More

    ಮಮತಾ ಬ್ಯಾನರ್ಜಿಗೆ ಮತ್ತೆ ಶಾಕ್​! ಸುವೇಂದು ನಂತರ ಟಿಎಂಸಿಯಿಂದ ಮತ್ತೆರೆಡು ವಿಕೆಟ್​ ಔಟ್​!

    ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಾವು ಹೆಚ್ಚಾಗಲಾರಂಭಿಸಿದೆ. ಬಿಜೆಪಿ ಈ ಬಾರಿ ಗೆದ್ದೇ ಗೆಲ್ಲುವ ವಿಶ್ವಾಸ ತೋರಿಸಿದ್ದರೆ, ಇನ್ನೊಂದತ್ತ ಅಧಿಕಾರದಲ್ಲಿರುವ ಟಿಎಂಸಿ ಅಧಿಕಾರದಿಂದ ಕೆಳಗಿಳಿಯುವ ಮಾತೇ ಇಲ್ಲ ಎನ್ನಲಾರಂಭಿಸಿದೆ. ಅದರ ಬೆನ್ನಲ್ಲೇ ಟಿಎಂಸಿಯ ನಾಯಕರು ಪಕ್ಷ ತ್ಯಜಿಸಿ ಬಿಜೆಪಿಯತ್ತ ಬರಲಾರಂಭಿಸಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸಂಕಷ್ಟ ಎದುರಾದಂತಾಗಿದೆ.

    ಇದನ್ನೂ ಓದಿ: ಪೊಲೀಸ್​ ಪೇದೆ ಮತ್ತು ಹೆಂಡತಿಯ ಕೊಲೆ! ಅಪ್ಪ ಅಮ್ಮ ಚೀರಿಕೊಳ್ಳುತ್ತಿದ್ದರೆ ಏನೂ ಗೊತ್ತಿಲ್ಲದವಳಂತೆ ಸುತ್ತಾಡಿದ ಮಗಳು!

    ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಾಯಕ ಸುವೇಂದು ಅಧಿಕಾರಿ ಬುಧವಾರ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ನಂತರ ಪಕ್ಷಕ್ಕೆ ರಾಜೀನಾಮೆ ನೀಡಿರುವ ಅವರು ಇನ್ನೆರೆಡು ದಿನದಲ್ಲಿ ಬಿಜೆಪಿ ಸೇರಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಇದೀಗ ಪಕ್ಷದ ನಾಯಕ ಜಿತೇಂದ್ರ ತಿವಾರಿ ಕೂಡ ಸುವೇಂದು ಅವರ ಹಾದಿಯನ್ನೇ ಹಿಡಿದಿದ್ದು, ಗುರುವಾರದಂದು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ಜತೆ ಇನ್ನೋರ್ವ ನಾಯಕ, ದಕ್ಷಿಣ ಬಂಗಾಳ ರಾಜ್ಯ ಸಾರಿಗೆ ನಿಗಮದ (ಎಸ್‌ಬಿಎಸ್‌ಟಿಸಿ) ಅಧ್ಯಕ್ಷ ಕರ್ನಲ್ (ನಿವೃತ್ತ) ದೀಪತಂಗು ಚೌಧರಿ ಅವರೂ ಸಹ ರಾಜೀನಾಮೆ ಪತ್ರವನ್ನು ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಕಳುಹಿಸಿಕೊಟ್ಟಿದ್ದಾರೆ.

    ಜಿತೇಂದ್ರ ಅವರು ರಾಜೀನಾಮೆ ನೀಡುವುದಕ್ಕೂ ಮೊದಲು, ಬುಧವಾರ ರಾತ್ರಿ ಪಕ್ಷದ ಕೆಲ ನಾಯಕರು ಮತ್ತು ಜಿತೇಂದ್ರ ಅವರು ಸುವೇಂದು ಜತೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಟಿಎಂಸಿ ಸಂಸದ ಸುನಿಲ್​ ಮೊಂಡಾಲ್​ ಕೂಡ ಹಾಜರಿದ್ದರು ಎನ್ನಲಾಗಿದೆ. ಸಭೆ ನಡೆದ ಕೆಲವೇ ಗಂಟೆಗಳಲ್ಲಿ ಜಿತೇಂದ್ರ ಅವರು ರಾಜೀನಾಮೆ ನೀಡಿದ್ದು, ಕುತೂಹಲಕ್ಕೆ ಕಾರಣವಾಗಿದೆ.

    ಇದನ್ನೂ ಓದಿ: ಪಾಠ ಹೇಳಿಕೊಡುವ ನೆಪದಲ್ಲಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರವೆಸಗಿದ ಶಿಕ್ಷಕ!

    ಸುವೇಂದು ಅವರ ಹಿಡಿತದಲ್ಲಿ ಕನಿಷ್ಠ 50 ಶಾಸಕರಿದ್ದಾರೆ ಎನ್ನಲಾಗಿದೆ. ಒಂದು ವೇಳೆ ನಾಯಕನ ದಾರಿ ಹಿಡಿದು ಎಲ್ಲ ಶಾಸಕರು ಪಕ್ಷ ತ್ಯಜಿಸಿದರೆ ಬಿಜೆಪಿಗೆ ಪ್ಲಸ್ ಪಾಯಿಂಟ್​ ಆಗಲಿದ್ದು, ಟಿಎಂಸಿಯ ಕನಸು ದೂರಾಗಲಿದೆ ಎನ್ನಲಾಗಿದೆ. (ಏಜೆನ್ಸೀಸ್​)

    ಏಳು ಮಕ್ಕಳಿಗೆ ಜೀವ ಕೊಟ್ಟು ಪ್ರಾಣ ಬಿಟ್ಟ ಮಗು! ಉಕ್ರೇನ್​, ರಷ್ಯಾದ ಮಕ್ಕಳಿಗೂ ಉಸಿರು ನೀಡಿದ ಬಾಲಕ

    ಕಿರಿ ಸೊಸೆ ಜತೆ ಮಾವನ ಅಕ್ರಮ ಸಂಬಂಧ; ವಿಚಾರ ತಿಳಿದ ಹಿರಿ ಸೊಸೆ, ಅತ್ತೆ ಮಾಡಿದ್ದೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts