More

    ಭವಾನಿ ರೇವಣ್ಣ ಶಾಸಕಿ ಆಗ್ತಾರಾ? ಈ ಕುರಿತು ದೇವೇಗೌಡರ ಸೊಸೆ ಹೇಳಿದ್ದೇನು?

    ಹಾಸನ: ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರ ಸೊಸೆ ಭವಾನಿ ರೇವಣ್ಣ ಅವರು ಶಾಸಕಿ ಆಗುತ್ತಾರೋ ಇಲ್ಲವೋ ಎಂಬುದರ ಕುರಿತು ಸ್ವತಃ ಭವಾನಿ ಅವರೇ ಮಾತನಾಡಿದ್ದಾರೆ.

    ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ, 2013 ಹಾಗೂ 2018ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡ ಇತ್ತು. ಆದರೆ ನಾನು ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಮೇ ನಲ್ಲಿ ಜಿಲ್ಲಾ ಪಂಚಾಯಿತಿ ಎಲೆಕ್ಷನ್ ಇರಬಹುದು. ಸ್ಪರ್ಧೆ ಕುರಿತು ಯೋಚನೆ ಮಾಡಿಲ್ಲ ಎಂದರು. ಇದನ್ನೂ ಓದಿರಿ ಕಬಡ್ಡಿ ಕ್ರೀಡಾಪಟುಗಳಿದ್ದ ಕಾರು ಅಪಘಾತ: ಆಟಗಾರರಿಬ್ಬರು ಸ್ಥಳದಲ್ಲೇ ಸಾವು, ಮೂವರ ಸ್ಥಿತಿ ಗಂಭೀರ

    ನಾನು ಶಾಸಕಿ ಆಗುವುದು ಬಿಡುವುದು ದೇವರ ಇಚ್ಛೆ, ಅದರ ಕುರಿತು ಇನ್ನೂ ಯೋಚನೆ ಮಾಡಿಲ್ಲ ಎಂದ ಭವಾನಿ ರೇವಣ್ಣ, ಜಿಪಂ ಅವಧಿ ನನಗೆ ತೃಪ್ತಿ ತಂದಿದೆ ಎಂದರು.

    2018ರ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಬದಲಾವಣೆ ತರಲಾಗಿದೆ. ತಾಯಿ-ತಂದೆಯರ ದಿನ ಅಂತ ಮಾಡಿ ಬುಕ್​ಲೆಟ್ ಮಾಡಿದ್ದೇನೆ. ರಾಜ್ಯದಲ್ಲಿ ಈ ಪ್ರಯೋಗ ಪ್ರಥಮ ಬಾರಿ ಮಾಡಿದವಳು ಭವಾನಿ. ತಿಂಗಳ ಮೂರನೇ ವಾರದಲ್ಲಿ ಪಾಲಕರ ಮೀಟಿಂಗ್ ಕರೆದೆ. ಡಿಡಿಪಿಐ ಆಗಿದ್ದ ಮಂಜುನಾಥ್ ನನಗಿಂತ ಹೆಚ್ಚು ಕೆಲಸ ಮಾಡಿದರು. ಹೀಗಾಗಿ ಪ್ರಥಮ ಸ್ಥಾನ ಬಂತು. ಕೆಲಸ ಆಗಬೇಕೆಂದರೆ ಭವಾನಿ ಜತೆಗೆ ಹತ್ತು ಜನರ ಕೈ ಸೇರಬೇಕು. ದೇವರ ಇಚ್ಛೆ ಏ‌ನಿದೆ ಅಂತ ಗೊತ್ತಿಲ್ಲ. ಇಷ್ಟು ದಿನಗಳಲ್ಲಿ ಏನಾದರೂ ತಪ್ಪಾಗಿದ್ದರೆ ಕ್ಷಮಿಸು ಅಂತ ದೇವಾನುದೇವತೆಗಳಿಗೆ ಕೈ ಮುಗಿಯುತ್ತೀನಿ ಎಂದು ಭವಾನಿ ರೇವಣ್ಣ ಹೇಳಿದರು.

    ತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ

    ಊರೂರು ಸುತ್ತುತ್ತಿರೋ ‘ಸಿಡಿ ಲೇಡಿ’ ಈಗ ಎಲ್ಲಿದ್ದಾಳೆ? ಎಕ್ಸ್​ಕ್ಲೂಸಿವ್​ ಮಾಹಿತಿ ಇಲ್ಲಿದೆ

    ಕಬಡ್ಡಿ ಕ್ರೀಡಾಪಟುಗಳಿದ್ದ ಕಾರು ಅಪಘಾತ: ಆಟಗಾರರಿಬ್ಬರು ಸ್ಥಳದಲ್ಲೇ ಸಾವು, ಮೂವರ ಸ್ಥಿತಿ ಗಂಭೀರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts