ಕವಿತಾಳ: ಆರ್ಯವೈಶ್ಯ ಸಮುದಾಯದವರು ಭಾವೈಕ್ಯದೊಂದಿಗೆ ವಹಿವಾಟು ನಡೆಸುತ್ತಿದ್ದು, ಆರ್ಯವೈಶ್ಯರ ಆದರ್ಶಗಳು ಸಮಾಜಕ್ಕೆ ಮಾದರಿಯಾಗಿವೆ ಎಂದು ಆಲ್ಕೋಡ ಸಿದ್ಧಾರೂಢ ಮಠದ ಸದ್ಗುರು ಸ್ವರೂಪಾನಂದ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ಸಾವಿತ್ರಿ ಬಾಯಿ ಫುಲೆ ಆದರ್ಶ ಶಿಕ್ಷಕಿ
ಪಟ್ಟಣದ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ಆರ್ಯವೈಶ್ಯ ಸೇವಾ ಸಂಘದಿಂದ ಆಯೋಜಿಸಿದ್ದ ವಾಸವಿ ಕಲ್ಯಾಣ ಮಂಟಪ ಉದ್ಘಾಟನೆ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.
ವಾಸವಿ ಕಲ್ಯಾಣ ಮಂಟಪ ಉದ್ಘಾಟನೆ
ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾ ಉಪಾಧ್ಯಕ್ಷ ಆನಂದ ತುರ್ವಿಹಾಳ ಮಾತನಾಡಿ, ವ್ಯಾಪಾರ ನಂಬಿ ಬದುಕು ಕಟ್ಟಿಕೊಂಡಿರುವ ಆರ್ಯವೈಶ್ಯ ಸಮುದಾಯವರಿಗೆ ಸರ್ಕಾರ ಎಲ್ಲ ಕ್ಷೇತ್ರದಲ್ಲಿ ಮೀಸಲಾತಿ ನೀಡುವ ಮೂಲಕ ಮುಖ್ಯವಾಹಿನಿಗೆ ತರಬೇಕೆಂದು ಹೇಳಿದರು. ಪ್ರಮುಖರಾದ ಸಂದೀಪ ಇಲ್ಲೂರು, ಭಾಸ್ಕರ ರಾವ್ ಕೋಸ್ಗಿ, ಮಂಜುನಾಥ ಬಾಗೋಡಿ, ಪಲುಗುಲ ನಾಗರಾಜ, ರಾಘವೇಂದ್ರ ಶೆಟ್ಟಿ ಇದ್ದರು.