More

    ‘ನಾನು ಶಾಸಕ, ಆದರೆ ಎಷ್ಟೇ ಸರ್ಕಸ್​ ಮಾಡಿದ್ರೂ ಬೆಡ್​ ಸಿಗ್ತಿಲ್ಲ’

    ಬೆಂಗಳೂರು: ಕರೊನಾ ಅತಿ ವೇಗದಲ್ಲಿ ಹಬ್ಬುತ್ತಿದೆ. ಪ್ರತಿನಿತ್ಯ ನೂರಾರು ಸೋಂಕಿತರಿಗೆ ಆಸ್ಪತ್ರೆಯ ಅವಶ್ಯಕತೆ ಕಾಣಿಸಿಕೊಳ್ಳುತ್ತಿದೆ. ಆದರೆ ಬೆಡ್ ಬ್ಲಾಕ್​ ದಂಧೆಯಿಂದಾಗಿ ಅನೇಕರಿಗೆ ಅಗತ್ಯ ಸಮಯದಲ್ಲಿ ಬೆಡ್​ ಸಿಗದೆ ಪ್ರಾಣ ಬಿಡುವಂತಾಗಿದೆ. ಬೇರೆ ಯಾರೋ ಅಲ್ಲ, ಕ್ಷೇತ್ರದ ಶಾಸಕರೇ ಕೇಳಿದರೂ ಬೆಡ್​ ಇಲ್ಲ ಎನ್ನುವ ಉತ್ತರ ಕೇಳಿಬರಲಾರಂಭಿಸಿದೆ. ಈ ಕುರಿತಾಗಿ ಶಾಸಕ ರವಿ ಸುಬ್ರಹ್ಮಣ್ಯ ಕೂಡ ಮಾತನಾಡಿದ್ದಾರೆ.

    ನಾನು ಬಸವನಗುಡಿಯ ಶಾಸಕ. 2 ಲಕ್ಷ ಜನಸಂಖ್ಯೆ ಇರುವ ಕ್ಷೇತ್ರ ನನ್ನದು. ಅದಕ್ಕಾಗಿಯೇ ಒಂದು ದಿನಕ್ಕೆ 5 ಬೆಡ್​ ಮತ್ತು 2 ಗಂಟೆ ನನಗೆ ಕೊಡಿ ಎಂದು ಕೇಳಿದ್ದೇನೆ. ಆದರೆ ನನಗೆ ಈವರೆಗೂ ಒಂದೇ ಒಂದು ಬೆಡ್​ ಕೂಡ ಸಿಕ್ಕಿಲ್ಲ. ನಾನು ಶಾಸಕನಾಗಿ ಫೋನ್ ಮಾಡಿದ್ರೂ ಫೋನ್ ಎತ್ತುವುದಿಲ್ಲ. ಒಂದು ವೇಳೆ ಎತ್ತಿಬಿಟ್ಟರೆ ಬೆಡ್ ಇಲ್ಲ ಎನ್ನುವ ರೆಡಿಮೇಡ್ ಉತ್ತರ ಕೊಡುತ್ತಾರೆ ಎಂದು ಅವರು ಹೇಳಿದ್ದಾರೆ.

    ಬೆಡ್​ ವ್ಯವಸ್ಥೆ ಮಾಡುತ್ತಿಲ್ಲ ಎಂದು ಜನಪ್ರತಿನಿಧಿಗಳಾದ ನಮಗೆ ಬೈಯುತ್ತಾರೆ. ಆದರೆ ಇಲ್ಲಿ ನಾವು ಏನೇ ಸರ್ಕಸ್​ ಮಾಡಿದರೂ ನಮಗೆ ಬೆಡ್​ ಸಿಗುತ್ತಿಲ್ಲ. ರಾಮಯ್ಯ ಆಸ್ಪತ್ರೆಯಲ್ಲಿ ರಾಮನಾಥ್ ಅವರ ಹೆಸರಲ್ಲಿ‌ 5 ಬಾರಿ ಬೆಡ್ ಬ್ಲಾಕ್ ಆಗುತ್ತೆ. ಅವರಿಗೆ ಬೇಕಿರೋ ವ್ಯಕ್ತಿಗಳಿಗೆ ಬೆಡ್ ಒದಗಿಸಲು ಈ ದಂಧೆ ಮಾಡುತ್ತಿದ್ದಾರೆ. ರೆಮಿಡಿಸಿವರ್ ಇಂಜೆಕ್ಷನ್ ಕೂಡ ಕಾಳಸಂತೆಯಲ್ಲಿ ಮಾರಾಟ ಆಗುತ್ತಿದೆ. 11,316 ಬೆಡ್​ ನನ್ನ ಕ್ಷೇತ್ರದಲ್ಲಿದೆ. ಅದರಲ್ಲಿ 9,690 ಬೆಡ್​ ಭರ್ತಿ ಆಗಿದೆ. ಇನ್ನುಳಿದ ಬೆಡ್​ನಲ್ಲಿ ಒಂದೇ ಒಂದು ಬೆಡ್​ ಕೂಡ ನನಗೆ ಸಿಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts