More

    ಕನ್ನಡ ಭವನಕ್ಕೆ ಶೀಘ್ರ ನಿವೇಶನ

    ಭದ್ರಾವತಿ: ಕನ್ನಡ ಭವನ ನಿರ್ವಣಕ್ಕೆ ನಗರದಲ್ಲಿ ನಿವೇಶನ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸá-ತ್ತೇನೆ ಎಂದು ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು.

    ನಗರದ ಬಸವೇಶ್ವರ ಸಭಾ ಭವನದಲ್ಲಿ ತಾಲೂಕು ಕಸಾಪ ಹಾಗೂ ಶ್ರೀ ಬಸವೇಶ್ವರ ಧರ್ಮಸಂಸ್ಥೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ ವಿಷಯದಲ್ಲಿ 125 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಸಾಪ ಹಲವಾರು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕನ್ನಡ ಭಾಷೆ ಉಳಿಸಿ ಬೆಳೆಸುತ್ತಿದೆ ಎಂದರು.

    ಕಸಾಪ ಜಿಲ್ಲಾ ಉಪಾಧ್ಯಕ್ಷ ಎಚ್.ಎನ್.ಮಹಾರುದ್ರ ಮಾತನಾಡಿ, ಕನ್ನಡದಲ್ಲಿ 125 ಅಂಕಗಳಿಸುವುದು ಸುಲಭದ ಮಾತಲ್ಲ. ವಿದ್ಯಾರ್ಥಿಗಳಲ್ಲಿ ಹುಟ್ಟಿರುವ ಭಾಷಾಭಿಮಾನ ಹಾಗೂ ವಿಶೇಷ ಆಸಕ್ತಿಯಿಂದ ಓದಿರುವುದೇ ಇದಕ್ಕೆ ಕಾರಣ. ಅಂತಹ ವಿದ್ಯಾರ್ಥಿಗಳನ್ನು ಗೌರವಿಸುವುದು ಕರ್ತವ್ಯ ಎಂದು ಹೇಳಿದರು.

    ಕಸಪಾ ತಾಲೂಕು ಅಧ್ಯಕ್ಷ ಅಪೇಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡದಲ್ಲಿ 125 ಅಂಕಗಳಿಸಿದ 80ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಬಿಇಒ ಟಿ.ಎನ್.ಸೋಮಶೇಖರಯ್ಯ, ಪೌರಾಯುಕ್ತ ಮನೋಹರ್, ಧರ್ಮ ಸಂಸ್ಥೆ ಮುಖ್ಯಸ್ಥ ಶಿವಕುಮಾರ್, ನಾಸಿರ್ ಖಾನ್, ಬೇಲಿಮಲ್ಲೂರು ಎಂ.ನಾಗಪ್ಪ, ಡಾ. ವೀಣಾ ಭಟ್, ಬಿ.ಟಿ.ನಾಗರಾಜ್, ಜಗನ್ನಾಥ್, ಅರಳೀಹಳ್ಳಿ ಅಣ್ಣಪ್ಪ, ವೈ.ಕೆ.ಹನುಮಂತಯ್ಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts