More

    ಡಿಸೈನರ್​ ಬಟ್ಟೆ ತೊಟ್ಟು ಹಣದೊಂದಿಗೆ ಪೋಸ್​ ನೀಡಿದ ಬೆನ್ನಲ್ಲೇ ಮಾಡೆಲ್​ಗೆ ಕಾದಿತ್ತು ಶಾಕ್​..!

    ಬೀಜಿಂಗ್​: ವಿನ್ಯಾಸ ಪಡಿಸಿದ ಉಡುಪು ಧರಿಸಿ, ಹಣದೊಂದಿಗೆ ಫೋಟೋಗೆ ಪೋಸ್​ ನೀಡಿದ ಬೆನ್ನಲ್ಲೇ ಇನ್​ಸ್ಟಾಗ್ರಾಂ ಮಾಡೆಲ್​ ವಾಸವಿರುವ ಹಾಂಗ್​ಕಾಂಗ್​ನ ಅಪಾರ್ಟ್​ಮೆಂಟ್​ ದಾಳಿ ಮಾಡಿದ ಮೂವರು ದುಷ್ಕರ್ಮಿಗಳು ಮಾಡೆಲ್​ ಮತ್ತು ಆಕೆಯ 6 ತಿಂಗಳ ಗಂಡು ಮಗುವನ್ನು ಕಟ್ಟಿಹಾಕಿ ದರೋಡೆ ಮಾಡಿರುವ ಘಟನೆ ನಡೆದಿದೆ.

    ಮಾಡೆಲ್​ ಸೊ ಮೈ ಯಾನ್​ (25) ಹೇಳುವ ಪ್ರಕಾರ ಕಳೆದ ಮಂಗಳವಾರ ದರೋಡೆಕೋರರು ಅವಳ ಲಕ್ಸುರಿ ಮನೆ ಮೇಲೆ ಬೆಳಗ್ಗೆ 11 ಗಂಟೆ ಸುಮಾರಿಗೆ ದಾಳಿ ನಡೆಸಿದ್ದಾರೆ. ಬಳಿಕ ಮನೆಯಿಂದ ಹತ್ತು ಹ್ಯಾಂಡ್​ಬ್ಯಾಗ್​, ಏಳು ವಾಚ್​, ಒಂದು ಲ್ಯಾಪ್​ಟಾಪ್​ ಮತ್ತು 400,000 ಡಾಲರ್​ ಮೌಲ್ಯದ (2,96,84,600 ರೂಪಾಯಿ) ಎರಡು ದುಬಾರಿ ಮೊಬೈಲ್​ ಫೋನ್​ಗಳನ್ನು ದೋಚಿದ್ದಾರೆ.

    ಡಿಸೈನರ್​ ಬಟ್ಟೆ ತೊಟ್ಟು ಹಣದೊಂದಿಗೆ ಪೋಸ್​ ನೀಡಿದ ಬೆನ್ನಲ್ಲೇ ಮಾಡೆಲ್​ಗೆ ಕಾದಿತ್ತು ಶಾಕ್​..!

    ನಾನು ನನ್ನ ಕೋಣೆಯಲ್ಲಿ ಮಲಗಿದ್ದೆ. ಲಿವಿಂಗ್​ ರೂಮ್​ನಿಂದ ಶಬ್ಧ ಬರುವುದನ್ನು ಕೇಳಿ ಎಚ್ಚರಗೊಂಡು ನನ್ನ ಬೆಡ್​ರೂಮ್​ನಿಂದ ಹೊರಗೆ ಹೋಗಿ ನೋಡುವಷ್ಟರಲ್ಲಿ ನನ್ನ ಫ್ಲ್ಯಾಟ್​ ಒಳಗೆ ಮೂವರು ವ್ಯಕ್ತಿಗಳು ಆಗಲೇ ನುಸುಳಿದ್ದರು. ಅಂಟಿನ ಟೇಪ್​ ಮೂಲಕ ನನ್ನೊಂದಿಗೆ ಮಗುವನ್ನು ಸೇರಿಸಿ ಕಟ್ಟಿಹಾಕಿ ಎಲ್ಲವನ್ನು ಕದ್ದೊಯ್ದರು ಎಂದು ಹೇಳಿದ್ದಾರೆ.

    ಅಲ್ಲದೆ, ದರೋಡೆಕೋರರು ಮಾಡೆಲ್​ ಮೇಲೆ ದಾಳಿ ಸಹ ಮಾಡಿದ್ದಾರೆ. ದರೋಡೆಕೋರರು 40 ರಿಂದ 50 ವರ್ಷದೊಳಗಿನವರು. ಎಲ್ಲವನ್ನು ದೋಚಿ ಪರಾರಿಯಾದ ಬಳಿಕ ಹೇಗೋ ಟೇಪ್​ನಿಂದ ಬಿಡಿಸಿಕೊಂಡು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧಾರಿಸಿ ಸಾಕ್ಷಿ ಸಂಗ್ರಹ ಮಾಡಿದ್ದಾರೆಂದು ಮಾಡೆಲ್​ ತಿಳಿಸಿದ್ದಾರೆ. (ಏಜೆನ್ಸೀಸ್​)

    ಡಿಸೈನರ್​ ಬಟ್ಟೆ ತೊಟ್ಟು ಹಣದೊಂದಿಗೆ ಪೋಸ್​ ನೀಡಿದ ಬೆನ್ನಲ್ಲೇ ಮಾಡೆಲ್​ಗೆ ಕಾದಿತ್ತು ಶಾಕ್​..!

    ಸಿಪಿಎಂ ‘ಗೂಂಡಾ’ನಿಂದ ಮಗು ಕಳೆದುಕೊಂಡಾಕೆ ಈಗ ಬಿಜೆಪಿ ನಾಯಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts