More

    ಬರ ಪರಿಸ್ಥಿತಿಯಲ್ಲಿ ನೀರಿನ ಬಳಕೆ ಮಿತಗೊಳಿಸಿ

    ಚಿಕ್ಕಮಗಳೂರು: ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರು ಅಮೃತವಿದ್ದಂತೆ. ಕಲುಷಿತ ನೀರು ಸೇವಿಸಿ ಆರೋಗ್ಯ ಹೆದಗೆಡಿಸಿಕೊಳ್ಳುವ ಬದಲು ಗುಣಮಟ್ಟದ ನೀರನ್ನು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹರಿಹರದಹಳ್ಳಿ ಗ್ರಾಪಂ ಅಧ್ಯಕ್ಷೆ ಶಾರದಾ ಮಾಸ್ತೇಗೌಡ ಹೇಳಿದರು.

    ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ನೂತನ ಘಟಕವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮಸ್ಥರು ಕುಡಿಯುವ ನೀರನ್ನು ವ್ಯರ್ಥಮಾಡದೆ ಸದ್ಬಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
    ಘಟಕವು ಎರಡು ಸಾವಿರ ಲೀಟರ್ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಕುಡಿಯಲು ಮಾತ್ರ ನೀರನ್ನು ಬಳಸಿಕೊಳ್ಳಬೇಕು. ಜತೆಗೆ ಘಟಕದ ಸುತ್ತಲೂ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬರ ಎದುರಾಗಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಸಮಯಕ್ಕೆ ಮಳೆ ಬಾರದಿದ್ದರಿಂದ ಸರಿಯಾಗಿ ನೀರನ್ನು ಪೂರೈಸಲಾಗುತ್ತಿಲ್ಲ. ಹಾಗಾಗಿ ಜನತೆಗೆ ಗ್ರಾಪಂನಿಂದ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಅನುಕೂಲ ಕಲ್ಪಿಸಲಾಗಿದೆ ಎಂದರು.
    ಗ್ರಾಪಂ ಉಪಾಧ್ಯಕ್ಷ ಜೆ.ಎನ್.ಮಂಜೇಗೌಡ, ಸದಸ್ಯ ಮುಳ್ಳೇಗೌಡ, ಗ್ರಾಮಸ್ಥರಾದ ಪದ್ಮರಾಜ್, ಕೌಶಿಕ್‌ರಾಜ್, ಲಿಂಗಮೂರ್ತಿ, ಪಟೇಲ್ ಜಯಣ್ಣ, ಯತೀಶ್, ಜಯರಾಮ್, ಉಮೇಶ್, ಶಿವರಾಜ್, ರಮೇಶ್, ಆನಂದ್, ಚನ್ನಯ್ಯ, ಆನಂದಯ್ಯ, ಯತೀಶ್, ವಾಟರ್‌ಮೆನ್ ಉಮೇಶ್, ಮಾಸ್ತೇಗೌಡ, ಕಾರ್ಯದರ್ಶಿ ಅಭಿನಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts