ ಉಚಿತವಾಗಿ ಕೊಟ್ಟು ಕಡ್ಡಾಯವಾಗಿ ಹಾಕಿಕೊಳ್ಳುವಂತೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

    ತಹಸೀಲ್ದಾರ್ ಎಂ.ಬಸವರಾಜ್, ಇಒ ಪ್ರಕಾಶ್, ವಿವಿಧ ಇಲಾಖೆ ಅಧಿಕಾರಿಗಳಾದ ಟಿ.ಗುರುಮೂರ್ತಿ, ಲೋಕೇಶ್, ಪ್ರೇಮನಾಥ್, ಕಾಂತರಾಜ್, ನಂದೀಶ್, ಮಧುಕುಮಾರ್, ಎನ್.ಕೆ.ಪಾಪನಾಯಕ, ಡಾ.ಪದ್ಮಾ, ಡಾ.ಮಂಜುನಾಥ ಇತರರಿದ್ದರು.

    ಮೊಳಕಾಲ್ಮೂರಿಗೆ ಪ್ರಥಮ ಭೇಟಿ: ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಮೊಳಕಾಲ್ಮುರು ಕ್ಷೇತ್ರಕ್ಕೆ ಸಂಸದರು ಭೇಟಿ ನೀಡಿರಲಿಲ್ಲ. ಈ ಕುರಿತು ವಿಜಯವಾಣಿಯಲ್ಲಿ ಗೆದ್ದು ಒಂದೂವರೆ ವರ್ಷ ಪೂರೈಸಿದೆ ಸಂಸದರೆ ನಮ್ಮ ಕ್ಷೇತ್ರ ಮರೆಯದಿರಿ ಎಂಬ ಸುದ್ದಿ ಪ್ರಕಟವಾಗಿತ್ತು. ಜತೆಗೆ ಪಕ್ಷದ ಕಾರ್ಯಕರ್ತರ ಒತ್ತಡದಿಂದ ಸೋಮವಾರ ದಿಢೀರ್ ಪಟ್ಟಣಕ್ಕೆ ಭೇಟಿ ನೀಡಿದ ಸಂಸದ ನಾರಾಯಣಸ್ವಾಮಿ, ಅಧಿಕಾರಿಗಳೊಂದಿಗೆ ಒಂದೂವರೆ ತಾಸು ಸಭೆ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts