More

    ಕರೊನಾ ಸೋಲಿಸೋಣ…ಅಭಿವೃದ್ಧಿ ಸಾಧಿಸೋಣ: ಮನ್​ ಕೀ ಬಾತ್​ನಲ್ಲಿ ಪ್ರಧಾನಿ ಮೋದಿ ಕರೆ

    ನವದೆಹಲಿ: 66ನೇ ಆವೃತ್ತಿಯ ಮನ್​ ಕೀ ಬಾತ್​ ಬಾನುಲಿ ಕಾರ್ಯಕ್ರಮದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕರೊನಾ ಸೋಲಿಸಿ, ದೇಶದ ಅಭಿವೃದ್ಧಿ ಸಾಧಿಸುವ ಕಡೆ ಹೆಜ್ಜೆ ಹಾಕೋಣ ಎಂದು ಕರೆ ನೀಡಿದರು.

    ಕರೊನಾ ಸೋಂಕು ಇಡೀ ದೇಶವನ್ನು ಕಾಡುತ್ತಿದೆ, ಇದು ಚರ್ಚೆ ಮಾಡುವ ಸಮಯವಾಗಿದೆ. ಇದರಿಂದ ಪಾರಾಗುವ ಬಗೆ ಹೇಗೆ ಎಂಬುದನ್ನು ಯೋಚಿಸಬೇಕಾಗಿದೆ. 6 ತಿಂಗಳ ಹಿಂದೆ ಕರೊನಾ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಇದೀಗ ದೇಶವನ್ನೇ ಆವರಿಸಿದೆ. ಕರೊನಾ ಜತೆಗೆ ಹಲವು ವಿಪತ್ತುಗಳು ಸಹ ನಡೆದಿವೆ. ಚಂಡಮಾರುತ್ತವನ್ನು ನೋಡಿದ್ದೇವೆ. 2020ನೇ ಇಸವಿ ಕೆಟ್ಟದ್ದಲ್ಲ ಎಂದು ಹೇಳಿದರು.

    ಹಲವು ಕ್ಷೇತ್ರಗಳತ್ತ ಗಮನಹರಿಸಬೇಕಿದೆ
    ಭಾರತ ಹಲವು ಸವಾಲುಗಳನ್ನು ಎದುರಿಸಿದೆ. ಕರೊನಾ ಸಂಕಷ್ಟದಿಂದ ದೇಶ ಲಾಕ್​ ಆಗಿತ್ತು. ಅನ್​ಲಾಕ್​ ಸಮಯದಲ್ಲಿ ಹಲವು ಕ್ಷೇತ್ರಗಳತ್ತ ಗಮನಹರಿಸಬೇಕಿದೆ. ಮತ್ತೆ ದೇಶದ ಪ್ರಗತಿಯನ್ನು ಸರಿ ದಾರಿಗೆ ತರಬೇಕಿದೆ. ಹೀಗಾಗಿ ಪ್ರತಿಯೊಬ್ಬರು ತಪ್ಪದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ. ಕರೊನಾ ಸೋಲಿಸೋಣ…ಅಭಿವೃದ್ಧಿ ಸಾಧಿಸೋಣ…ಪರಸ್ಪರ ಸಹಕಾರದಿಂದ ಎಲ್ಲರೂ ಮುನ್ನುಗ್ಗೋಣ ಎಂದರು.

    ಕನಿಷ್ಠ 6 ಅಡಿ ಅಂತರವಿರಲಿ
    ಮುಂಜಾಗ್ರತೆ ಅನುಸರಿಸದೇ ಇದ್ದಲ್ಲಿ ನಿಮ್ಮ ಕುಟುಂಬ ಸಂಕಷ್ಟಕ್ಕೆ ಸಿಲುಕಲಿದೆ. ಹೀಗಾಗಿ ಕನಿಷ್ಠ 6 ಅಡಿ ಅಂತರದಲ್ಲಿ ನಿಂತು ಮಾತನಾಡಿ. ಕರೊನಾ ಎದುರಿಸಲು ಹಲವು ಹಳ್ಳಿಗಳ ಜನ ಹೋರಾಡುತ್ತಿದ್ದಾರೆ. ಹಲವೆಡೆ ಕ್ವಾರಂಟೈನ್​ ಕೇಂದ್ರಗಳನ್ನು ಸಿದ್ಧಪಡಿಸಿದ್ದಾರೆ. ದೇಶಕ್ಕಾಗಿ ಎಲ್ಲರೂ ಬದುಕಬೇಕಿದೆ. ವಲಸೆ ಕಾರ್ಮಿಕರಿಗೆ ಇದ್ದಲ್ಲೇ ಕೆಲಸ ಸಿಗುತ್ತಿದೆ. ರೈತರು, ಕಾರ್ಮಿಕರಿಗೆ ನೆರವಾಗಲೆಂದೇ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.

    ಎಲ್ಲರು ಸಮರ್ಥರಾಗೋಣ
    ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕಿದೆ. ಕರೊನಾದಿಂದ ಹಲವರು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಇದರ ವಿರುದ್ಧ ಹೋರಾಡಬೇಕಿದೆ. ಇದು ಎಲ್ಲರ ಹೋರಾಟದ ಸಮಯವಾಗಿದೆ. ಎಲ್ಲರು ಸಮರ್ಥರಾಗೋಣ. ಲಾಕ್​ಡೌನ್​ ಸಮಯಲ್ಲಿ ಹಲವರು ತಮ್ಮ ಬಾಲ್ಯದ ಆಟಗಳನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

    ಲಡಾಖ್​ನಲ್ಲಿ ನಾವು ಶೌರ್ಯ ತೋರಿದ್ದೇವೆ
    ಭಾರತ ವಿಶ್ವಬಂಧು ಸಿದ್ಧಾಂತ ಮೇಲೆ ನಿಂತಿದೆ. ಲಡಾಖ್​ನಲ್ಲಿ ನಾವು ಶೌರ್ಯ ತೋರಿದ್ದೇವೆ. ಈ ಮೂಲಕ ಶತ್ರುಗಳಿಗೆ ತಕ್ಕ ಉತ್ತರ ನೀಡಿದ್ದೇವೆ. ಲಡಾಖ್​ನಲ್ಲಿ ನಮ್ಮ ವೀರ ಯೋಧರು ಎದುರಾಳಿಗಳಿಗೆ ಪ್ರತ್ಯುತ್ತರ ನೀಡಿದ್ದಾರೆ. ಹುತಾತ್ಮ ಯೋಧರಿಗೆ ಗೌರವ ಸಲ್ಲಿಸೋಣ. ಹುತಾತ್ಮರಿಗಾಗಿ ದೇಶದ ಜನರ ಮನಸ್ಸು ಮಿಡಿದಿದೆ. ಯೋಧರ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬೋಣ ಎಂದು ಕರೆ ನೀಡಿದರು.

    ಸ್ಥಳೀಯ ವಸ್ತುಗಳಿಗೆ ಆದ್ಯತೆ ನೀಡೋಣ
    ಲಡಾಖ್​ ಘಟನೆಯಿಂದ ಸ್ಥಳೀಯ ವಸ್ತುಗಳ ಮಹತ್ವ ಗೊತ್ತಾಗಿದೆ. ಹೀಗಾಗಿ ಸ್ಥಳೀಯ ವಸ್ತುಗಳಿಗೆ ಆದ್ಯತೆ ನೀಡೋಣ. ಪ್ರತಿಯೊಬ್ಬರ ಸೇವೆಯು ದೇಶವನ್ನು ಮತ್ತಷ್ಟು ಬಲಿಷ್ಠವಾಗಿಸುತ್ತದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಎಂದು ಘೋಷಿಸಿದರು.

    ಮಂಡ್ಯದ ಕಾಮೇಗೌಡರನ್ನು ಮೆಚ್ಚಿದ ಪ್ರಧಾನಿ
    ಮಂಡ್ಯದ ಕಾಮೇಗೌಡರ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ದೇಶಾದ್ಯಂತ ಮಾನ್ಸೂನ್​ ಆರಂಭವಾಗಿದೆ. ನೀರು ಉಳಿಸುವಲ್ಲಿ ಕಾಮೇಗೌಡರ ಪಾತ್ರ ಅತ್ಯುತ್ತಮವಾಗಿದೆ. ತಮ್ಮ ಇಳಿ ವಯಸ್ಸಿನಲ್ಲಿಯೂ ಪ್ರಕೃತಿಯನ್ನು ಕಾಪಾಡುತ್ತಿದ್ದಾರೆ, ಮರಗಳನ್ನು ನೆಟ್ಟು ಕಾಡು ಬೆಳೆಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts