More

    ಕನ್ನಡ ಭಾಷೆ ಜಗತ್ತಿಗೆ ಮಾದರಿ

    ಮೊಳಕಾಲ್ಮೂರು: ಸಾಹಿತ್ಯ ಯಾರೊಬ್ಬರ ಸ್ವತ್ತಲ್ಲ. ಸಾಮಾನ್ಯರ ದೈನಂದಿನ ಜೀವನದಲ್ಲಿ ಎದುರಾಗುವ ಬದುಕಿನ ಮೌಲ್ಯಗಳು, ನೋವು, ನಲಿವು, ವೇದನೆ ಮತ್ತು ಭಾವನೆಗಳ ತಳಹದಿ ಮೇಲೆ ಸಾಹಿತ್ಯ ನಿಂತಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಹೇಳಿದರು.

    ತಾಪಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಸಾಪ ತಾಲೂಕು ಅಧ್ಯಕ್ಷರ ಅಧಿಕಾರ ಸ್ವೀಕಾರ ಹಾಗೂ ಜಿಂಕಾ ರಾಮದಾಸಪ್ಪ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಮಾಜಿಕ ಪರಿಕಲ್ಪನೆಯಡಿ ಮೌಲ್ಯಯುತ ಬದುಕು ಕಟ್ಟಿಕೊಡುವ ಕನ್ನಡ ಭಾಷೆ ಜಗತ್ತಿಗೆ ಮಾದರಿಯಾಗಿದೆ ಎಂದರು.

    ಮೊಳಕಾಲ್ಮೂರು, ಚಳ್ಳಕೆರೆ ಭಾಗದ ಜನ ಅನ್ನ, ನೀರಿನಲ್ಲಿ ಬಡತನ ಅನುಭವಿಸುತ್ತಿರಬಹುದು. ಆದರೆ, ತಳ ಸಮುದಾಯಗಳ ಗ್ರಾಮೀಣ ಜನರಲ್ಲಿ ಜನಪದದ ಸೊಗಡು ಶ್ರೀಮಂತವಾಗಿದೆ ಎಂದು ತಿಳಿಸಿದರು.

    ಸಿದ್ದಯ್ಯನಕೋಟೆ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿ, ನಾಡಿನ ಉದ್ದಗಲಕ್ಕೂ ಬಸವಾದಿ ಶರಣರು ಕಾಯ, ವಾಚ ಮನಸ್ಸಿನಿಂದ ವೈಚಾರಿಕತೆ ನೆಲೆಯಲ್ಲಿ ವಚನ ಸಾಹಿತ್ಯ ರಚಿಸಿದ್ದು, ಸ್ವಸ್ಥ ಸಮಾಜ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದರು.

    ಸಮಾಜ ಸೇವಕಿ ಕೆ.ಜೆ ಜಯಲಕ್ಷ್ಮೀ ಮಾತನಾಡಿ , ಮೊಳಕಾಲ್ಮೂರಿನ ಬುಡಕಟ್ಟು ಜನರಲ್ಲಿ ಮೌಲ್ಯಯುತ ಸಂಪ್ರದಾಯ ಅಡಗಿದೆ ಎಂದು ತಿಳಿಸಿದರು.

    ಉಪನ್ಯಾಸಕಿ ಡಾ.ಪ್ರೇಮಾ ಪಲ್ಲವಿ ಉಪನ್ಯಾಸ ನೀಡಿದರು. ತಾಪಂ ಇಒ ಪ್ರಕಾಶ್, ಬಿಇಒ ಎಂ.ಸೋಮಶೇಖರ್, ಕಸಾಪ ಅಧ್ಯಕ್ಷ ಡಿ.ಒ.ಮುರಾರ್ಜಿ, ಪದಾಧಿಕಾರಿಗಳಾದ ಎಂ.ಗೋವಿಂದಪ್ಪ, ಟಿ.ರೇವಣ್ಣ, ಶ್ರೀರಾಮುಲು, ಉಪನ್ಯಾಸಕ ಬಿ.ರಾಮಸ್ವಾಮಿ. ಕರುನಾಡ ಹಣತೆ ಕವಿ ಬಳಗದ ಅಧ್ಯಕ್ಷ ರಾಜುಸೂಲೇನಹಳ್ಳಿ, ಕರವೇ ತಾಲೂಕಾಧ್ಯಕ್ಷ ಸೂರಮ್ಮನಹಳ್ಳಿ ನಾಗರಾಜ್, ಸಿ.ಮಹೇಶ್, ವಕೀಲರಾದ ಮಂಜುನಾಥ ಸ್ವಾಮಿ ನಾಯಕ, ರಾಜಶೇಖರನಾಯಕ, ಬಿ.ವಿಜಯ್, ಶಾಂತಣ್ಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts