More

    ಮಿಟ್ಲಕೋಡ ಗ್ರಾಮದಲ್ಲಿ ಮಿತಿಮೀರಿದ ನೊಣಗಳ ಹಾವಳಿ, ಗ್ರಾಮಸ್ಥರಲ್ಲಿ ರೋಗದ ಭೀತಿ

    ಹನುಮಸಾಗರ: ಸಮೀಪದ ಮಿಟ್ಲಕೋಡ ಗ್ರಾಮದಲ್ಲಿ ನೊಣಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರಿಗೆ ಕಾಯಿಲೆಗಳ ಭೀತಿ ಎದುರುರಾದೆ. ಮನೆ ಮತ್ತು ಹೊಲಗಳಲ್ಲಿ ನೊಣಗಳ ಕಾಟ ಹೆಚ್ಚಾಗಿದೆ. ನಿಲೋಗಲ್ ಗ್ರಾಮದಿಂದ ಗುಡೂರಗೆ ಹೋಗುವ ಮಾರ್ಗ ಮಧ್ಯದಲ್ಲಿ ಆರು ಕೋಳಿ ಫಾರಂಗಳು ಇರುವುದರಿಂದಾಗಿ ನೊಣಗಳ ಉಪಟಳ ಹೆಚ್ಚಿದೆ.

    ಮನೆಗಳಲ್ಲಿನ ಊಟದ ತಟ್ಟೆ, ನೀರಿನ ಬಿಂದಿಗೆಗಳಿಗೆ ನೊಣಗಳು ಬಿಳುತ್ತಿವೆ. ಇದರಿಂದಾಗಿ ಮಾನಸಿಕ ನೆಮ್ಮದಿ ಹಾಳಗಿದೆ. ನೊಣಗಳು ಊಟದ ತಟ್ಟೆಯಲ್ಲಿ ಕುಳಿತುಕೊಳ್ಳುವುದರಿಂದ ನಮಗೆ ಕಾಯಿಲೆ ಭೀತಿ ಎದುರುರಾಗಿದೆ. ಹೊಲದ ಬೆಳೆಗಳ ತುಂಬಾ ನೊಣಗಳು ಕುಳಿತುಕೊಳುವುದರಿಂದ ಬೆಳೆಗಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ನೊಣಗಳು ಹೆಚ್ಚಾಗಲು ಕಾರಣವಾದ ಕೋಳಿ ಫಾರಂಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಿ, ನೊಣಗಳ ಹಾವಳಿ ನಿಯಂತ್ರಿಸಬೇಕೆಂದು ಗ್ರಾಮಸ್ಥರಾದ ಶಂಭು ಹಿರೇಮಠ, ಕೂಡಲೆಪ್ಪ ಅಂಗಡಿ, ರಂಗಣ್ಣ ಬಂಡಾರಿ, ಶಿವಪ್ಪ ಬಂಡಾರಿ, ಪ್ರವೀಣ ಯಲಿಗಾರ, ದೇವಪ್ಪ ಬಂಡಾರಿ, ಬಸವರಾಜ ಮಂಡಗಿ, ಪಕಿರಪ್ಪ ಮಂಡಗಿ, ಚಂದ್ರಶೇಖರ ಯಲಿಗಾರ, ಗುರುರಾಜ್ ಅಂಗಡಿ, ಕಾಮಣ್ಣ ಕಾಮಣ್ಣವರ, ಶರಣಪ್ಪ ಅಂಗಡಿ ಒತ್ತಾಯಿಸಿದ್ದಾರೆ.

    ನೊಣಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಗ್ರಾಮಸ್ಥರು ಗಮನಕ್ಕೆ ತಂದಿದ್ದಾರೆ. ಕೋಳಿ ಫಾರಂ ವಿರುದ್ಧ ಕ್ರಮ ಕೈಗೊಳುವಂತೆ ಸಾರ್ವಜನಿಕರು ಗ್ರಾಪಂಗೆ ಮನವಿ ನೀಡಬೇಕು. ನಂತರ ಗ್ರಾಪಂನಿಂದ ಕೋಳಿ ಫಾರಂಗಳಿಗೆ ನೋಟಿಸ್ ನೀಡಲಾಗುವುದು.
    | ಬಸವರಾಜ ಬಳಗೋಡ, ಪಿಡಿಒ ತುಗ್ಗಲಡೋಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts