More

    ತೇಜಸ್ ಹಾರಾಟ ನಡೆಸಿದ ಮೋದಿ

    ಬೆಂಗಳೂರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಎಚ್‌ಎಎಲ್ ನಿರ್ಮಿತ ತೇಜಸ್ ಯುದ್ಧ ವಿಮಾನವನ್ನು ಹಾರಾಟ ನಡೆಸಿದರು. ಪೈಲಟ್ ಪೋಷಾಕು ಧರಿಸಿ ಆಕರ್ಷಿಸಿದ್ದಲ್ಲದೆ, ಎಚ್‌ಎಎಲ್ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಶನಿವಾರ ಬೆಳಗ್ಗ 9.30ಕ್ಕೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರು ಸ್ಚದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನದಲ್ಲಿ ಸುಮಾರು 10 ನಿಮಿಷಕ್ಕೂ ಹೆಚ್ಚಿನ ಸಮಯ ಹಾರಾಟ ನಡೆಸಿದರು. ಈ ಮೂಲಕ ಹಲವು ವರ್ಷಗಳ ಬಳಿಕ ಯುದ್ಧ ವಿಮಾನದಲ್ಲಿ ದೇಶದ ಪ್ರಧಾನಿಯೊಬ್ಬರು ಹಾರಾಟ ನಡೆಸಿದ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಪಾತ್ರರಾಗಿದ್ದಾರೆ.

    ಭದ್ರತಾ ದೃಷ್ಟಿಯಿಂದ ಇದನ್ನು ಗೌಪ್ಯವಾಗಿ ಇಡಲಾಗಿತ್ತು. ಈ ಮೊದಲೇ ಮೋದಿ ಅವರು ಬೆಂಗಳೂರಿಗೆ ಆಗಮಿಸಿದ ವೇಳೆ ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

    ಯುದ್ಧ ವಿಮಾನಲದಲ್ಲಿ ಹಾರಾಟ ನಡೆಸುವ ವೇಳೆ ಆರೋಗ್ಯದಲ್ಲಿ ಸಣ್ಣ ವ್ಯತ್ಯಾಸವಾದರೂ ದೊಡ್ಡ ಸಮಸ್ಯೆಗೆ ಸಿಲುಕಬೇಕಾಗುತ್ತದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಕಳೆದ ಒಂದು ವಾರದಿಂದ ವೈದ್ಯರು ಮೋದಿ ಅವರಿಗೆ ವೈದ್ಯಕೀಯ ತಪಾಸಣೆ ನಡೆಸಿದ್ದರು.

    ಬೆಂಗಳೂರಿಗೆ ಆಗಮಿಸಿದ ಮೋದಿ ಅವರನ್ನು ವೈದ್ಯರ ತಂಡವು ನಿರಂತರವಾಗಿ ತಪಾಸಣೆಗೆ ಒಳಪಡಿಸಿದ ಬಳಿಕವೇ ತೇಜಸ್ ಹಾರಾಟಕ್ಕೆ ಅನುಮತಿ ನೀಡಿದರು. ನಿಯಮದಂತೆ ಭಾರತೀಯ ವಾಯುಪಡೆಯ (ಐಎಎ್) ಸಮವಸವನ್ನು ನೀಡಲಾಗಿತ್ತು. ವಾಯುಪಡೆಯ ಸಮವಸ ಧರಿಸಿ 10 ನಿಮಿಷಗಳ ಕಾಲ ಹಾರಾಟ ನಡೆಸಿದರು.

    ಹಾರಾಟ ನಡೆಸಿದ ಬಳಿಕ ಸಾಮಾಜಿಕ ತಾಣ ಎಕ್ಸ್ ಖಾತೆಯಲ್ಲಿ ಅನಿಸಿಕೆ ಹಂಚಿಕೊಂಡಿರುವ ಮೋದಿ ಅವರು, ತೇಜಸ್‌ನಲ್ಲಿನ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇನೆ. ಈ ಅನುಭವವು ವಿಸ್ಮಯಕಾರಿಯಾಗಿ ಪುಸ್ಟೀಕರಿಸಿದೆ. ದೇಶದ ಸ್ಥಳೀಯ ಸಾಮರ್ಥ್ಯಗಳಲ್ಲಿ ವಿಶ್ವಾಸವನ್ನು ಹೆಚ್ಚಿಸಿದೆ ಮತ್ತು ನಮ್ಮ ರಾಷ್ಟ್ರೀಯ ಸಾಮರ್ಥ್ಯದ ಬಗ್ಗೆ ನನಗೆ ಹೊಸ ಹೆಮ್ಮೆ ಮತ್ತು ಆಶಾವಾದವನ್ನು ನೀಡಿತು ಎಂದು ಮುಕ್ತಕಂಠದಿಂದ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ನಾವು ಜಗತ್ತಿನಲ್ಲಿ ಯಾರಿಗೂ ಕಡಿಮೆ ಇಲ್ಲ. ನಮ್ಮ ಎಚ್‌ಎಎಲ್, ಡಿಆರ್‌ಡಿಒ, ಇಸ್ರೋ ಹೆಮ್ಮೆಯ ಸಂಸ್ಥೆಗಳಾಗಿವೆ. ತೇಜಸ್ ಯುದ್ಧ ವಿಮಾನ ನನಗೆ ರೋಮಾಂಚನಕಾರಿ ಅನುಭವ ಉಂಟು ಮಾಡಿತು. ಇದಕ್ಕಾಗಿ ಭಾರತೀಯರೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts