More

    ಇಂದಿರಾ ಕ್ಯಾಂಟೀನ್‌ನಿಂದ 70 ಮಂದಿ 300 ಊಟ ಪಾರ್ಸೆಲ್!

    ಪುತ್ತೂರು: ಲಾಕ್‌ಡೌನ್ ಸಂದರ್ಭ ಬಡವರು ಮತ್ತು ಸಂಕಷ್ಟದಲ್ಲಿರುವವರಿಗೆ ಉಚಿತ ಊಟ ಒದಗಿಸಲು ತೆರೆಯಲಾಗಿದ್ದ ಪುತ್ತೂರಿನ ಇಂದಿರಾ ಕ್ಯಾಂಟೀನ್‌ನಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಆರೋಪಕ್ಕೆ ಪುಷ್ಠಿ ದೊರೆತಿದೆ.

    ದಿನಕ್ಕೆ 300 ಊಟ ಪಾರ್ಸೆಲ್ ಹೋಗುತ್ತಿದೆ ಎಂಬ ಮಾಹಿತಿ ಪಡೆದ ಶಾಸಕ ಸಂಜೀವ ಮಠಂದೂರು ಮಂಗಳವಾರ ಕ್ಯಾಂಟೀನ್‌ಗೆ ಹೋಗಿ ದಾಖಲೆ ಪರಿಶೀಲಿಸಿದಾಗ, 70 ಜನ ಇಷ್ಟು ಪಾರ್ಸೆಲ್ ಪಡೆದುಕೊಂಡಿರುವುದು ಬೆಳಕಿಗೆ ಬಂದಿದೆ.

    ದಾಖಲೆ ಪುಸ್ತಕ ಪರಿಶೀಲಿಸಿದಾಗ ಕ್ಯಾಂಟೀನ್‌ಗೆ ಬಂದವರ ಸಂಖ್ಯೆ 70 ಆದರೂ ಒಬ್ಬ ವ್ಯಕ್ತಿ ಹೆಸರಲ್ಲಿ 8ಕ್ಕಿಂತ ಅಧಿಕ ಪಾರ್ಸೆಲ್ ಇರುವುದನ್ನು ಗಮನಿಸಿ, ದಾಖಲೆ ಪುಸ್ತಕದಲ್ಲಿರುವವರ ಮೊಬೈಲ್ ನಂಬರ್‌ಗೆ ಕರೆ ಮಾಡಿ ಕ್ರಾಸ್ ಚೆಕ್ ಮಾಡುವಂತೆ ನಗರಸಭೆ ಅಧ್ಯಕ್ಷರಿಗೆ ಶಾಸಕರು ಸೂಚಿಸಿದರು.

    ಸಾರ್ವಜನಿಕರು ಕೇಳಿದಷ್ಟು ಪಾರ್ಸೆಲ್ ಕೊಡದಿದ್ದರೆ ಆಕ್ರೋಶ ವ್ಯಕ್ತಪಡಿಸುತ್ತಾರೆ. ಪಾರ್ಸೆಲ್ ಕೊಟ್ಟ ಲೆಕ್ಕ ಬರೆದು, ಮೊಬೈಲ್ ನಂಬರ್ ನಮೂದಿಸುತ್ತಿದ್ದೇವೆ ಎಂದು ಕ್ಯಾಂಟೀನ್‌ನ ನಿರ್ವಾಹಕರು ತಿಳಿಸಿದ್ದಾರೆ.
    ‘ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಊಟ-ಉಪಾಹಾರ ಉಚಿತ ವಿತರಣೆಯಲ್ಲಿ ಲೋಪ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ಜಿಲ್ಲಾಧಿಕಾರಿ ಗಮನಕ್ಕೂ ತರಲಾಗುವುದು’ ಎಂದು ಶಾಸಕ ಮಠಂದೂರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts