More

    ಅಭಿವೃದ್ಧಿಗೆ ರಾಜ್ಯ ಸರ್ಕಾರ ಅಸಹಕಾರ ; ಶಾಸಕ ಡಾ.ರಂಗನಾಥ್ ಆರೋಪ

    ಕುಣಿಗಲ್ : ಪಟ್ಟಣದಲ್ಲಿ ಏಳು ವರ್ಷದ ಹಿಂದೆ ಪ್ರಾರಂಭಗೊಂಡ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿಲ್ಲ. ಇದಕ್ಕೆ ಸರ್ಕಾರದ ಅಸಹಕಾರವೇ ಕಾರಣ ಎಂದು ಶಾಸಕ ಡಾ.ಎಚ್.ಡಿ.ರಂಗನಾಥ್ ಆರೋಪಿಸಿದರು.

    ಪುರಸಭೆ ವ್ಯಾಪ್ತಿಯ ಆರು ವಾರ್ಡ್‌ಗಳಲ್ಲಿ 40.8 ಲಕ್ಷ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಕೋಟೆ ಪ್ರದೇಶದ ಗರಡಿ ಮನೆ ಬಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕು ಅಭಿವೃದ್ಧಿ ವಿಚಾರದಲ್ಲಿ ಸರ್ಕಾರದಿಂದ ಸಹಕಾರ ಸಿಗುತ್ತಿಲ್ಲ, ಕರೊನಾ ಸಂದರ್ಭದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಒಂದು ನಯಾ ಪೈಸೆ ಬಿಡುಗಡೆ ಮಾಡಿಲ್ಲ, ಇದರಿಂದ ತಾಲೂಕಿನಲ್ಲಿ ಆಗಬೇಕಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ, ನೂತನ ಮುಖ್ಯಮಂತ್ರಿಗಳಿಂದ ಕ್ಷೇತ್ರದ ಅಭಿವೃದ್ಧಿಗೆ ಹೊಸ ಚೈತನ್ಯ ಬರಲಿದೆ ಎಂದು ಆಶಾ ಭಾವನೆ ಹೊಂದಿದ್ದೆ. ಆದರೆ ಯ್ಯವುದೇ ಲಕ್ಷಣಗಳು ಕಾಣುತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ರಂಗನಾಥ್, ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕಾಣಲು ಸಮಯ ಕೇಳಿದ್ದೇನೆ ಎಂದರು.

    ಖಾಸಗಿ ಬಸ್ ನಿಲ್ದಾಣ ಅಭಿವೃದ್ಧಿ : ಸಂಸದರು ಹಾಗೂ ಶಾಸಕರ ನಿಧಿಯಿಂದ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಖಾಸಗಿ ಬಸ್ ನಿಲ್ದಾಣ ಅಭಿವೃದ್ಧಿಗೆ ಚಿಂತನೆ ನಡೆಸಲಾಗಿದೆ. ಅಗತ್ಯವಿದ್ದರೇ ಸರ್ಕಾರ ಮಟ್ಟದಲ್ಲಿ ಚರ್ಚಿಸಿ ಮತ್ತಷ್ಟು ಅನುದಾನ ತಂದು ಹೈಟೆಕ್ ಖಾಸಗಿ ಬಸ್ ನಿಲ್ದಾಣ ಮಾಡುವುದ್ದಾಗಿ ತಿಳಿಸಿದರು.

    ನೀರಾವರಿಯಲ್ಲಿ ಮೋಸ : ಕಾವೇರಿ ಬೇಸಿನ್ ವ್ಯಾಪ್ತಿಯ ನೀರನ್ನು ಕೃಷ್ಣ ಬೇಸಿನ್ ವ್ಯಾಪ್ತಿಗೆ ಬರುವ ಶಿರಾ ತಾಲೂಕಿಗೆ ಹರಿಸಿ ತುಮಕೂರಿನ ಜನರಿಗೆ ಮೋಸ ಮಾಡಲಾಗಿದೆ. ಮೂಲ ನಕ್ಷೆ ಪ್ರಕಾರ ಹೇಮಾವತಿ ಕೊನೆ ಭಾಗದಲ್ಲಿ ಕುಣಿಗಲ್ ತಾಲೂಕಿಗೆ 3 ಟಿಎಂಸಿ ನೀರು ಹರಿಸಿ ಎಲ್ಲ ಕೆರೆಗಳನ್ನು ತುಂಬಿಸಬೇಕು. ಆದರೆ, ಆದು ಈವರೆಗೂ ಆಗಿಲ್ಲ. ಇದಕ್ಕೆ ಈವರೆಗೂ ಆಳಿದ ಈ ಭಾಗದ ಜನಪ್ರತಿನಿಧಿಗಳ ಹಾಗೂ ಜಿಲ್ಲಾಡಳಿತದ ವೈಫಲ್ಯವೇ ಕಾರಣವೆಂದು ಶಾಸಕ ಡಾ.ಎಚ್.ಡಿ.ರಂಗನಾಥ್ ಆರೋಪಿಸಿದರು.

    ಜನರು ಹಲವು ಭರವಸೆ ಇಟ್ಟುಕೊಂಡು ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಆದರೆ, ಜನರ ನಿರೀಕ್ಷೆಗೆ ತಕ್ಕಂತೆ ಸರ್ಕಾರ ಕೆಲಸ ಮಾಡುತ್ತಿಲ್ಲ. ಇದರಿಂದ ಬೇಸತ್ತ ಜನರು ಸರ್ಕಾರದ ಬದಲಾವಣೆ ಕೂಗು ಎದ್ದೀದೆ, ಇದು ಮುಂದಿನ ದಿನದಲ್ಲಿ ದೊಡ್ಡ ಮಟ್ಟದಲ್ಲಿ ಸರ್ಕಾರದ ಬದಲಾವಣೆಗಾಗಿ ಕೂಗು ಏಳಲಿದೆ.
    ಡಾ.ಎಚ್.ಡಿ.ರಂಗನಾಥ್, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts