More

    ಪಲ್ಟಾನ್ ಆರ್ಭಟಕ್ಕೆ ಮಂಕಾದ ಟೈಟಾನ್ಸ್: ಪೈರೇಟ್ಸ್‌ಗೆ ಸುಲಭ ಜಯ

    ನೋಯ್ಡ: ಮೋಹಿತ್ ಗೋಯತ್ (13) ತೋರಿದ ಆಲ್ರೌಂಡ್ ನಿರ್ವಹಣೆಯಿಂದ ಪುಣೇರಿ ಪಲ್ಟಾನ್ ತಂಡ ಪ್ರೊ ಕಬಡ್ಡಿ 10ನೇ ಆವೃತ್ತಿಯಲ್ಲಿ ತೆಲುಗು ಟೈಟಾನ್ಸ್ ಎದುರು 54-18 ರಿಂದ ಜಯಭೇರಿ ಬಾರಿಸಿತು. 7ನೇ ಗೆಲುವು ದಾಖಲಿಸಿದ ಪಲ್ಟಾನ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳಿತು. ಎಂಟನೇ ಸೋಲಿನೊಂದಿಗೆ ತೆಲುಗು ಟೈಟಾನ್ಸ್ ತಂಡ ಕೊನೇ ಸ್ಥಾನದಲ್ಲಿ ಉಳಿಯಿತು.

    ನೋಯ್ಡ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನೋಯ್ಡ ಚರಣದ ಸೋಮವಾರದ ಪಂದ್ಯದ ಆರಂಭದಿಂದ 9ನೇ ನಿಮಿಷದವರೆಗೂ ಉಭಯ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಿದವು. ಬಳಿಕ ಏಕಪಕ್ಷೀಯ ಪ್ಯಾಬಲ್ಯ ಸಾಧಿಸಿದ ಪುಣೇರಿ ಪಲ್ಟಾನ್ ಟೂರ್ನಿಯ ದುಬಾರಿ ಆಟಗಾರ ಪವನ್ ಶೆರಾವತ್ ಅವರನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಇದರೊಂದಿಗೆ ಮೊದಲಾರ್ಧದಲ್ಲಿ ಟೈಟಾನ್ಸ್ ತಂಡವನ್ನು ಆಲೌಟ್ ಬಲೆಗೆ ಕೆಡವಿ 23-10ರಿಂದ ಮುನ್ನಡೆ ಸಾಧಿಸಿತು.

    ದ್ವಿತೀಯಾರ್ಧದಲ್ಲಿ ಅಧಿಕಾರಯುತ ಆಟ ಪ್ರದರ್ಶಿಸಿದ ಪಲ್ಟಾನ್ ಆರಂಭದಲ್ಲೆ ಟೈಟಾನ್ಸ್ ತಂಡವನ್ನು 2ನೇ ಬಾರಿ ಆಲೌಟ್ ಮಾಡಿ ಮುನ್ನಡೆಯನ್ನು 26-11ಕ್ಕೆ ಹೆಚ್ಚಿಸಿಕೊಂಡು ಸಂಪೂರ್ಣ ಪ್ರಾಬಲ್ಯ ಮೆರೆಯಿತು. ಎಲ್ಲ ವಿಭಾಗಳಲ್ಲೂ ವೈಫಲ್ಯ ಅನುಭವಿಸಿದ ಟೈಟಾನ್ಸ್ ಪಂದ್ಯದ 30ನೇ ನಿಮಿಷದಲಿ ್ಲಮೂರನೇ ಬಾರಿ ಆಲೌಟ್ ಆಯಿತು. ಪುಣೇರಿ ಪರ ಅಸ್ಲಾಮ್ (8), ಮೊಹಮದ್ರೆಜಾ ಮತ್ತು ಅಭಿನೇಶ್ ತಲಾ 5 ಅಂಕ ಕಲೆಹಾಕಿದರು. ಟೈಟಾನ್ಸ್ ಪರ ಸಂದೀಪ್ ಧುಲ್ ಗರಿಷ್ಠ (5) ಅಂಕಗಳಿಸಲು ಶಕ್ತರಾದರು.

    ಪೈರೇಟ್ಸ್‌ಗೆ ಸುಲಭ ಜಯ: ಸ್ಟಾರ್ ರೈಡರ್ ಪ್ರದೀಪ್ ನರ್ವಾಲ್ (21) ಅಮೋಘ ನಿರ್ವಹಣೆ ಹೊರತಾಗಿಯೂ ಆತಿಥೇಯ ಯುಪಿ ಯೋಧಾಸ್ ತಂಡ ದಿನದ 2ನೇ ಪಂದ್ಯದಲ್ಲಿ ಪಟನಾ ಪೈರೇಟ್ಸ್ ಎದುರು 41-48ರಿಂದ ಮುಗ್ಗರಿಸಿತು. ಪಟನಾ ಪರ ಸಚಿನ್ (15) ನಡೆಸಿದ ಯಶಸ್ವಿ ರೈಡಿಂಗ್ ನಡೆಸಿದರು. ಮೊದಲಾರ್ಧದಲ್ಲಿ ಯೋಧಾಸ್ ತಂಡವನ್ನು 2 ಬಾರಿ ಆಲೌಟ್ ಮಾಡಿದ ಪಟನಾ 25-16 ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದಲ್ಲಿ ನೀರಸ ನಿರ್ವಹಣೆ ತೋರಿದ ಯೋಧಾಸ್ ಸತತ 2ನೇ ಸೋಲುಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts