More

    ಮೊಗಪ್ಪೆಗೆ ಮಣ್ಣಿನ ರಸ್ತೆಯೇ ಶಾಶ್ವತ

    ಪುತ್ತೂರು: ತಾಲೂಕಿನ ಕೊಳ್ತಿಗೆ ಗ್ರಾಮದ ಮೊಗಪ್ಪೆ ಪ್ರದೇಶಕ್ಕೆ ಮಣ್ಣಿನ ರಸ್ತೆಯೇ ಶಾಶ್ವತವಾಗಿದೆ.
    ಇಲ್ಲಿ 40ರಷ್ಟು ಕುಟುಂಬಗಳು ವಾಸವಿದ್ದು, ಏರು ದಿಣ್ಣೆಯ ರಸ್ತೆಯಲ್ಲೇ ಸಂಚರಿಸಬೇಕಿದೆ. 15 ವರ್ಷದ ಹಿಂದೆ ರಸ್ತೆ ನಿರ್ಮಾಣಗೊಂಡಿದ್ದರೂ ಡಾಂಬರು ಆಗಿಲ್ಲ. ಇಲ್ಲಿ ಮಳೆಗಾಲದಲ್ಲಿ ಕಂಬಳ ಗದ್ದೆಯಂತಾಗಿ ಸಂಚಾರವೇ ದುಸ್ತರವಾಗುತ್ತದೆ.

    ಗ್ರಾಮ ಪಂಚಾಯಿತಿ, ಸ್ಥಳೀಯ ಜನಪ್ರತಿನಿಧಿಗಳಿಗೆ ರಸ್ತೆ ಸರಿಪಡಿಸುವಂತೆ ಜನ ಮನವಿ ಮಾಡಿದ್ದರೂ ಸ್ಪಂದನೆ ಇಲ್ಲದಂತಾಗಿದೆ. ಇಲ್ಲಿನ ಅಂಗನವಾಡಿ ಕೇಂದ್ರ, ಉಪಆರೋಗ್ಯ ಕೇಂದ್ರಗಳು ರಸ್ತೆ ಸೌಲಭ್ಯದಿಂದ ವಂಚಿತವಾಗಿವೆ. ಹೆಚ್ಚಿನ ಗರ್ಭಿಣಿಯರು, ಬಾಣಂತಿಯರು ಆರೋಗ್ಯ ಸಲಹೆಗಾಗಿ ಏರುದಿಣ್ಣೆಯ ರಸ್ತೆಯಲ್ಲೇ ಸಂಚರಿಸುತ್ತಿದ್ದರೂ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಜನ ದೂರಿದ್ದಾರೆ.

    ಪ್ರಧಾನಿ ಕಾರ್ಯಾಲಯದಿಂದ ಸ್ಪಂದನೆ: ಮೊಗಪ್ಪೆ ಪ್ರದೇಶಕ್ಕೆ ಯಾವುದಾದರೊಂದು ಯೋಜನೆ ಮೂಲಕ ರಸ್ತೆ ಸಂಪರ್ಕ ಕಲ್ಪಿಸುವಂತೆ ನೆಟ್ಟಾರು ಮಿಥುನ್ ಎಂಬುವರು ಪ್ರಧಾನಿ ಕಾರ್ಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಪಂಚಾಯತ್‌ರಾಜ್ ಇಂಜಿನಿಯರ್ ಉಪವಿಭಾಗದ ಅಧಿಕಾರಿಗಳಿಗೆ, ಕೊಳ್ತಿಗೆ ಪಿಡಿಒಗೂ ಪ್ರಧಾನಿ ಕಾರ್ಯಾಲಯದಿಂದ ನೋಟಿಸ್ ನೀಡಲಾಗಿದೆ.

    ಮೊಗಪ್ಪೆ ಪ್ರದೇಶದ ರಸ್ತೆ ಅಭಿವೃದ್ದಿಪಡಿಸುವಂತೆ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವೊಬ್ಬ ಅಧಿಕಾರಿ, ಜನಪ್ರತಿನಿಧಿ ಸ್ಪಂದಿಸಿಲ್ಲ. ಈಬಗ್ಗೆ ಪ್ರಧಾನಿ ಕಾರ್ಯಾಲಯಕ್ಕೆ ದೂರು ನೀಡಲಾಗಿದೆ.
    -ಮಿಥುನ್ ನೆಟ್ಟಾರು, ಕೊಳ್ತಿಗೆ ಗ್ರಾಮದ ಮೊಗಪ್ಪೆ ಪ್ರದೇಶದ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts