More

    ವಿದ್ಯಾರ್ಥಿಗಳಿಗೆ ಬಿಸಿಯೂಟದ ಅಕ್ಕಿ ವಿತರಣೆ

    ಮೊಳಕಾಲ್ಮೂರು: ಕರೊನಾ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಿರುವ ಕಾರಣ ಬಿಸಿಯೂಟ ಯೋಜನೆಯ ಅಕ್ಕಿ-ಬೇಳೆಯನ್ನು ಅಕ್ಷರ ದಾಸೋಹ ಯೋಜನೆಯಡಿ ತಾಲೂಕಿನ ಎಲ್ಲ ಶಾಲೆಗಳ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗುತ್ತಿದೆ.

    ವಿಶ್ವವನ್ನೇ ತಲ್ಲಣಗೊಳಿಸಿದ ಕರೊನಾ ವೈರಸ್ ಸೋಂಕಿನ ನಿಯಂತ್ರಣಕ್ಕಾಗಿ 2020ರ ಮಾರ್ಚ್‌ನಿಂದ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಪುನಃ ಶಾಲೆ ಪ್ರಾರಂಭಿಸಲು ಸರ್ಕಾರ ಪ್ರಯತ್ನಿಸುತ್ತಿದ್ದರೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಜೂನ್ ಮತ್ತು ಜುಲೈ ತಿಂಗಳ 53 ದಿನದ ಬಿಸಿಯೂಟ ಬಾಬ್ತಿನ ಅಕ್ಕಿ, ಬೇಳೆ ಮತ್ತು ಗೋದಿಯನ್ನು ಆಯಾ ಶಾಲಾ ಹಂತದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಮಕ್ಕಳಿಗೆ ಡಿ.2ರಿಂದ ವಿತರಣೆ ಆರಂಭಿಸಲಾಗಿದೆ.

    ತಾಲೂಕಿನಲ್ಲಿ ಸರ್ಕಾರಿ ಮತ್ತು ಅನುದಾನಿತ ಸೇರಿ 166 ಪ್ರಾಥಮಿಕ, ಪ್ರೌಢಶಾಲೆಗಳಿದ್ದು, ಒಟ್ಟು 21082 ವಿದ್ಯಾರ್ಥಿಗಳಿದ್ದಾರೆ. 1223 ಕ್ವಿಂಟಾಲ್ ಅಕ್ಕಿ, 811 ಕ್ವಿಂಟಾಲ್ ಬೇಳೆ, 161 ಕ್ವಿಂಟಾಲ್ ಗೋದಿ ಬಂದಿದೆ. 1-5ನೇ ತರಗತಿ ಮಕ್ಕಳಿಗೆ 4 ಕೆಜಿ 500 ಗ್ರಾಂ ಅಕ್ಕಿ, 800 ಗ್ರಾಂ ಗೋದಿ, 3 ಕೆಜಿ ಬೇಳೆ., 6-8ನೇ ತರಗತಿ ವಿದ್ಯಾರ್ಥಿಗಳಿಗೆ 6 ಕೆ.ಜಿ. 750 ಗ್ರಾಂ ಅಕ್ಕಿ, 1 ಕೆ.ಜಿ. 200 ಗ್ರಾಂ ಗೋದಿ, 4 ಕೆ.ಜಿ. 600 ಗ್ರಾಂ ಬೇಳೆ. 9-10ನೇ ತರಗತಿ ವಿದ್ಯಾರ್ಥಿಗಳಿಗೆ 7 ಕೆ.ಜಿ. 950 ಗ್ರಾಂ ಅಕ್ಕಿ, 4 ಕೆ.ಜಿ. 600 ಗ್ರಾಂ ಬೇಳೆ ಕೊಡಲಾಗುತ್ತಿದೆ ಎಂದು ಅಕ್ಷರ ದಾಸೋಹ ಯೋಜನೆ ಅಧಿಕಾರಿ ಪಾತಲಿಂಗಪ್ಪ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts