More

    ರಾಜಸ್ಥಾನದಲ್ಲಿ ಮೊಳಗಿದ ‘ಮೋದಿ, ಮೋದಿ’ ಕಹಳೆ

    ಜೈಪುರ: ರಾಜಸ್ಥಾನದಲ್ಲಿ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಎಲ್ಲೆಲ್ಲೂ ‘ಮೋದಿ, ಮೋದಿ’ ಘೋಷಣೆಗಳು ಮುಗಿಲುಮುಟ್ಟಿದ್ದವು.
    ರಾಜಸ್ಥಾನ ಬಿಜೆಪಿ ಭದ್ರಕೋಟೆ. ಸಾಂಪ್ರದಾಯಿಕ ಮತದಾರರು ಇದ್ದಾರೆ. ಮುಂಜಾನೆಯಿಂದಲೇ ಬಿಜೆಪಿ ಪರ ಟ್ರೆಂಡ್​ ಸೃಷ್ಟಿಯಾಗಿದ್ದು, ಎಲ್ಲೆಲ್ಲೂ ಬಿಜೆಪಿ ದ್ವಜಗಳು ಹಾರಾಡುತ್ತಿದ್ದವು. ನಗುತ್ತಿರುವ ಮುಖಗಳು, ವಿಜಯದ ಸಂಕೇತ ಪ್ರದರ್ಶಿಸುತ್ತಿರುವ ಕಾರ್ಯಕರ್ತರು ಕಂಡುಬಂದರು.

    ಇದನ್ನೂ ಓದಿ: ‘ರಾಜಸ್ಥಾನದ ಯೋಗಿ’ ಬಾಲಕ ನಾಥ್ ಮುನ್ನಡೆ
    ಮಧ್ಯಾಹ್ನ 12:30ಕ್ಕೆ ಬಿಜೆಪಿ 111 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 73 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿತ್ತು. ‘ಮೋದಿ, ಮೋದಿ’ ಘೋಷಣೆಗಳು ಎಲ್ಲೆಲ್ಲೂ ಮೊಳಗುತ್ತಿದ್ದವು. ಬಿಜೆಪಿ ನಾಯಕಿ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯೆಂದೇ ಬಿಂಬಿತರಾಗಿರುವ ದಿಯಾ ಕುಮಾರಿ, “ಮೋದಿ ಅಂಶದ ಹೊರತಾಗಿ ಮಹಿಳಾ ಅಂಶವೇ ಪ್ರಮುಖ ಪಾತ್ರ ವಹಿಸಿದೆ”. “ರಾಜಸ್ಥಾನ ಮತ್ತು ಮಧ್ಯಪ್ರದೇಶ ಫಲಿತಾಂಶಗಳು ಸಾರ್ವತ್ರಿಕ ಚುನಾವಣೆಗೆ ಧಿಕ್ಸೂಚಿಯಾಗಿವೆ” ಎಂದು ಅವರು ಹೇಳಿದ್ದಾರೆ.

    ಬಿಜೆಪಿಯಿಂದ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬಹುದು ಎಂಬ ಪ್ರಶ್ನೆಗೆ, ‘ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದೇವೆ. ರಾಜಸ್ಥಾನವು ಮೂರು ದಶಕಗಳಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹಾವು ಏಣಿಯಾಟದಂತಾಗಿದೆ. 2018 ರಲ್ಲಿ ಯಾವುದೇ ಪಕ್ಷಕ್ಕೆ ಬಹುಮತವನ್ನು ನಿರಾಕರಿಸುವ ಮೂಲಕ ಅಚ್ಚರಿ ಮೂಡಿಸಿತ್ತು. 200 ಸದಸ್ಯ ಬಲದ ಸದನದಲ್ಲಿ ಕಾಂಗ್ರೆಸ್ ಮಾಯಾವತಿಯವರ ಬಹುಜನ ಸಮಾಜ ಪಕ್ಷದ ಬೆಂಬಲದೊಂದಿಗೆ ಸರ್ಕಾರ ರಚಿಸಿತ್ತು.

    ಚುನಾವಣಾ ಫಲಿತಾಂಶ 2023; ತೆಲಂಗಾಣದ ಘಟಾನುಘಟಿಗಳೆದರು ಎಮ್ಮೆ ಕಾಯುವ ಹುಡುಗಿ ಲೀಡಿಂಗ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts