More

    ಇದರಲ್ಲಿ ಕರ್ನಾಟಕ ಮಾದರಿಯಾಗಲಿ ಎಂದರಂತೆ ಮೋದಿ! ಪ್ರಧಾನಿ ಜತೆಗಿನ ಮಾತುಕತೆ ವಿವರ ಬಿಚ್ಚಿಟ್ಟ ಸಿಎಂ

    ನವದೆಹಲಿ: ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ರಾಜ್ಯದ ಹಲವು ಅಭಿವೃದ್ಧಿ ವಿಷಯಗಳ ಕುರಿತು ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಕೆಲವು ಕೆಲವು ಕಾರ್ಯಯೋಜನೆಗಳ ಬಗ್ಗೆ ಮೋದಿ ಪ್ರಶಂಸೆ ವ್ಯಕ್ತಪಡಿಸಿದರು ಎಂದು ಬೊಮ್ಮಾಯಿ ತಿಳಿಸಿದ್ದಾರೆ.

    “ರೈತರ ಮಕ್ಕಳಿಗೆ ಶಿಕ್ಷಣ ನೀಡುವ ಕಾರ್ಯಕ್ರಮ ರೂಪಿಸಿರುವ ಬಗ್ಗೆ ಮೋದಿ ಮುಕ್ತಕಂಠದಿಂದ ಶ್ಲಾಘಿಸಿದರು. ಕರ್ನಾಟಕದಲ್ಲಿ ರೈತರ ಮಾಹಿತಿಯನ್ನು ಡಿಜಿಟಲೈಸ್​ ಮಾಡಿರುವುದರಿಂದ ಈ ಕಾರ್ಯ ಸುಗಮವಾಗಲಿದೆ. ನಿಮ್ಮ ಯಶಸ್ಸು ಬೇರೆ ರಾಜ್ಯಗಳಿಗೂ ಅನುಕರಣೆಗೆ ಮಾದರಿಯಾಗಲಿದೆ ಎಂದು ಪ್ರಧಾನಿ ಹೇಳಿದರು. ಟೆಂಡರ್​​ ಸ್ಕ್ರೂಟಿನಿ ವ್ಯವಸ್ಥೆಯನ್ನು ಪಾರದರ್ಶಕಗೊಳಿಸಲು ನಾವು ಕೈಗೊಂಡಿರು ಹೆಜ್ಜೆಯ ಬಗೆಗೂ ಸಂತೋಷಪಟ್ಟರು. ಎಲ್ಲಾ ಇಲಾಖೆಗಳಲ್ಲಿ ಅಧಿಕಾರಿಗಳಿಗೆ ಅರಿವು ಮೂಡಿಸಿ ಅನುಷ್ಠಾನ ಮಾಡಿ ಎಂದರು” ಎಂದು ಬೊಮ್ಮಾಯಿ ಹೇಳಿದರು.

    ಇದನ್ನೂ ಓದಿ: ಡಿಸೆಂಬರ್​ನಲ್ಲಿ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

    ಮೋದಿ ಅವರೊಂದಿಗೆ ಮಾತುಕತೆ ನಡೆಸಿದ ನಂತರ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, 100 ದಿನಗಳಲ್ಲಿ ತಮ್ಮ ಸರ್ಕಾರದ ಆಡಳಿತ ನಡೆದಿರುವ ಕುರಿತು ಚರ್ಚೆ ನಡೆಸಲಾಯಿತು. ಕೆಲವು ಕಾರ್ಯಕ್ರಮಗಳ ಬಗ್ಗೆ ಹೊಗಳಿದರು. ಹಾಗೇ ಇನ್ನೂ ಉತ್ತಮ ಕೆಲಸ ಮಾಡಲು ಸಲಹೆಗಳನ್ನೂ ನೀಡಿದರು ಎಂದು ತಿಳಿಸಿದರು.

    ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಂಚಾಲಕರನ್ನು ನೇಮಿಸಿ ಅಮೃತ ಯೋಜನೆಗಳ ಜಾರಿ ಮುಂತಾದ ಬಗ್ಗೆ ಕೂಡ ಪ್ರಧಾನಿಯೊಂದಿಗೆ ಚರ್ಚೆ ನಡೆಯಿತು. ಮನೆಯಿಲ್ಲದವರಿಗೆ ಮತ್ತು ನಿವೇಶನರಹಿತರಿಗೆ ಪ್ರಧಾನ ಮಂತ್ರಿ ಆವಾಸ್​ ಯೋಜನೆ ಸಹಯೋಗದಲ್ಲಿ ಮನೆ, ನಿವೇಶನ ಒದಗಿಸಲು ಕ್ರಮ ಕೈಗೊಳ್ಳಿ ಎಂದರು. ಜೊತೆಗೇ, ಎಸ್​ಸಿಎಸ್​ಟಿ ಹೆಣ್ಣುಮಕ್ಕಳ ಆರ್ಥಿಕ ಸಬಲೀಕರಣಕ್ಕೆ ಬ್ಯಾಂಕ್​ಗಳಿಗೆ ವಿಶೇಷ ಸೂಚನೆ ನೀಡುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದರು ಎಂದು ಸಿಎಂ ತಮ್ಮ ಮಾತುಕತೆಯ ಸಾರಾಂಶವನ್ನು ವಿವರಿಸಿದರು.

    2023ರ ಟಾರ್ಗೆಟ್​: ರಾಜಕೀಯ ಬೆಳವಣಿಗೆಗಳ ಬಗ್ಗೆ ಸಿಎಂ ಬೊಮ್ಮಾಯಿ ಮತ್ತು ಪಿಎಂ ಮೋದಿ ನಡುವೆ ಚರ್ಚೆ ನಡೆದಿದೆ. ಬೈಎಲೆಕ್ಷನ್​ಗಳಲ್ಲಿ ಒಂದು ಕಡೆ ಗೆಲುವು, ಮತ್ತೊಂದು ಕಡೆ ಅಲ್ಪ ಮತದಲ್ಲಿ ಸೋಲು ಕಂಡಿರುವುದಕ್ಕೆ ಪ್ರಧಾನಿ ಮೋದಿ ಸೋಲುಗೆಲುವನ್ನು ಸಮಾನವಾಗಿ ಸ್ವೀಕರಿಸಿ ಎಂದು ಹೇಳಿದ್ದಾರೆ. “2023 ರ ಚುನಾವಣೆಗೆ ಗಮನ ಕೊಡಿ” ಎಂದು ಮೋದಿ ಹೇಳಿದ್ದಾರೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

    ವಿರಾಟ್​​ ಕೊಹ್ಲಿ ಪುತ್ರಿಗೆ ರೇಪ್​ ಬೆದರಿಕೆ ಹಾಕಿದ್ದವ ಪೊಲೀಸ್​ ವಶಕ್ಕೆ

    ಪೊಲೀಸ್​ ಠಾಣೆಯಲ್ಲಿ ಸಾವಪ್ಪಿದ ಯುವಕ; ‘ನಿರ್ಲಕ್ಷ್ಯ’ಕ್ಕಾಗಿ ಐವರು ಸಸ್ಪೆಂಡ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts