More

    ಈದ್ಗಾದಲ್ಲಿ ಸಾಮೂಹಿಕ ನಮಾಜ್​ಗೆ ಅವಕಾಶ ಮಾಡಿಕೊಡಿ: ಸಿಎಂ ಇಬ್ರಾಹಿಂ ಮನವಿ

    ಬೆಂಗಳೂರು: ಈದ್​ ಉಲ್ ಫಿತರ್​ ಹಬ್ಬದ ಸಂದರ್ಭದಲ್ಲಾದರೂ ಈದ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸುವುದಕ್ಕೆ ಮುಸ್ಲಿಮರಿಗೆ ಅವಕಾಶ ಮಾಡಿಕೊಡಿ ಎಂದು ವಿಧಾನ ಪರಿಷತ್​ ಸದಸ್ಯ ಸಿಎಂ ಇಬ್ರಾಹಿಂ ಅವರು ಬುಧವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ.

    ಇದನ್ನೂ ಓದಿ: 54 ವರ್ಷದ ಮಹಿಳೆಗೆ ಅವಳಿ ಮಕ್ಕಳು, ಪತಿಗೆ 64 ವರ್ಷ- ದಂಪತಿಯ ಬದುಕೇ ಒಂದು ಕರುಣಾಜನಕ ಕಥೆ

    ಇದರಂತೆ, ಸರ್ಕಾರಿ ಆದೇಶ ಪ್ರಕಾರ ರಾಜ್ಯದಲ್ಲಿ ಎಲ್ಲ ಮುಸ್ಲಿಮರೂ ತಮ್ಮ ಮನೆಗಳಲ್ಲೇ ಪ್ರಾರ್ಥನೆ ಮಾಡುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಮಸೀದಿಗೆ ಹೋಗಲು ಅವಕಾಶ ಇಲ್ಲ. ಕನಿಷ್ಠ ಪಕ್ಷ ಈದ್ ಹಬ್ಬದ ಸಂದರ್ಭದಲ್ಲಾದರೂ ಈದ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲು ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ಸಮುದಾಯದ ಪರವಾಗಿ ಮನವಿ ಮಾಡುತ್ತೇನೆ ಎಂದು ಲಿಖಿತ ಮನವಿಯಲ್ಲಿ ಅವರು ಕೋರಿದ್ದಾರೆ.

    ಇದನ್ನೂ ಓದಿ: ಕೇಸ್ ಕ್ಲೋಸ್ ಮಾಡಿ, ಸಾಲ ಮರುಪಾವತಿಸ್ತೇನೆ- ಅಂಗಾಲಾಚುತ್ತಿದ್ದಾರೆ ವಿಜಯ್ ಮಲ್ಯ!

    ಬಹುಶಃ ಈದ್ ಉಲ್​ ಫಿತರ್​ ಮೇ 24 ಅಥವಾ 25ರಂದು ರಾಜ್ಯದಲ್ಲಿ ಆಚರಿಸಲ್ಪಡಬಹುದು. ಈ ಕುರಿತು ನಿರ್ಣಯ ತೆಗೆದುಕೊಳ್ಳುವ ಮೊದಲು ಸರ್ಕಾರ ಮೆಡಿಕಲ್ ಪರಿಣತರ ಜತೆಗೆ ಸಮಾಲೋಚನೆ ನಡೆಸಬೇಕು. ಅವರು ನೀಡುವ ಸಲಹೆ ಅಥವಾ ಶಿಫಾರಸಿನ ಮೇರೆಗೆ ಈದ್ಗಾ ಅಥವಾ ಮಸೀದಿಯಲ್ಲಿ ಪ್ರಾರ್ಥನೆಗೆ ಅವಕಾಶ ಮಾಡಿಕೊಡಬೇಕು ಎಂದು ಬೇಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

    ಅಪ್ಪನ ಬೆನ್ನಿಗೆ ಚೂರಿ ಇಟ್ಟ ಆ ಹುಡುಗ, “ಬೈಕ್ ಓಡಿಸು” ಅಂದ; ಮುಂದೇನಾಯಿತು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts