More

    ಮೂರನೇ ಅಲೆ ತಡೆಯಲೆಂದು 100 ಕೋಟಿ ರೂ. ಮಂಜೂರು ಮಾಡಿದ ತಮಿಳುನಾಡು ಮುಖ್ಯಮಂತ್ರಿ

    ಚೆನ್ನೈ: ಕರೊನಾದ ಎರಡನೇ ಅಲೆಗೆ ತತ್ತರಿಸಿರುವ ದೇಶ ಇನ್ನೂ ಸುಧಾರಿಸಿಕೊಳ್ಳುತ್ತಿದೆ. ಆದರೆ ತಮಿಳುನಾಡು ಮಾತ್ರ ಎರಡನೇ ಅಲೆ ಪೂರೈಸಿ ಮೂರನೇ ಅಲೆಯನ್ನು ತಡೆಯಲೂ ಸಕಲ ಸಿದ್ಧತೆ ಮಾಡಿಕೊಳ್ಳಲಾರಂಭಿಸಿದೆ. ರಾಜ್ಯದಲ್ಲಿ ಈಗಾಗಲೇ 100 ಕೋಟಿ ರೂಪಾಯಿಯನ್ನು ಕರೊನಾ ಮೂರನೇ ಅಲೆ ಬಾರದಂತೆ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲೆಂದೇ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮಂಜೂರು ಮಾಡಿದ್ದಾರೆ.

    ಮುಖ್ಯಮಂತ್ರಿ ಸಾರ್ವಜನಿಕ ಪರಿಹಾರ ನಿಧಿ (ಸಿಎಂಪಿಆರ್​ಎಫ್​)ಯಿಂದ 100 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಸಾಂಕ್ರಾಮಿಕ ರೋಗ ತಡೆಯುವ ನಿಟ್ಟಿನಲ್ಲಿ ಈವರೆಗೆ ಸಿಎಂಪಿಆರ್​ಎಫ್​ನಲ್ಲಿ ಸುಮಾರು 353 ಕೋಟಿ ರೂಪಾಯಿ ಹಣವನ್ನು ಸಂಗ್ರಹ ಮಾಡಲಾಗಿದೆ. ಅದರಲ್ಲಿ ಈಗಾಗಲೇ 41.40 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲಾಗಿದ್ದು, ಆಕ್ಸಿಜನ್ ಸಿಲಿಂಡರ್​ಗಳು, ಕಾನ್ಸನ್ಟ್ರೇಟರ್​​ಗಳು ಸೇರಿದಂತೆ ಅನೇಕ ವೈದ್ಯಕೀಯ ಉಪಕರಣಗಳನ್ನು ಖರೀದಿ ಮಾಡಲಾಗಿದೆ. ಅದರ ಜತೆಯಲ್ಲಿ ಬ್ಲಾಕ್​ ಫಂಗಸ್​ ರೋಗಿಗಳ ಚಿಕಿತ್ಸೆಗೆ ಆಂಫೋಟೆರಿಸಿನ್ ಹಾಗೂ ಜೀವ ರಕ್ಷಕ ಔಷಧಗಳನ್ನು ಖರೀದಿಸಲೆಂದು 25 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ರೆಮ್ಡೆಸಿವಿರ್ ಹಾಗೂ ಆಕ್ಸಿಜನ್ ಖರೀದಿಗೆಂದು 50 ಕೋಟಿ ರೂ ಬಿಡುಗಡೆ ಮಾಡಲಾಗಿತ್ತು. ಅದಷ್ಟೇ ಅಲ್ಲದೆ ಆರ್​ಟಿಪಿಸಿಆರ್ ಪರೀಕ್ಷೆಗೂ ಈ ನಿಧಿಯಿಂದಲೇ ಹಣ ಬಿಡುಗಡೆ ಮಾಡಲಾಗಿತ್ತು.

    ಇದೀಗ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ನೀಗಿಸಲು ಹಾಗೂ ಮೂರನೇ ಅಲೆ ಬಾರದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ 100 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. (ಏಜೆನ್ಸೀಸ್)

    ಸತ್ತ ಬಾಯ್​ಫ್ರೆಂಡ್ ದೇಹದ ವೀರ್ಯಾಣು ಬಳಸಿ ಗರ್ಭಿಣಿ ಆದ ಯುವತಿ! ಇನ್​ಸ್ಟಾಗ್ರಾಂನಲ್ಲಿ ಫೋಟೋ ಶೇರ್​ ಮಾಡಿಕೊಂಡ ಪ್ರೇಮಿ

    ಹೆರಿಗೆಯಾದ ಅಕ್ಕನನ್ನು ನೋಡಲು ಹೋದ ತಂಗಿಯನ್ನೇ ರೇಪ್ ಮಾಡಿದ ಭಾವ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts