More

  ಮನೆಗೆ ಮರಳುವಾಗ ನಾಪತ್ತೆಯಾಗಿದ್ದ ಭಾರತೀಯ ಮೂಲದ ಮಹಿಳೆ ತನ್ನ ಕಾರಿನ ಟ್ರಂಕ್​ನಲ್ಲೇ ಶವವಾಗಿ ಪತ್ತೆ

  ವಾಷಿಂಗ್ಟನ್​: ಕಳೆದ ತಿಂಗಳು ಮನೆಗೆ ಮರಳುತ್ತಿದ್ದವಳು ನಾಪತ್ತೆಯಾಗಿದ್ದಾಳೆ ಎಂದು ಕುಟುಂಬದವರು ದೂರು ದಾಖಲಿಸಿದ್ದ ಭಾರತೀಯ ಮೂಲದ ಅಮೆರಿಕ ಮಹಿಳೆ ತನ್ನ ಕಾರಿನ ಟ್ರಂಕ್​ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.

  ಸುರೀಲಾ ಡಾಬಾವಾಲ(34) ಮೃತ ಮಹಿಳೆ. ಷಿಕಾಗೋದ ಲಯೋಲಾ ವಿಶ್ವವಿದ್ಯಾಲಯದಲ್ಲಿ ಎಬಿಎಂ ವಿದ್ಯಾರ್ಥಿನಿಯಾಗಿದ್ದ ಸುರೀಲಾ, ಕಳೆದ ಡಿಸೆಂಬರ್​ 30, 2019ರಂದು ನಾಪತ್ತೆಯಾಗಿದ್ದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

  ಹಲವು ದಿನಗಳವರೆಗೆ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ ಬಳಿಕ ತನ್ನ ಕಾರಿನ ಟ್ರಂಕ್​ ಒಳಗೆ ಬ್ಲ್ಯಾಂಕೆಟ್​ನಲ್ಲಿ ಸುತ್ತಿದ ರೀತಿಯಲ್ಲಿ ಸುರೀಲಾ ಶವ ಸೋಮವಾರ ಷಿಕಾಗೋದ ವೆಸ್ಟ್​ ಗ್ಯಾರಿಫೀಲ್ಡ್​ ಪಾರ್ಕ್​ ಬಳಿ ಪತ್ತೆಯಾಗಿದೆ.

  ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ಅದರ ವರದಿಗಾಗಿ ಅಮೆರಿಕ ಪೊಲೀಸರು ಎದುರು ನೋಡುತ್ತಿದ್ದಾರೆ. ಆದರೆ, ಪ್ರಕರಣ ಸಂಬಂಧ ಈವರೆಗೂ ಯಾರನ್ನೂ ಬಂಧಿಸಿಲ್ಲ.

  ಸರೀಲಾ, ಶಾಂಬರ್ಗ್ ಮೂಲದ ಅಶರಾಫ್​ ದಾಬಾವಾಲ ಎಂಬುವರ ಮಗಳು. ಅಶರಾಫ್​ ದಾಬಾವಾಲ ಶಾಂಬರ್ಗ್​ ಏರಿಯಾದಲ್ಲಿ ಗೌರವಾನ್ವಿತ ವೈದ್ಯರಾಗಿದ್ದಾರೆ. ಇವರು ಗುಜರಾತ್​ ಮೂಲದವರಾಗಿದ್ದಾರೆ.

  ಸುರೀಲಾ ಕಾಣೆಯಾದ ದಿನದಿಂದ ಆಕೆಯ ಬಗ್ಗೆ ಮಾಹಿತಿ ನೀಡಿದವರಿಗೆ 10 ಸಾವಿರ ಡಾಲರ್​(7,10,837 ರೂ.) ನೀಡುವುದಾಗಿ ಕುಟುಂಬ ಘೋಷಿಸಿತ್ತು. ಇದೀಗ ಸುರೀಲಾ ಶವವಾಗಿ ಪತ್ತೆಯಾಗಿರುವುದು ಕುಟುಂಬಕ್ಕೆ ಶಾಕ್​ ನೀಡಿದೆ. ತನಿಖೆ ನಡೆಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts