More

    ಕೆಳ ಸೇತುವೆ ನಿರ್ಮಾಣಕ್ಕೆ ಒತ್ತಾಯ

    ಮೊಳಕಾಲ್ಮೂರು: ತಾಲೂಕಿನ ಬಿ.ಜಿ.ಕೆರೆ ಬಸವೇಶ್ವರ ಬಡಾವಣೆ ಸಮೀಪ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಬಳಿ ಕೆಳಸೇತುವೆ ನಿರ್ಮಿಸಬೇಕೆಂದು ಆಗ್ರಹಿಸಿ ಬುಧವಾರ ಸಿಪಿಐ ಒಕ್ಕೂಟದ ಪದಾಧಿಕಾರಿಗಳು ಸಹಿ ಸಂಗ್ರಹ ಚಳವಳಿ ನಡೆಸಿದರು.

    ಬಿ.ಜೆ.ಕೆರೆ 30ಕ್ಕೂ ಅಧಿಕ ಗ್ರಾಮಗಳನ್ನೊಳಗೊಂಡ ಕೇಂದ್ರವಾಗಿದೆ. ಸಾವಿರಾರು ಕುಟುಂಬಗಳಿರುವ ಬಸವೇಶ್ವರ ನಗರದ ಪಕ್ಕದಲ್ಲೇ ಹಾದು ಹೋಗಿರುವ ಹೆದ್ದಾರಿಯನ್ನು ವಿಸ್ತರಣೆ ಮಾಡಲಾಗುತ್ತಿದೆ. ಇದರ ಜತೆಗೆ ಅಂಡರ್‌ಪಾಸ್ ಮಾಡಿದರೆ ಬಡಾವಣೆ ಜನ-ಜಾನುವಾರು, ವಾಹನಗಳ ಓಡಾಟಕ್ಕೆ ಅನುಕೂಲವಾಗುತ್ತದೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸಹಿ ಸಂಗ್ರಹಿತ ಮನವಿಯನ್ನು ತಹಸೀಲ್ದಾರ್‌ಗೆ ವಿತರಿಸಿದರು.

    ಸಿಪಿಐ ತಾಲೂಕು ಕಾರ್ಯದರ್ಶಿ ಜಾಫರ್ ಮಾತನಾಡಿ, ಬಸವೇಶ್ವರ ಬಡಾವಣೆ ಸಮೀಪ ಕೆಳಸೇತುವೆ ನಿರ್ಮಿಸಬೇಕೆಂದು ರಸ್ತೆ ವಿಸ್ತರಣೆ ಸರ್ವೆ ಸಂದರ್ಭದಲ್ಲೇ ಗುತ್ತಿಗೆದಾರರಿಗೆ ಮನವರಿಕೆ ಮಾಡಲಾಗಿತ್ತು. ಈಗ ಉದಾಸೀನ ತೋರುತ್ತಿರುವುದು ಸಲ್ಲದು. ಇದು ಹೀಗೆಯೇ ಮುಂದುವರಿದರೆ ರಸ್ತೆ ತಡೆ ಚಳವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಮನವಿ ಸ್ವೀಕರಿಸಿದ ತಹಸೀಲ್ದಾರ್ ಎಂ.ಬಸವರಾಜ್, ಅಂಡರ್ ಪಾಸ್ ನಿರ್ಮಾಣದ ಬಗ್ಗೆ ರಸ್ತೆ ನಿರ್ವಹಣೆ ಮುಖ್ಯಸ್ಥರ ಗಮನಕ್ಕೆ ತರಲಾಗಿದೆ. ಶೀಘ್ರವೇ ಈ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

    ಒಕ್ಕೂಟದ ಪದಾಧಿಕಾರಿಗಳಾದ ಡಿ.ಪೆನ್ನಯ್ಯ, ಕಾಮಯ್ಯ, ಮೂರ್ತಿ, ಬೋರಯ್ಯ, ಓಬಣ್ಣ, ರತ್ನಮ್ಮ, ಮಹಾದೇವಪ್ಪ, ತಿಪ್ಪೇಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts