More

    ಮೊಬೈಲ್ ಬಳಕೆ ಮಿತವಾಗಿದ್ದರೆ ಆರೋಗ್ಯಕ್ಕೆ ಒಳ್ಳೆಯದು

    ಆಳಂದ: ಅತಿಯಾದ ಮೊಬೈಲ್ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಲ್ಲದೆ ದೃಷ್ಟಿ ದೋಷ ಹೆಚ್ಚಾಗಿ ಏಕಾಗ್ರತೆ ಕಡಿಮೆಯಾಗುತ್ತದೆ ಎಂದು ಸಂಬುದ್ಧ ಕಾಲೇಜಿನ ಪ್ರಾಚಾರ್ಯ ಸಂಜಯ ಪಾಟೀಲ್ ಎಚ್ಚರಿಕೆ ನೀಡಿದರು.

    ಜಮಗಾ (ಜೆ) ಗ್ರಾಮದಲ್ಲಿ ಶ್ರೀ ಸದ್ಗುರು ದಾಸ ಆಶ್ರಮ ಟ್ರಸ್ಟ್ ಭಾನುವಾರ ರಾತ್ರಿ ಏರ್ಪಡಿಸಿದ್ದ ಸಂತ ಕಬೀರದಾಸರ 34ನೇ ಪುಣ್ಯಸ್ಮರಣೆ ಹಾಗೂ ಎಸ್ಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳ ಸತ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಆಧುನಿಕ ಯುಗದಲ್ಲಿ ಚಿಕ್ಕ ಮಗುವಿನಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ಮೊಬೈಲ್ ಬಳಸುತ್ತಾರೆ. ಇವುಗಳಿಂದ ಜೀವನ ಸುಲಭ, ಅನುಕೂಲಕರವಾಗಿದೆ. ಅಲ್ಲದೆ ಆನ್‌ಲೈನ್ ಅಧ್ಯಯನಕ್ಕೂ ಸಾಕಷ್ಟು ಸಹಾಯವಾಗುತ್ತದೆ. ಆದರೆ ಮೊಬೈಲ್ ಅನ್ನು ಸರಿಯಾಗಿ ಬಳಸಿಕೊಂಡರೆ ವರವಾಗುತ್ತದೆ, ಅತಿಯಾದರೆ ಸಾಕಷ್ಟು ಸಮಸ್ಯೆ ತಂದಿಡುತ್ತದೆ ಎಂದು ಹೇಳಿದರು.

    ಮುಖಂಡ ದೇವರಾಯ ಜವಳಿ ಮಾತನಾಡಿ, ಗುರುವಿನ ಗುಲಾಮನಾಗಿ ಸಾಗಿದರೆ ಬದುಕು ಸುಂದರವಾಗಿರುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು. ಸಂತ ಕಬೀರ್‌ದಾಸ್ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಗ್ರಾಮದಲ್ಲಿರುವ ಟ್ರಸ್ಟ್ನಿಂದ ನಿರಂತರವಾಗಿ ಉತ್ತಮ ಕಾರ್ಯಕ್ರಮಗಳು ನಡೆಯಲಿ ಎಂದು ಅಭಿಪ್ರಾಯಪಟ್ಟರು.

    ಜಿಡಗಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿದರು. ಸಿದ್ದಯ್ಯ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
    ಪ್ರಮುಖರಾದ ಸಿದ್ದರಾಮ ಮಂಡೆ, ಯೋಗೇಶ ಸಕ್ಕರಗಿ, ಗುರುಲಿಂಗಪ್ಪ ಸಕ್ಕರಗಿ, ಶ್ರೀಶೈಲ ಮೂಲಗೆ, ಚಂದ್ರಕಾAತ ಪಾಟೀಲ್, ಮಹಾದೇವಪ್ಪ ಪಾಟೀಲ್, ಚಂದ್ರಕಾAತ ಕಾಳಮುದ್ರಿ, ಕಲ್ಯಾಣರಾವ ಮೂಲಗೆ, ಪ್ರಭುಲಿಂಗ ಪಾಟೀಲ್, ಮಲ್ಲಿನಾಥ ದಾಬಾ, ಅಪ್ಪಾರಾವ ಜೀರಹಳಿ, ಶಾಂತಪ್ಪ ಪಾಟೀಲ್, ಶರಣಪ್ಪ ಅಷ್ಠಗಿ, ಲಕ್ಷö್ಮಣ ಪೂಜಾರಿ ಇತರರಿದ್ದರು.
    ಗುಂಡಯ್ಯ ಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಸಿದ್ದರಾಮ ಸಕ್ಕರಗಿ ಸ್ವಾಗತಿಸಿದರು. ಗಂಗಾಧರ ಕುಂಬಾರ ನಿರೂಪಣೆ ಮಾಡಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts