More

    ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆ ಸಮರ್ಥಿಸಿದ್ರು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್​!

    ಬೆಂಗಳೂರು: ಸಾರಾಯಿ ಪಾಳ್ಯದ ಸಾದಿಕ್ ನಗರದಲ್ಲಿ ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆ ಪ್ರಕರಣ ಶುಕ್ರವಾರ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ. ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಪ್ರಚೋದನಾಕಾರಿ ನಡೆಯನ್ನು ಪ್ರದರ್ಶಿಸಿದ್ದು, ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆಯನ್ನು ಮತ್ತು ಹಲ್ಲೆಕೋರರನ್ನು ಸಮರ್ಥಿಸಿಕೊಂಡಿದ್ದಾರೆ!

    ಚುನಾಯಿತ ಜನಪ್ರತಿನಿಧಿಯಾಗಿದ್ದುಕೊಂಡು ಕರೊನಾ ಸಂಬಂಧಿಸಿ ಆಶಾ ಕಾರ್ಯಕರ್ತೆಯರು ಫೀಲ್ಡಿಗೆ ಇಳಿದು ಕೆಲಸ ಮಾಡುತ್ತಿರುವುದು ಗೊತ್ತೇ ಇಲ್ಲದವರಂತೆ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ ಶಾಸಕ ಜಮೀರ್ ಅಹಮದ್​. ಸರ್ಕಾರ ಆಶಾಕಾರ್ಯಕರ್ತೆಯರಿಗೆ ಕರೊನಾ ಬಗ್ಗೆ ಮಾಹಿತಿ ಕಲೆಹಾಕಲು, ಜಾಗೃತಿ ಮೂಡಿಸಲು ಅನುಮತಿ ನೀಡಿದ್ದು ಗೊತ್ತೇ ಇಲ್ಲ. ಹಾಗೇನಾದರೂ ಅನುಮತಿ ಕೊಟ್ಟಿದೆಯೇ ಎಂದು ಪ್ರಶ್ನಿಸಿದ್ದಾರೆ.

    ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಪ್ರಕರಣ ಸುದ್ದಿಯಾಗುತ್ತಿದ್ದಂತೆ ನಾನು ಖಂಡಿಸಿದ್ದೆ. ಆದರೆ, ಸ್ಥಳಕ್ಕೆ ಭೇಟಿ ನೀಡಿದ ಬಳಿಕ ವಾಸ್ತವ ಸ್ಥಿತಿ ಮನವರಿಕೆಯಾಗಿದೆ. ಈ ಆಶಾ ಕಾರ್ಯಕರ್ತೆಯರು ಎನ್​ಆರ್​ಸಿ ಕುರಿತ ಮಾಹಿತಿ ಕೇಳಿದ್ರು, ಹಾಗಾಗಿ ಅಲ್ಲಿ ಆ ವಾತಾವರಣ ಸೃಷ್ಟಿಯಾಯಿತು ಎಂದು ಹೇಳಿಕೆ ಬದಲಾಯಿಸುತ್ತಿರುವುದಕ್ಕೆ ಸಮರ್ಥನೆಯನ್ನೂ ಜಮೀರ್ ನೀಡಿದ್ದಾರೆ. ಅವರ ಈ ನಡೆ, ನುಡಿ ಅನೇಕ ಸಂದೇಹಗಳಿಗೆ ಕಾರಣವಾಗಿದೆ. ಅಲ್ಲದೆ ವ್ಯಾಪಕ ಟೀಕೆಯೂ ವ್ಯಕ್ತವಾಗಿದೆ. (ದಿಗ್ವಿಜಯ ನ್ಯೂಸ್)

    ಒಬ್ಬ COVID19 ಸೋಂಕುಪೀಡಿತ ಚಿಕಿತ್ಸೆಗೆ ಎಷ್ಟು ವೆಚ್ಚವಾದೀತು?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts