More

    ಧರ್ಮದ ಆಧಾರದಲ್ಲಿ ದೇಶ ವಿಭಜಿಸಿದ ನೆಹರು

    ಎನ್.ಆರ್.ಪುರ: ಮಹಾತ್ಮ ಗಾಂಧೀಜಿ ಬೇಡ ಎಂದರೂ ಧರ್ಮದ ಆಧಾರದ ಮೇಲೆ ಜವಾಹರ್​ಲಾಲ್ ನೆಹರು ದೇಶವನ್ನು ಇಬ್ಭಾಗ ಮಾಡಿದರು ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದರು.

    ವಾಟರ್ ಟ್ಯಾಂಕ್ ಸರ್ಕಲ್ ಸಮೀಪ ಶನಿವಾರ ಬಿಜೆಪಿ ಏರ್ಪಡಿಸಿದ್ದ ಪೌರತ್ವ ಕಾಯ್ದೆ ತಿದ್ದುಪಡಿ ಕಾಯ್ದೆ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಪೌರತ್ವ ಕಾಯ್ದೆಯಿಂದ ದೇಶದ ಯಾರ ಪೌರತ್ವವೂ ರದ್ದಾಗುವುದಿಲ್ಲ. ಪಾಕಿಸ್ತಾನ, ಬಾಂಗ್ಲಾ, ಆಫ್ಘಾನಿಸ್ತಾನ ದೇಶಗಳಲ್ಲಿ ಅಲ್ಪಸಂಖ್ಯಾತರಾದ ಹಿಂದು, ಜೈನರು, ಪಾರ್ಸಿ, ಸಿಖ್ ಸೇರಿದಂತೆ 6 ಧರ್ಮದವರು ಈ ದೇಶಕ್ಕೆ ವಲಸೆ ಬಂದಿದ್ದರು. ಅವರಿಗೆ ಪೌರತ್ವ ನೀಡವುದನ್ನು ಸರಳೀಕರಿಸಲು ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ ಎಂದರು.

    ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ, ಸ್ವಾತಂತ್ರ್ಯ ಬಂದು ದೇಶ ವಿಭಜನೆಯಾದಾಗ ಲೆಹಾನ್ ಒಪ್ಪಂದದ ಪ್ರಕಾರ ಇಲ್ಲಿನ ಮುಸ್ಲಿಮರನ್ನು ಭಾರತ ಗೌರವಯುತವಾಗಿಯೂ, ಪಾಕಿಸ್ತಾನದಲ್ಲಿ ಹಿಂದುಗಳನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕಾಗಿತ್ತು. ಆದರೆ ಪಾಕಿಸ್ತಾನ ಒಪ್ಪಂದ ಪಾಲಿಸಿಲ್ಲ. ಪೌರತ್ವ ಕಾಯ್ದೆಯಿಂದ ಇಲ್ಲಿನ ಮುಸ್ಲಿಮರಿಗೆ ತೊಂದರೆ ಇಲ್ಲ ಎಂದರು.

    ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ಮಾತನಾಡಿ, ಸಿಎಎ ಹಾಗೂ ಎನ್​ಆರ್​ಸಿ ಕಾನೂನಿನ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಮುಸ್ಲಿಮರು ಈ ಕಾಯ್ದೆ ಕುರಿತು ತಪ್ಪು ತಿಳಿವಳಿಕೆ ಬಿಟ್ಟು ದೇಶದ ಮುಖ್ಯವಾಹಿನಿಗೆ ಬರಬೇಕು. ಬಿಜೆಪಿ ಕಾರ್ಯಕರ್ತರು ಮುಸ್ಲಿಮರ ಮನೆಗೆ ಭೇಟಿ ನೀಡಿ ಪೌರತ್ವ ಕಾಯ್ದೆ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts