More

    ಖಾತ್ರಿ ಕಾಮಗಾರಿ ಸ್ಥಳಕ್ಕೆ ಸಿಇಒ ಭೇಟಿ

    ಮೊಳಕಾಲ್ಮೂರು: ನರೇಗಾ ಯೋಜನೆಯಡಿ ತಾಲೂಕಿನ ಹಾನಗಲ್, ಚಿಕ್ಕೇರಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಬದು ನಿರ್ಮಾಣ ಅಭಿಯಾನಕ್ಕೆ ಜಿಪಂ ಸಿಇಒ ಹೊನ್ನಾಂಬ ಮಂಗಳವಾರ ಚಾಲನೆ ನೀಡಿದರು.

    ತಾಲೂಕಿನ 16 ಗ್ರಾ.ಪಂ. ಮಟ್ಟದಲ್ಲಿ 179 ರೈತರ ಜಮೀನುಗಳಲ್ಲಿ ತಲಾ 35 ಸಾವಿರ ರೂ. ವೆಚ್ಚದಲ್ಲಿ ಬದು ನಿರ್ಮಾಣ ಕಾರ್ಯ ನಡೆಯುತ್ತಿದೆ. ಖಾತ್ರಿ ಕೆಲಸ ಬಡವರ ಹೊಟ್ಟೆ ತುಂಬಿಸುವ ಅಕ್ಷಯ ಪಾತ್ರೆ ಇದ್ದಂತೆ. ರೈತರಿಗೂ ಸಹ ವರದಾನವಾಗಿದೆ. ಜಮೀನುಗಳನ್ನು ಸಮತಟ್ಟು ಮಾಡಿಕೊಂಡರೆ ಫಲವತ್ತಾದ ಮಣ್ಣು ತಡೆಯಬಹುದು. ಕೃಷಿ ಹೊಂಡ ಮಾಡಿಕೊಂಡರೆ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿಯುವ ಮಳೆ ನೀರು ಸಂಗ್ರಹಣೆ ಮಾಡಬಹುದು ಎಂದು ಸಿಇಒ ಹೇಳಿದರು.

    ತಾವು ಮಾಡುವ ಕೆಲಸಕ್ಕೆ ಕೂಲಿ ಹಣ ಬರುವುದು ಒಂದೆರಡು ದಿನ ವಿಳಂಬವಾಗಬಹುದು. ಆದರೆ ಕೆಲಸಕ್ಕೆ ಕೊರತೆ ಇಲ್ಲ. ವಿಶೇಷವಾಗಿ ಕುಡಿಯುವ ನೀರು ಮತ್ತು ರೈತರ ಕೊಳವೆ ಬಾವಿಗಳ ಅಂತರ್ಜಲ ಹೆಚ್ಚಿಸಲು ಆದ್ಯತೆ ನೀಡಲಾಗಿದೆ ಎಂದರು.

    ಇದಕ್ಕೂ ಮುನ್ನ ಬಿಜಿಕೆರೆ, ಕೊಂಡ್ಲಹಳ್ಳಿ, ಕೋನಸಾಗರ, ತುಮಕೂರ‌್ಲಹಳ್ಳಿ, ರಾಯಾಪುರ, ಹಿರೇಕರಹಳ್ಳಿಯಲ್ಲಿ ನಡೆಯುತ್ತಿರುವ ಕಾಮಗಾರಿ ವೀಕ್ಷಿಸಿದರು.

    ಜಿಪಂ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ತಾಪಂ ಇಒ ಪ್ರಕಾಶ್, ಮಧುಸೂಧನ, ಟಿ.ಸಿ.ಹರೀಶ್, ಪಿಡಿಒಗಳಾದ ದೇವೇಂದ್ರಪ್ಪ, ಕೆಂಚಪ್ಪ, ಹೊನ್ನೂರಪ್ಪ, ಮಲ್ಲಿಕಾರ್ಜುನ್, ಪ್ರಹ್ಲಾದ್, ತಾಪಂ ಸದಸ್ಯ ಎಸ್.ತಿಪ್ಪೇಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts