More

    “ಮೋದಿಗೆ ತಮಿಳುನಾಡು ಟಿವಿ ಥರ… ರಿಮೋಟ್​ನಿಂದ ಸಿಎಂನ ಕಂಟ್ರೋಲ್ ಮಾಡ್ತಾರೆ !”

    ಚೆನ್ನೈ: ತಮಿಳುನಾಡಿನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಬಿಸಿ ಆಗಲೇ ಏರಿದಂತಿದೆ. ರಾಜ್ಯದ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿ ವಿರುದ್ಧ ತಮ್ಮ ಮಾತಿನ ಭರಾಟೆಯನ್ನು ಆರಂಭಿಸಿದ್ದಾರೆ. ರಾಜ್ಯದ ತಿರುನೇಳವೇಲಿನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಮತ್ತು ತಮಿಳುನಾಡಿನ ಮುಖ್ಯಮಂತ್ರಿ ಎಳಪ್ಪಾಡಿ ಈ.ಪಳನಿಸ್ವಾಮಿ ಅವರ ಮೇಲೆ ಒಟ್ಟಿಗೇ ವಾಕ್​ಪ್ರಹಾರ ನಡೆಸಿದ್ದಾರೆ.

    “ನಾನು ರಾತ್ರಿ 30 ಸೆಕೆಂಡುಗಳ ಒಳಗೆ ನಿದ್ದೆ ಮಾಡಿಬಿಡ್ತೀನಿ. ಯಾಕಂದ್ರೆ ನಾನು ಮೋದಿಗೆ ಹೆದರಲ್ಲ. ಆದರೆ ತಮಿಳುನಾಡು ಸಿಎಂ ಕಥೆ ಏನು ಗೊತ್ತಾ? ಅವರಿಗೆ ನಿದ್ದೆ ಮಾಡೋಕೇ ಆಗಲ್ಲ… ಯಾಕಂದ್ರೆ ಅವರು ಅಪ್ರಾಮಾಣಿಕರು. ಅವರ ಅಪ್ರಾಮಾಣಿಕತೆಯಿಂದಾಗಿ ಅವರಿಗೆ ಮೋದಿ ವಿರುದ್ಧ ನಿಲ್ಲಲು ಸಾಧ್ಯವಾಗ್ತಾ ಇಲ್ಲ…” ಎಂದು ರಾಹುಲ್ ಗಾಂಧಿ ಟೀಕೆ ಆರಂಭಿಸಿದರು.

    ಇದನ್ನೂ ಓದಿ: ಭಾರತೀಯ ಆಟಿಕೆಗಳಾದ ಬುಗುರಿ, ಕ್ಯಾಟರ್​ಬಿಲ್ಲು ವಿಜ್ಞಾನ ಕಲಿಸುತ್ತವೆ : ಪ್ರಧಾನಿ ಮೋದಿ

    “ತಮಿಳುನಾಡು ಸಿಎಂ ಭ್ರಷ್ಟರಾಗಿದ್ದಾರೆ. ಆದ್ದರಿಂದ ಅವರನ್ನು ನಿಯಂತ್ರಿಸುವ ಮೂಲಕ ತಮಿಳುನಾಡು ಜನರನ್ನು ತಾವು ನಿಯಂತ್ರಿಸಬಹುದು ಅಂತ ಮೋದಿ ಅಂದುಕೊಂಡಿದ್ದಾರೆ” ಎಂದು ಆರೋಪಿಸಿದ ಗಾಂಧಿ, ಟಿವಿಯನ್ನು ರಿಮೋಟ್​ನಿಂದ ಕಂಟ್ರೋಲ್ ಮಾಡುವಂತೆ, ಮೋದಿ, ತಮಿಳುನಾಡು ಸಿಎಂ ಅವರನ್ನು ನಿಯಂತ್ರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

    “ತಮಿಳುನಾಡನ್ನು ಮೋದಿ, ಅವರ ಟಿವಿ ಥರ ಅನ್ಕೊಂಡಿದ್ದಾರೆ. ರಿಮೋಟ್ ಬಳಸಿ ರಾಜ್ಯದ ಜನರಿಗೆ ಏನು ಬೇಕಾದ್ರೂ ಮಾಡಬಹುದು ಅಂತ ತಿಳಿದಿದ್ದಾರೆ. ರಿಮೋಟ್​ನಲ್ಲಿ ವಾಲ್ಯುಮ್ ಜಾಸ್ತಿ ಮಾಡುದ್ರೆ, ಇಲ್ಲಿ ಸಿಎಂ ಸ್ವಲ್ಪ ಜೋರಾಗಿ ಮಾತಾಡ್ತಾರೆ. ವಾಲ್ಯುಮ್ ಕಡಿಮೆ ಮಾಡುದ್ರೆ ಸಿಎಂ ಮೌನವಾಗಿಬಿಡ್ತಾರೆ” ಎಂದು ಅಣಕಿಸಿದ ರಾಹುಲ್ ಗಾಂಧಿ, “ಆದರೆ ತಮಿಳುನಾಡಿನ ಜನ ಆ ರಿಮೋಟ್​ನಿಂದ ಬ್ಯಾಟರಿ ತೆಗೆದು ಬಿಸಾಕ್ತಾರೆ. ಯಾಕಂದ್ರೆ ತಮಿಳುನಾಡು ಜನರ ಹಣೆಬರಹವನ್ನು ತಮಿಳು ಜನರಲ್ಲದೆ ಮತ್ತಾರೂ ನಿಯಂತ್ರಿಸಲು ಸಾಧ್ಯವಿಲ್ಲ” ಎಂದು ಹೇಳಿದರು.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಆತ್ಮನಿರ್ಭರ​ ಭಾರತದಲ್ಲಿ ವಿಜ್ಞಾನದ ಕೊಡುಗೆ ಬಹಳ ದೊಡ್ಡದು: ಪ್ರಧಾನಿ ಮೋದಿ

    2ನೇ ಹಂತದ ಕರೊನಾ ಲಸಿಕೆ ಅಭಿಯಾನ : ಇಲ್ಲಿದೆ, ನಿಮ್ಮ ಪ್ರಶ್ನೆಗಳಿಗೆ ಉತ್ತರ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts