More

    ತಂತ್ರಜ್ಞಾನಾಧಾರಿತ ಕಲಿಕೆಗೆ ನೀಡಿ ಒತ್ತು

    ಗಂಗಾವತಿ: ಸರ್ಕಾರಿ ಶಾಲೆ ಮಕ್ಕಳು ತಂತ್ರಜ್ಞಾನ ಆಧಾರಿತ ಕಲಿಕೆಯತ್ತ ಗಮನಹರಿಸಬೇಕಿದ್ದು, ಶೈಕ್ಷಣಿಕ ಸಂಪನ್ಮೂಲ ಸದ್ಬಳಕೆ ಮಾಡಿಕೊಳ್ಳುವಂತೆ ಶಾಸಕ ಪರಣ್ಣಮುನವಳ್ಳಿ ಸಲಹೆ ನೀಡಿದರು.

    ತಾಲೂಕಿನ ವಡ್ಡರಹಟ್ಟಿಯ ಶ್ರೀ ತಿಮ್ಮನಾಯಕ ಪ್ರೌಢ ಶಾಲೆಯಲ್ಲಿ ಶ್ರೀವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ನಮ್ಮ ವಿದ್ಯಾರ್ಥಿ ನಮ್ಮ ಜವಾಬ್ದಾರಿ ಪರಿಕಲ್ಪನೆಯಡಿ ಸರ್ಕಾರಿ ಶಾಲೆಗಳಿಗೆ ಆ್ಯಂಡ್ರಾಯಿಡ್ ಟಿವಿ ಮತ್ತು ಕಲಿಕಾ ಆ್ಯಪ್‌ಗಳನ್ನು ಸೋಮವಾರ ಉಚಿತವಾಗಿ ವಿತರಿಸಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದು, ಕಲಿಕಾ ಪ್ರೇರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

    ಶ್ರೀ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಸೂರಿಬಾಬು ನೆಕ್ಕಂಟಿ ಮಾತನಾಡಿ, ತಾಲೂಕಿನ 200 ಶಾಲೆಗಳಿಗೆ ಟಿವಿ ಮತ್ತು ತಂತ್ರಜ್ಞಾನ ಆಧಾರಿತ ಆ್ಯಪ್‌ಗಳನ್ನು ಉಚಿತ ವಿತರಿಸಲಾಗುತ್ತಿದೆ. ವಿದ್ಯಾನಿಕೇತನ ಶಾಲೆಯಲ್ಲಿ ಬಳಸುವ ಪಠ್ಯಕ್ರಮಗಳನ್ನು ಸರ್ಕಾರಿ ಶಾಲಾ ಮಕ್ಕಳಿಗೆ ನೀಡಲಾಗುವುದು ಎಂದು ಹೇಳಿದರು.

    ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಉದ್ಯಮಿ ಎನ್.ಆರ್.ಶ್ರೀನಿವಾಸ, ಬಿಇಒ ಸೋಮಶೇಖರಗೌಡ ತಿಪ್ಪನಾಳ್, ಎಪಿಎಂಸಿ ಮಾಜಿ ಸದಸ್ಯ ಜೋಗದ ನಾರಾಯಣಪ್ಪ ನಾಯಕ, ನಗರಸಭೆ ಮಾಜಿ ಸದಸ್ಯ ಜೋಗದ ಹನುಮಂತಪ್ಪ ನಾಯಕ, ಮುಖಂಡರಾದ ಸಣ್ಣರಾಮನಗೌಡ, ಹತ್ತಿಮರದ ಶಿವಪ್ಪ ನಾಯಕ, ಗಡ್ಡಿ ಮುದುಕಪ್ಪ, ಟಿ.ದುರುಗಪ್ಪ, ಎನ್.ಸಿದ್ದಪ್ಪ ನಾಯಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts