More

    ನಗರದ ಜನತೆಗೆ 247 ಶುದ್ಧ ನೀರು

    ಕೊಪ್ಪಳ :ನಗರದ ಜನತೆಗೆ 247 ಶುದ್ಧ ಕುಡಿವ ನೀರು ಒದಗಿಸಲಾಗುವುದು ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.

    ಬೃಂದಾವನ ನಗರದಲ್ಲಿ ನಿರ್ಮಿಸಿರುವ 5 ಲಕ್ಷ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್(ಒಎಚ್‌ಟಿ) ಉದ್ಘಾಟಿಸಿ ಸೋಮವಾರ ಮಾತನಾಡಿದರು.
    ನಗರದಲ್ಲಿ ಒಂದು ಒಎಚ್‌ಟಿ ನಿರ್ಮಾಣ ಮಾಡಬೇಕೆಂದು ನಗರವಾಸಿಗಳು ಹಲವು ಸಾರಿ ಮನವಿ ಮಾಡಿದ್ದರು.

    ಅವರ ಮನವಿಗೆ ಸ್ಪಂದಿಸಿ 5 ಲಕ್ಷ ಲೀಟರ್ ಸಾಮರ್ಥ್ಯದ ಸುಸಜ್ಜಿತ ಒಎಚ್‌ಟಿ ನಿರ್ಮಿಸಲಾಗಿದೆ. ನಗರ ಜನಸಂಖ್ಯೆಯಲ್ಲಿ ಅತೀ ವೇಗವಾಗಿ ಬೆಳೆಯುತ್ತಿದೆ. ಜನರಿಗೆ ಮೂಲ ಸೌಕರ್ಯಗಳಾದ ಸಿಸಿ ರಸ್ತೆ, ಕುಡಿವ ನೀರು, ಕಸವಿಲೇವಾರಿ ಘಟಕ ಕೂಡ ಇದೆ. ಈ ಹಿಂದೆ 64 ಕೋಟಿ ರೂ.ನಲ್ಲಿ 7-8 ಒಎಸ್‌ಡಿ ನಿರ್ಮಿಸಿ ಕೊಪ್ಪಳ ಮತ್ತು ಭಾಗ್ಯನಗರದ ಜನತೆಗೆ ಕುಡಿವ ನೀರು ಒದಗಿಸುವ ಕೆಲಸ ಮಾಡಿದ್ದೆವು. ಕೊಪ್ಪಳದ 40 ಸಾವಿರ ಮನೆಗಳಿಗೆ ನಳ ಸಂಪರ್ಕ ಒದಗಿಸುವ 108 ಕೋಟಿ ರೂ. ಯೋಜನೆಗೆ ಟೆಂಡರ್ ಕರೆಯುವ ಕೆಲಸ ಮಾಡುತ್ತಿದ್ದೇವೆ. ಕಾತರಕಿ ಹಳೇ ಫಿಲ್ಟರ್ ಬೇಡ್ ದುರಸ್ತಿಗೂ 32 ಕೋಟಿ ರೂ. ಮೀಸಲಿಡಲಾಗಿದೆ ಎಂದರು.

    ನಮಗೆ ಗುರಿ ಇದೆ ದೂರದೃಷ್ಟಿ ಕೋನವಿದೆ. ಬೇಸಿಗೆಯಲ್ಲೂ ಕೊಪ್ಪಳದ ಜನತೆಗೆ ಹುಲಿಕೆರಿ ಕೆರೆಯಲ್ಲಿ ನೀರು ಸಂಗ್ರಹ ಮಾಡಿ 24*7 ಶುದ್ಧ ನೀರು ಒದಗಿಸುವ 250 ಕೋಟಿ ರೂ. ಮೊತ್ತದ ಯೋಜನೆಗೆ ಡಿಪಿಆರ್ ತಯಾರಿಸಲಾಗಿದೆ. ಶೀಘ್ರವೇ ಅದಕ್ಕೆ ಅನುದಾನ ಮಿಸಲಿಟ್ಟು ಕಾಮಗಾರಿ ಪ್ರಾರಂಭ ಮಾಡುತ್ತೇವೆ ಎಂದರು.

    ಮಾಜಿ ಜಿಪಂ ಅಧ್ಯಕ್ಷರಾದ ಎಸ್.ಬಿ.ನಾಗರಳ್ಳಿ, ಕೆ.ರಾಜಶೇಖರ್ ಹಿಟ್ನಾಳ, ನಗರಸಭೆ ಅಧ್ಯಕ್ಷ ಶಿವಗಂಗ ಶಿವರೆಡ್ಡಿ ಭೂಮಕ್ಕನವರ, ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಕಾಟನ್ ಪಾಷಾ, ಮುಖಂಡರಾದ ಹನುಮರೆಡ್ಡಿ ಅಂಗನಕಟ್ಟಿ, ಪ್ರಸನ್ನ ಗಡಾದ್, ಶಿವಕುಮಾರ ಶೆಟ್ಟರ್, ಶರಣಪ್ಪ ಸಜ್ಜನ್, ನಗರಸಭೆ ಸದಸ್ಯರಾದ ಉಮಾ ಪಾಟೀಲ್, ಅಕ್ಬರ್ ಪಲ್ಟಾನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts