‘ನನ್ನ ಕೊಲೆಗೆ ಸುಪಾರಿ ನೀಡಿದ್ದಾರೆ’ ಎಂದಿದ್ದ ಸುರೇಶ್​ ಗೌಡ ವಿರುದ್ಧ ಶಾಸಕ ಗೌರಿಶಂಕರ್​ ದೂರು

ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಅರೆಯೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಸುರೇಶ್ ಗೌಡ, ಗೌರಿಶಂಕರ್ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಸ್ಫೋಟಕ ಹೇಳಿಕೆ ನೀಡಿದ್ದರು. ‘ನನ್ನ ಕೊಲೆ ಮಾಡಿಸೋದಿಕ್ಕೆ ನೀನು ಸಜ್ಜಾಗಿದ್ದೀಯಾ. ನನ್ನನ್ನು ಕೊಲ್ಲಲು ಜೈಲಲ್ಲಿ ಇರೋರಿಗೆ ಸುಪಾರಿ ಕೊಡ್ತೀಯಾ…’ ಎಂದು ಹೇಳಿ ರಾಜ್ಯದಲ್ಲೇ ಸಂಚಲನ ಸೃಷ್ಟಿಸಿದ್ದರು.

ಇದೀಗ ಮಾಜಿ ಶಾಸಕನ ವಿರುದ್ಧ ತುಮಕೂರು ಎಸ್.ಪಿಗೆ ಶಾಸಕ ಗೌರಿಶಂಕರ್ ದೂರು ನೀಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ತುಮಕೂರು ಗ್ರಾಮಾಂತರ ಕ್ಷೇತ್ರದ ಅರೆಯೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ‘ಶಾಸಕ ಗೌರಿಶಂಕರ್ ನನ್ನ ಕೊಲೆಗೆ ರೌಡಿಶೀಟರ್ ಒಬ್ಬನಿಗೆ 5 ಕೋಟಿಗೆ ಸುಪಾರಿ ನೀಡಿದ್ದಾರೆ’ ಎಂದು ಬಹಿರಂಗವಾಗಿ ವೇದಿಕೆ ಮೇಲೆ ಗೌರಿಶಂಕರ್ ವಿರುದ್ದ ಗಂಭೀರ ಆರೋಪ‌ ಮಾಡಿದ್ದರು. ಸುರೇಶ್ ಗೌಡ.

'ನನ್ನ ಕೊಲೆಗೆ ಸುಪಾರಿ ನೀಡಿದ್ದಾರೆ' ಎಂದಿದ್ದ ಸುರೇಶ್​ ಗೌಡ ವಿರುದ್ಧ ಶಾಸಕ ಗೌರಿಶಂಕರ್​ ದೂರುತುಮಕೂರು ಗ್ರಾಮಾಂತರ ಕ್ಷೇತ್ರದ ಹಾಲಿ ಜೆಡಿಎಸ್ ಶಾಸಕ ಗೌರಿಶಂಕರ್, ‘ನನ್ನ ವಿರುದ್ಧ ಇದೊಂದು ಸುಳ್ಳು ಆರೋಪ. ನನ್ನ ತೆಜೋವಧೆ ಮಾಡಲು ಈ ರೀತಿಯ ಸುಳ್ಳು ಆರೋಪ ಮಾಡುತ್ತಿರುವ ಸುರೇಶ್ ಗೌಡ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮಾಜಿ ಶಾಸಕ ಸುರೇಶ್ ಗೌಡರಿಂದ ನನಗೆ ಹಾಗೂ ನನ್ನ ಕಾರ್ಯಕರ್ತರಿಗೆ ಜೀವ ಭಯವಿದೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮಾಜಿ ಶಾಸಕ ಗೌರಿಶಂಕರ್​, ತುಮಕೂರು ಎಸ್ ಪಿ, ಸಿಎಂ ಹಾಗೂ ಗೃಹ ಸಚಿವರು, ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಮಾಡಿದ್ದು ಕೂಡಲೇ ಈ ಪ್ರಕರಣವನ್ನ ಸಿಓಡಿ ತನಿಖೆಗೆ ಒಪ್ಪಿಸಿ ಸುರೇಶ್ ಗೌಡ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Share This Article

ಹದ್ದಿನ ಕಣ್ಣಿನಂಥ ದೃಷ್ಟಿ ನಿಮ್ಮದಾಗಬೇಕಾ? ಇವು ನಿಮ್ಮ ಆಹಾರದಲ್ಲಿ ಇವೆಯೇ? ಚೆಕ್​ ಮಾಡಿಕೊಳ್ಳಿ

ಬೆಂಗಳೂರು: ಮಾನವನ ಅಂಗಾಂಗಗಳಲ್ಲಿ ಎಲ್ಲವೂ ಮುಖ್ಯವೇ ಆದರೂ ಕಣ್ಣುಗಳು ಪ್ರಮುಖ ಸ್ಥಾನ ಪಡೆದುಕೊಂಡಿವೆ. ಹೀಗಾಗಿಯೇ ಕಣ್ಣುಗಳು…

ಇವುಗಳನ್ನು ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿದ್ರೆ ಸಾಕು! ಚೆನ್ನಾಗಿ ನಿದ್ದೆ ಜತೆ, ಶ್ರೀಮಂತರಾಗೋದು ಪಕ್ಕಾ!

ಬೆಂಗಳೂರು: ತುರ್ತು ಸಂದರ್ಭಗಳಲ್ಲಿ ಹಣ ಅಥವಾ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  ಈಗ ಹೇಳಿರುವ ಸರಳ ಪರಿಹಾರಗಳನ್ನು…

ಮನೆಯಲ್ಲಿ ಗುಲಾಬಿ ಗಿಡ ಬೆಳೆಸುತ್ತಿದ್ದೀರಾ? ಈ ವಾಸ್ತು ನಿಯಮಗಳು ಕಡ್ಡಾಯ!

ಬೆಂಗಳೂರು: ಸಾಮಾನ್ಯವಾಗಿ ನಮ್ಮ ಹಿತ್ತಲಿನಲ್ಲಿ ಹಲವು ಬಗೆಯ ಗಿಡಗಳನ್ನು ಬೆಳೆಸುತ್ತೇವೆ. ಗುಲಾಬಿ ಗಿಡಗಳನ್ನು ಇಷ್ಟಪಡದವರೇ ಇಲ್ಲ.…