More

    ಎಸ್ಸಿ ಮತ ಕೇಳಲು ಕಾಂಗ್ರೆಸ್ಸಿಗರಿಗಿಲ್ಲ ನೈತಿಕತೆ

    ಬಳ್ಳಾರಿ: ಕಾಂಗ್ರೆಸ್ ದೇಶದಲ್ಲಿ ಐದು ದಶಕಗಳ ಕಾಲ ಆಳ್ವಿಕೆ ನಡೆಸಿದೆ. ಸ್ವಾತಂತ್ರೃ ಬಂದ ನಂತರ ದಲಿತರನ್ನು ನಡೆಸಿಕೊಂಡ ರೀತಿ ಹೇಳತೀರದು. ಕೇವಲ ವೋಟ್‌ಬ್ಯಾಂಕ್‌ಗೋಸ್ಕರ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ಎಸ್ಸಿ ಮತಗಳು ನಮಗೆ ಬರುತ್ತದೆ ಎಂದು ಅವರು ಬೀಗುತ್ತಿದ್ದಾರೆ. ಅವರಿಗೆ ದಲಿತರ ಬಳಿ ಮತ ಕೇಳುವ ನೈತಿಕತೆ ಇಲ್ಲ ಎಂದು ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದರು.

    ನಗರದ ವಾಲ್ಮೀಕಿ ಭವನದಲ್ಲಿ ಬಿಜೆಪಿ ಎಸ್ಸಿ ಮೋರ್ಚಾದಿಂದ ಸೋಮವಾರ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿ, ಅಂಬೇಡ್ಕರ್ ಸಾವನ್ನಪ್ಪಿದಾಗ ಕಾಂಗ್ರೆಸ್‌ನವರು ಒಂದಿಂಚೂ ಜಾಗ ನೀಡಲಿಲ್ಲ. ಎಸ್ಸಿ ಸಮುದಾಯದ ಮೇಲೆ ಈಗ ಕಾಂಗ್ರೆಸ್ ನಾಯಕರಿಗೆ ಎಲ್ಲಿಲ್ಲದ ಕಾಳಜಿ ಬಂದಿದೆ ಎಂದು ಹರಿಹಾಯ್ದರು.

    ನಮ್ಮ ಸರ್ಕಾರ ಅಂಬೇಡ್ಕರ್ ಅವರ ನೆನಪಿಗಾಗಿ ವಿಶ್ವ ಜ್ಞಾನ ದಿನವನ್ನಾಗಿ ಆಚರಿಸುತ್ತಿದೆ. ಆದರೆ ಅಂಬೇಡ್ಕರ್‌ನಂತಹ ಮಹಾನ್ ಪುರುಷನನ್ನು ಅವಮಾನಿಸಿದ ಕಾಂಗ್ರೆಸ್ಸಿಗರು ದೇಶದ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ. ದಲಿತರ ಅಭಿವೃದ್ಧಿಗಾಗಿ ಯಾವುದೇ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಿಲ್ಲ ಎಂದು ದೂರಿದರು.

    ಬಳ್ಳಾರಿ ನಗರದಲ್ಲಿ ಸುಮಾರು 15 ಸಾವಿರ ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ನೀಡಲಾಗಿದ್ದು, ಅದರ ನೋಂದಣಿ ಪ್ರಕ್ರಿಯೆ ಕೂಡ ನಡೆಯುತ್ತಿದೆ. ನಗರದಲ್ಲಿ ಎಲ್ಲ ಸ್ಲಂಗಳಲ್ಲಿ ವಾಸಿಸುವ ಜನರಿಗೆ ಸಂಪೂರ್ಣವಾಗಿ ಹಕ್ಕುಪತ್ರ ವಿತರಿಸುವ ಕಾರ್ಯ ನಡೆಯುತ್ತಿದೆ. ಬಡವರಿಗೆ ಸರ್ಕಾರದ ಸೌಲಭ್ಯಗಳು ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

    ಬಿಜೆಪಿ ಜಿಲ್ಲಾಧ್ಯಕ್ಷ ಮುರಹರ ಗೌಡ, ಸಿರಗುಪ್ಪ ಶಾಸಕ ಸೋಮಲಿಂಗಪ್ಪ, ಡಿ.ಎಸ್.ವೀರೇಶ್, ಎಂ.ನರಸಪ್ಪ, ವಿರೂಪಾಕ್ಷಿ, ಬಿ.ಇ.ರಾಜೇಶ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.

    ಪ್ರಧಾನಿ ಮೋದಿ ಅವರ ಸರ್ಕಾರ ಜನರ ಪರವಾಗಿದ್ದು, ಜನರಿಗಾಗಿ ಹಲವಾರು ಯೋಜನೆಗಳನ್ನ ಜಾರಿಗೆ ತಂದಿದ್ದಾರೆ. ಭಾರತೀಯ ಜನತಾ ಪಾರ್ಟಿ, ಜನಸಾಮಾನ್ಯರ ಪಕ್ಷ. ಬಿಜೆಪಿ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ಪ್ರತಿಯೊಬ್ಬರೂ ಕಾರಣ. ಬಿಜೆಪಿ ಸರ್ಕಾರ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರ ಉತ್ತಮ ಜೀವನಕ್ಕಾಗಿ ಹೊಸ ಯೋಜನೆ ತರುತ್ತಿದೆ. ಇಷ್ಟು ದಿನ ಕಾಂಗ್ರೆಸ್ ನಂಬಿ ಹಾಳಾಗಿದ್ದೀರಿ. ಹಾಗಾಗಿ ಇನ್ನು ಮುಂದೆ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಬಾರಿ ಚುನಾವಣೆಗೆ ತಾವೆಲ್ಲರೂ ಸಹಕಾರ ನೀಡಬೇಕು.
    ಜಿ.ಸೋಮಶೇಖರ ರೆಡ್ಡಿ
    ನಗರ ಶಾಸಕ, ಬಳ್ಳಾರಿ

    ಕೇಂದ್ರ ಮತ್ತು ರಾಜ್ಯ ಸರ್ಕಾರ ಜನರಿಗಾಗಿ ಹಲವಾರು ಯೋಜನೆಗಳನ್ನು ತಂದಿದೆ. ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ನಾವು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದೆ ಇಟ್ಟುಕೊಂಡು ಮತ ಕೇಳಲು ಬರುತ್ತೇವೆ. ನನಗೆ ಬಂದಿದ್ದ 2 ಕೋಟಿ ರೂ. ಅನುದಾನದಲ್ಲಿ ಬಾಬು ಜಗಜೀವನ್ ರಾಮ್ ಭವನಕ್ಕೆ 21 ಲಕ್ಷ ರೂ. ನೀಡಿದ್ದೇನೆ. ಅದರ ಜತೆಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ.
    ವೈ.ಎಂ.ಸತೀಶ್
    ವಿಧಾನ ಪರಿಷತ್ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts