More

    ನೇಕಾರರಿಗೆ ನೇಕಾರನಿಂದಲೇ ನೆರವು

    ಮೊಳಕಾಲ್ಮೂರು: ಲಾಕ್‌ಡೌನ್ ಹಿನ್ನೆಲೆ ಕೆಲಸವಿಲ್ಲದೆ ಸಂಕಷ್ಟದಲ್ಲಿರುವ 160 ನೇಕಾರಿಕೆ ಕುಟುಂಬಗಳಿಗೆ ಅಕ್ಕಿ, ಅಡುಗೆ ಎಣ್ಣೆ, ಉಪ್ಪಿಟ್ಟಿನ ರವೆ, ತೊಗರಿ ಬೇಳೆ ಪಟ್ಟಣದ ನೇಕಾರರೊಬ್ಬರು ಉಚಿತವಾಗಿ ವಿತರಿಸಿ ಉದಾರತೆ ಜತೆಗೆ ಇತರರಿಗೆ ಮಾದರಿಯಾಗಿದ್ದಾರೆ.

    ಭಾಗ್ಯಜ್ಯೋತಿ ನಗರದ ಮಂಚಿ ಮಾರುತಿ ಸಹಾಯ ಹಸ್ತ ಚಾಚಿರುವ ವ್ಯಕ್ತಿ. ಇವರು ಮೂಲ ವೃತ್ತಿ ರೇಷ್ಮೆ ಸೀರೆ ನೇಯುವುದಾಗಿದೆ. ಪ್ರಸ್ತುತ ಕರೊನಾ ಹತೋಟಿಗಾಗಿ ಲಾಕ್‌ಡೌನ್ ಆದೇಶ ಹೊರಡಿಸಿದ್ದರಿಂದ ನೇಕಾರಿಕೆ ಕೆಲಸಕ್ಕೆ ಕೊಕ್ಕೆ ಬಿದ್ದಿದೆ.

    ಈ ಪರಿಸ್ಥಿತಿ ಅರಿತ ಮಾರುತಿ ತಮ್ಮ ದುಡಿಮೆಯ ಒಂದಷ್ಟು ಹಣದಲ್ಲಿ ಒಂದು ಕುಟುಂಬಕ್ಕೆ 5 ಕೆಜಿ ಅಕ್ಕಿ, ಅಧರ್ ಕೆ.ಜಿ. ತೊಗರಿಬೇಳೆ, ಉಪ್ಪಿಟ್ಟಿನ ರವೆ, ಅರ್ಧ ಕೆ.ಜಿ. ಅಡುಗೆ ಎಣ್ಣೆ ಸೇರಿ ಅಗತ್ಯ ವಸ್ತುಗಳನ್ನು ಒಟ್ಟು 160 ಮನೆಗಳಿಗೆ ತಾವೇ ಖುದ್ದಾಗಿ ಹೋಗಿ ವಿತರಣೆ ಮಾಡಿದ್ದಾರೆ.

    ಮಂಚಿ ಮಾರುತಿ ಹೇಳಿಕೆ: ಆಪತ್ಕಾಲದಲ್ಲಿ ಹಸಿದವರಿಗೆ ಕೈಲಾದ ಸಹಾಯ ಮಾಡಿರುವುದು ತೃಪ್ತಿ ತಂದಿದೆ. ನನ್ನ ಕುಣಿ ಮಗ್ಗದಲ್ಲಿ ನೇಕಾರಿಕೆ ಕೆಲಸ ಮಾಡುತ್ತಿರುವ 54 ಜನರ ಜೀವ ರಕ್ಷಣೆಗೆ ನೆರವಾಗಿರುವುದು ಅತೀವ ಖುಷಿ ತಂದಿದೆ. ಕೊಂಡ್ಲಹಳ್ಳಿ, ಕೋನಸಾಗರ, ಉಡೇವು ಗ್ರಾಮಗಳ ರೇಷ್ಮೆ ಸೀರೆ ಹಾಗೂ ಕಂಬಳಿ ನೇಕಾರರಿಗೂ ಆಹಾರ ಧಾನ್ಯದ ಉಚಿತ ವ್ಯವಸ್ಥೆ ಮಾಡುವ ಚಿಂತನೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts